Connect with us

    ಕಡಲೆ ಬೆಳೆಗೆ ರೋಗ | ಹತೋಟಿಗೆ ಕೃಷಿ ಇಲಾಖೆ ತಜ್ಞರ ಸಲಹೆ

    ಕಡಲೆ ಬೆಳೆ

    ಮುಖ್ಯ ಸುದ್ದಿ

    ಕಡಲೆ ಬೆಳೆಗೆ ರೋಗ | ಹತೋಟಿಗೆ ಕೃಷಿ ಇಲಾಖೆ ತಜ್ಞರ ಸಲಹೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 19 JANUARY 2024

    ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಗುಡ್ಡದರಂಗವ್ವನಹಳ್ಳಿ ಗ್ರಾಮಕ್ಕೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ರೈತ ಸಂಜೀವಿನಿ ವಾಹನದ ತಜ್ಞರ ತಂಡ ಭೇಟಿ ನೀಡಿ ಕಡಲೆ ಬೆಳೆಯನ್ನು ಪರೀಕ್ಷಿಸಿದಾಗ ಆಸ್ಕೋ ಕೈಟಾ ಅಂಗಮಾರಿ ರೋಗ ಪತ್ತೆಯಾಗಿದೆ.

    ಜಿಲ್ಲೆಯಲ್ಲಿ ಪ್ರಸ್ತುತ ಕಡಲೆ ಬೆಳೆ ಹೂವಾಡುವ ಹಂತದಲ್ಲಿದೆ. ಈ ಹಂತದಲ್ಲಿ ಕಡಲೆ ಬೆಳೆಗೆ ಆಸ್ಕೋ ಕೈಟಾ ಅಂಗಮಾರಿ ರೋಗವು ಗುಡ್ಡದ ರಂಗವ್ವನಹಳ್ಳಿ ಗ್ರಾಮ, ಸುತ್ತಮುತ್ತ ಪ್ರದೇಶದಲ್ಲಿ ಹಾಗೂ ಕಡಲೆ ಬೆಳೆದಂತಹ ಚಿತ್ರದುರ್ಗ ತಾಲ್ಲೂಕಿನಲ್ಲಿ ಕೂಡ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ.

    ಇದನ್ನೂ ಓದಿ: ರುಡ್‍ಸೆಟ್ ಸಂಸ್ಥೆಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ

    ಈ ಹಿನ್ನೆಲೆಯಲ್ಲಿ ಆಸ್ಕೋ ಕೈಟಾ ಅಂಗಮಾರಿ ರೋಗದ ಹತೋಟಿಗೆ ಮ್ಯಾಂಕೋಜೆಬ್ 2 ಗ್ರಾಂ ಪ್ರತಿ ಲೀಟರ್‍ಗೆ ಅಥವಾ ಸಾಫ್ 2 ಗ್ರಾಂ ಪ್ರತಿ ಲೀಟರ್‍ಗೆ ಅಥವಾ ಕಾರ್ಬನ್‍ಡೈಜಿಯಂ 2 ಗ್ರಾಂ ಪ್ರತಿ ಲೀಟರ್‍ಗೆ ಬೆರೆಸಿ ಸಂಪಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕರು (ವಿಷಯ ತಜ್ಞರು) ರೈತರಿಗೆ ಸಲಹೆ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top