CHITRAUDRGA NEWS | 12 APRIL 2026
ಹೊಸದುರ್ಗ: ಆದರ್ಶಗಳು ಭಾಷಣಕಲ್ಲ ಬದುಕಿನ ಅನುಕರಣೆಗೆ ಎಂದು ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಹಾಗೂ ಕಾನೂನು ಅರಿವು ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ.
ಇದನ್ನೂ ಓದಿ: ಜಿಲ್ಲಾ ಖಜಾನೆ ಇಲಾಖೆ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ
ಕಾನೂನನ್ನು ಸರ್ವರೂ ಪಾಲಿಸುವುದು ಮತ್ತು ಪಾಲಿಸುವಂತೆ ಪ್ರೇರೇಪಿಸುವುದು ಅವಶ್ಯವಾಗಿದೆ. ಗ್ರಾಮೀಣ ಜನರಲ್ಲಿ ಅರಿವಿನ ಕೊರತೆಯಿಂದ ಜಮೀನಿನ ವ್ಯಾಜ್ಯ ವಾಹನಗಳ ಸಮಸ್ಯೆ ವಿವಾಹಗಳ ಸಮಸ್ಯೆ ಹೆಚ್ಚಾಗುತ್ತಿದ್ದು, ಸಂಘಟನೆಗಳು ಮತ್ತು ಸರ್ಕಾರಗಳು ಕಾನೂನಿನ ಅರಿವನ್ನು ಮೂಡಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಸಮಾಜದ ನಾಲ್ಕು ಅಂಗಗಳಲ್ಲಿ ಮುಖ್ಯ ಅಂಗವಾದ ನ್ಯಾಯಾಂಗದ ಬಗ್ಗೆ ಇರುವ ಗೌರವವನ್ನು ಹೆಚ್ಚಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಸಂವಿಧಾನದ ಆಶಯದಂತೆ ಬದುಕನ್ನು ಕಟ್ಟಿಕೊಳ್ಳುವ ಮತ್ತು ಬದುಕಲು ಅವಕಾಶ ಮಾಡಿಕೊಡುವ ಕರ್ತವ್ಯ ಪ್ರತಿಯೊಬ್ಬ ನಾಗರಿಕನ ಆಧ್ಯ ಕರ್ತವ್ಯವಾಗಬೇಕು.
ಕಾನೂನಿನಲ್ಲಿ ಕರುಣೆಗೆ ಅವಕಾಶವಿಲ್ಲ ಹಾಗಾಗಿ ಗೊತ್ತಿಲ್ಲದೇ ಇರುವ ವಿಷಯಗಳನ್ನು ಅಧ್ಯಯನದ ಮೂಲಕ ಚರ್ಚೆಗಳ ಮೂಲಕ ತಿಳಿದುಕೊಳ್ಳುವುದು ನಾಗರಿಕನ ಜವಾಬ್ದಾರಿ ಮತ್ತು ಕರ್ತವ್ಯ. ಇತ್ತೀಚಿಗೆ ವಾಹನಗಳಿಗೆ (ವಿಮೆ) ಇನ್ಸೂರೆನ್ಸ್ ಮಾಡಿಸದೆ ಇರುವುದು ಅಥವಾ ಚಾಲನಾ ಪರವಾನಿಗೆ ಇಲ್ಲದೆ ಬೇರೆಯವರಿಗೆ ವಾಹನ ಕೊಟ್ಟು ಸಮಸ್ಯೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.
