CHITRAUDRGA NEWS | 29 MARCH 2026
ಹೊಸದುರ್ಗ: ಬಸವಾದಿ ಶರಣರ ವಚನಗಳು ಮತ್ತು ಸಂವಿಧಾನದ ಆಶಯದಂತೆ ಕಳೆದ 28 ವರ್ಷಗಳಿಂದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ಶ್ರೀಮಠ ಇಲ್ಲಿಯವರೆಗೂ 132 ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದು ಕುಂಚಿಟಿಗ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರುಗಳಾದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಭೂಮಿ ಇರುವವರೆಗೂ ರಂಗಭೂಮಿ ಶಾಶ್ವತ
ಪಟ್ಟಣದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಹೊಸದುರ್ಗ ತಾಲ್ಲೂಕಿನ ಹುಲೇನಹಳ್ಳಿ ಗ್ರಾಮದ ಕುಂಚಿಟಿಗ ಸಮಾಜದ ವರ ರಂಗನಾಥ ಹಾಗೂ ಹೊಸದುರ್ಗ ಪಟ್ಟಣದ ಭೋವಿ ಸಮಾಜದ ವಧು ನಂದಿನಿರವರಿಗೆ ಲಿಂಗ ಸಂಸ್ಕಾರ, ದೀಕ್ಷೆ ನೀಡಿ ಮಾತನಾಡಿದರು.
ಹೆಣ್ಣು-ಗಂಡು ಒಂದಾದರೆ, ಯಾವುದೇ ಜಾತಿ-ಧರ್ಮ ಅಡ್ಡ ಬರಬಾರದು. ಅದನ್ನೇ ವಚನ ಧರ್ಮ ಮತ್ತು ಸಂವಿಧಾನ ಧರ್ಮ ಹೇಳಿದ್ದು. ನಾವು ಪೀಠ ಅಲಂಕರಿಸಿದಾಗಿನಿಂದಲೂ ಅಂತರ್ ಧರ್ಮ ಮತ್ತು ಅಂತರ್ಜಾತಿ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಅಂತರ್ಜಾತಿ ವಿವಾಹಗಳು ಸಮಾಜದಲ್ಲಿನ ಜಾತಿ ಮತ್ತು ದ್ವೇಷ ಕಡಿಮೆ ಮಾಡಲು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಹಾಗೂ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಸಹಾಯ ಮಾಡುತ್ತವೆ ಎಂದರು.
ಶುಕ್ರವಾರ ಕುಂಚಿಟಿಗ ಸಮಾಜದ ವರ, ನಾಯಕ ಸಮಾಜದ ವಧುವಿಗೆ ಶನಿವಾರ ಕುಂಚಿಟಿಗ ಸಮಾಜದ ವರ, ಭೋವಿ ಸಮಾಜದ ವಧುವಿಗೆ ದೀಕ್ಷಾ ಸಂಸ್ಕಾರ ನೀಡಲಾಗಿದೆ. ಜಾತ್ಯಾತೀತ ತತ್ವ ಮತ್ತು ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳೋಣ. ಹೆಣ್ಣು-ಗಂಡಿನ ಅನುಪಾತ ಕಡಿಮೆಯಾಗಬೇಕಾದರೆ, ಜಾತಿ-ಧರ್ಮ ಅಡ್ಡ ಬಾರದಂತೆ ವಿವಾಹವಾಗಬೇಕಿದೆ. ವಿವಾಹವಾದ ನಂತರ ಸತಿಪತಿಗಳು ಆಚಾರ-ವಿಚಾರಗಳಿಗೆ ಬದ್ಧರಾಗಿ ನಡೆದಾಗ, ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದವನಿಗೆ ಜೈಲು ಶಿಕ್ಷೆ
