CHITRADURGA NEWS | 17 OCTOBER 2026
ಚಿತ್ರದುರ್ಗ: ಮುರುಘಾ ಮಠದ ಅನುಭವ ಮಂಟಪದಲ್ಲಿ ಸಾವಿರಾರು ಕಂಠಗಳಿಂದ ಏಕ ಕಾಲದಲ್ಲಿ ಹೊರಹೊಮ್ಮಿದ ವಚನಗಳು ಝೇಂಕಾರವನ್ನೇ ಸೃಷ್ಟಿಸಿದವು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರಿಂದ ಅರ್ಜಿ ಆಹ್ವಾನ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಏಕಕಾಲಕ್ಕೆ 10000 ಭಕ್ತರಿಂದ ವಚನ ಝೇಂಕಾರ ಕಾರ್ಯಕ್ರಮ ಅಭೂತಪೂರ್ವ ಕ್ಷಣವಾಗಿ ಹೊರಹೊಮ್ಮಿತು.
ವಚನ ಝೇಂಕಾರ ಕಾರ್ಯಕ್ರಮಕ್ಕಾಗಿ ಮಠದ ವಚನ ಗಾಯಕ ತೋಟಪ್ಪ ಉತ್ತಂಗಿ ಹಾಗೂ ಉಮೇಶ್ ಪತ್ತಾರ್ ನೇತೃತ್ವದಲ್ಲಿ ಕಳೆದ 15 ದಿನಗಳಿಂದ ಸಾವಿರಾರು ಜನರಿಗೆ ತರಬೇತಿ ನೀಡಲಾಗಿತ್ತು.
ಪುರುಷರು ಬಳಿ ಪಂಚೆ, ಅಂಗಿ, ಶಲ್ಯ ಧರಿಸಿ ಬಂದಿದ್ದರೆ, ಮಹಿಳೆಯರು ಇಳಕಲ್ ಸೀರೆ ಉಟ್ಟು, ಹಣೆಗೆ ವಿಭೂತಿ ಧರಿಸಿ ಆಗಮಿಸಿ ಕಲ್ಯಾಣವನ್ನೇ ಸೃಷ್ಟಿಸಿದ್ದರು.
ಸಿ.ಅಶ್ವಥ್ ರಾಗ ಸಂಯೋಜನೆಯ ʼಅಯ್ಯಾ ನೀನು ನಿರಾಕಾರವಾದಲ್ಲಿ, ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ಲೇಸೆನಿಸಿಕೊಂಡು ಐದು ದಿನ ಬದುಕಿದರೇನು, ನೀನೊಲಿದರೆ ಕೊರಡು ಕೊನರುವುದಯ್ಯ, ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ, ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು, ನುಡಿದರೆ ಮುತ್ತಿನ ಹಾರದಂತಿರಬೇಕು, ನಿಮ್ಮ ಶರಣರಿಗೆ ಶರಣೆಂಬುದು ಕರುಣಿಸು ಕೂಡಲ ಸಂಗಮದೇವ ಸೇರಿದಂತೆ ಒಟ್ಟು 36 ವಚನಗಳನ್ನು ಸಾವಿರಾರು ಜನ ತಾಳ, ರಾಗಬದ್ಧವಾಗಿ ಹಾಡಿದರು.
ಇದನ್ನೂ ಓದಿ: ಸಾಣೇಹಳ್ಳಿ | ಶ್ರೀ ಶಿವಕುಮಾರ ಪ್ರಶಸ್ತಿ ಪ್ರಕಟ | ಬಿ.ಆರ್.ಪೊಲೀಸ್ ಪಾಟೀಲ ಆಯ್ಕೆ
ವೇದಿಕೆಯಲ್ಲಿ ಕುಳಿತಿದ್ದ ಮಠಾಧೀಶರು, ಗಣ್ಯರು ವಚನ ಗಾಯನಕ್ಕೆ ತಲೆದೂಗಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೆಲ ವಚನಗಳನ್ನು ಗುನುಗಿದರು. ಸುಮಾರು ಒಂದೂವರೆ ಗಂಟೆ ಕಾಲ ಇಡೀ ಅನುಭವ ಮಂಟಪ ಸಭಾಂಗಣ ವಚನಗಳ ಗಾಯನದ ಮಳೆಯಲ್ಲಿ ಮಿಂದು ಹೋಯಿತು.
ಶಿವಮೊಗ್ಗದಲ್ಲಿ ಶ್ರೀ ಮರುಳಸಿದ್ದ ಸ್ವಾಮೀಜಿ ಮಾಡಿದ ಪ್ರಯೋಗ ದಾವಣಗೆರೆಗೆ ಬಂದು ಅಲ್ಲಿಂದ ಚಿತ್ರದುರ್ಗದ ಮುರುಘಾ ಮಠದಲ್ಲಿ ಅನುರಣಿಸಿದೆ. ಕಾವೇರಿ ತೀರ್ಥೋದ್ಭವವಾಗಿ ಮುಂದೆ ಹರಿದಂತೆ ಶಿವಮೊಗ್ಗದಲ್ಲಿ ನಡೆದ ವಚನೋದ್ಭವ ಇಂದು ಚಿತ್ರದುರ್ಗದವರೆಗೆ ಹರಿದು ಬಂದಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