ಇದನ್ನೂ ಓದಿ: ಪೊಲೀಸ್ ಎಂದು ಹೇಳಿ ಮೊಬೈಲ್ ಕದ್ದಿದ್ದ ವ್ಯಕ್ತಿ ನ್ಯಾಯಾಂಗ ಬಂಧನಕ್ಕೆ
ವಾಹನ ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚುತ್ತಿವೆ ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯ ವಿಮೆ, ವಾಹನ ವಿಮೆ ಮಾಡಿಸಿಕೊಳ್ಳುವ ಮೂಲಕ ಮುಂದಾಗುವ ಅಪಾಯಗಳನ್ನು ತಪ್ಪಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯವಾದಿ ಎಸ್. ಲೋಕೇಶ್, ಗುರುಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕಾನೂನಿನ ಜಾಗೃತಿ ಮೂಡಿಸುತ್ತಿರುವುದು ಸಂತೋಷದ ಸಂಗತಿ. ಧರ್ಮ ಮತ್ತು ಕಾನೂನು ಎರಡನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾಯಕವನ್ನು ಶಾಂತವೀರ ಶ್ರೀಗಳು ಮಾಡುತ್ತಿರುವುದು ಶ್ಲಾಘನೀಯ. ಮಠಗಳು ಎಂದರೆ ಕೇವಲ ಧಾರ್ಮಿಕತೆ, ಬೋಧನೆ ಜೊತೆಗೆ ಕಾನೂನಿನ ಸೌಹಾರ್ದತೆಯ ಪಾಠವನ್ನು ಬಿತ್ತುವುದು ಈಗ ಪ್ರಸ್ತುತವಾಗಿದೆ ಎಂದರು.
ನ್ಯಾಯವಾದಿ ಹನುಮಂತಪ್ಪ ಮಾತನಾಡಿ, ವಾಹನಗಳನ್ನು ಬೇರೆಯವರಿಗೆ ಕೊಡುವ ಮುನ್ನ ಜಾಗೃತಿ ವಹಿಸಿ. ಅಪರಾಧ ಆಗುವ ಮುನ್ನ ಅಪರಾಧದ ಬಗ್ಗೆ ಜಾಗೃತವಿರಲಿ. ಕುಂಚಿಟಿಗ ಮಹಾಸಂಸ್ಥಾನ ಮಠ ಕೇವಲ ಕುಂಚಿಟಿಗರಿಗೆ ಸೀಮಿತವಾಗದೆ ಸರ್ವ ಸಮಾಜದ ಮಠವಾಗಿ, ಸರ್ವ ಜನಾಂಗದ ಹಿತ ಬಯಸುವ ಶ್ರೇಷ್ಠ ಕಾಯಕ ಮಾಡುತ್ತಿರುವುದು ನಮಗೆಲ್ಲ ಗೌರವ ಹೆಚ್ಚಿಸಿದೆ.
ಮಠದಿಂದ ಘಠ ಬೆಳೆಯುವುದು ಸಾಮಾನ್ಯವಾಗಿರುವ ಈ ಕಾಲದಲ್ಲಿ ತಮ್ಮ ಘಠದ ಮೂಲಕ ಮಠಕ್ಕೆ ಗೌರವ ತಂದ ಶ್ರೇಷ್ಠ ಗುರುಗಳು ನಮ್ಮ ಶಾಂತವೀರ ಗುರುಗಳು ಎಂಬ ಹೆಮ್ಮೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
ನ್ಯಾಯವಾದಿ ರಂಗಪ್ಪ ಉಪನ್ಯಾಸ ನೀಡಿದರು. ಲೋಕೇಶ್ ಹುಣವಿನಡು, ಮಾರುತಿ ಎನ್.ಜಿ.ಹಳ್ಳಿ, ಶಂಕ್ರಪ್ಪ ಬೊಚೆನಹಳ್ಳಿ, ಸಂತೋಷ್ ಹುಣಸೇಕಟ್ಟೆ, ಗಂಗಾಧರ್ ಹೊನ್ನೇನಹಳ್ಳಿ, ಬೈರೇಶ್ ಗುಡ್ಡದ ನೇರಲಕೆರೆ, ಹೇಮಾ ಬೋಚೇನಹಳ್ಳಿ ಅವರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕುಂಚಿಟಿಗ ಸಮಾಜದ ಪದಾಧಿಕಾರಿಗಳು, ಸಂಗಮೇಶ್ವರ ಯುವ ವೇದಿಕೆಯ ಪದಾಧಿಕಾರಿಗಳು, ಸಂಗಮೇಶ್ವರ ನೌಕರರ ಸಂಘದ ಪದಾಧಿಕಾರಿಗಳು, ಸಂಗಮೇಶ್ವರ ಮಹಿಳಾ ಸಂಘದ ಪದಾಧಿಕಾರಿಗಳು, ಸಂಗಮೇಶ್ವರ ವಕೀಲರ ಸಂಘದ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