ಸಮಾನತೆ ಮತ್ತು ಭಾತೃತ್ವವನ್ನು ಸಾರುವ ತತ್ವವನ್ನೇ ಅನುಸರಿಸಿಕೊಂಡಿರುವ ಕುಂಚಿಟಿಗ ಮಹಾಸಂಸ್ಥಾನ ಮಠ ಕಳೆದ 28 ವರ್ಷಗಳಿಂದ ಜಾತಿ ನಿರ್ಮೂಲನೆ. ಮೌಡ್ಯ. ಕಂದಾಚಾರ. ದುರಭ್ಯಾಸ. ದುರುಗುಣಗಳನ್ನು. ದೂರ ಮಾಡುವ ಕಾಯಕ ನಿರಂತರ ಸಾಗಿದೆ ಕೇವಲ ಆಶೀರ್ವಚನಕ್ಕೆ ಭಾಷಣಕ್ಕೆ ಸೀಮಿತವಾಗದೆ ಸರ್ವ ಜನಾಂಗದೊಂದಿಗೆ ಹಾಗೂ ಸರ್ವ ಜನಾಂಗದ ಮಠಗಳೊಂದಿಗೆ ಕುಂಚಿಟಿಗ ಮಹಾಸಂಸ್ಥಾನ ಮಠ ಸಹೋದರತೆ ಸಹ ಬಾಳ್ವೆಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದೆ ದೊಡ್ಡ ದೊಡ್ಡ ಆಶೀರ್ವಚನ ನೀಡುವ ಕೆಲವರು ಆದರ್ಶ ಹೇಳಿದರೆ ಸಾಲದು.
ಸಣ್ಣ ಮಠಗಳನ್ನು ಮತ್ತು ಸಣ್ಣ ಸಮುದಾಯಗಳನ್ನು ನಮ್ಮವರೇಂದು ಭಾವಿಸಿ, ಅವರ ಪ್ರಗತಿಗೆ ಉನ್ನತಿಗೆ ಸಲಹೆ ಸಹಕಾರ ನೀಡಬೇಕಾಗಿರುವುದು ಪಾರಂಪರಿಕ ಮಠಗಳ ಆದ್ಯ ಕರ್ತವ್ಯ ಆದರೆ ಕೆಲವರು ತಮ್ಮ ಪ್ರಗತಿಯನ್ನೇ ಸಾಧಿಸುತ್ತಾ ಸಾಗಿದ್ದಾರೆ ಮಾತಿನಲ್ಲಿ ಲೇಖನಗಳಲ್ಲಿ ಜಾತ್ಯತೀತ ಮಾತನಾಡುವ ಜಾಣರು ಅವಕಾಶ ಬಂದಾಗ ತಾವಸ್ತೆ ಬೆಳೆಯುವ ಆಲೋಚನೆ ಮಾಡುತ್ತಾರೆ, ಮಾಡುತ್ತಿದ್ದಾರೆ.
ಕುಂಚಿಟಿಗ ಸಮಾಜದಲ್ಲಿ ಒಂದು ಪರಂಪರೆ ಇದೆ ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಮುನ್ನ ಗುರುಗಳಿಂದ ಸಂಸ್ಕಾರ ಪಡೆದು ದೀಕ್ಷೆ ಸ್ವೀಕರಿಸುವುದು ವಾಡಿಕೆ ಹಾಗೂ ಹಳ್ಳಿಗಳಲ್ಲಿ ಯಾವುದೇ ಗಲಾಟೆ ಗದ್ದಲ ನಡೆದ ಸಂದರ್ಭದಲ್ಲಿ ಪಾದರಕ್ಷೆಗಳನ್ನು ಮುಟ್ಟಿದರೆ ಶ್ರೀಮಠಕ್ಕೆ ಭೇಟಿ ನೀಡಿ ಗುರುಗಳಿಂದ ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡು ನಂತರ ಮನೆಗೆ ಪ್ರವೇಶ ಮಾಡುತ್ತಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗೆ ನಾಗರಾಜ್ ಸಂಗಮ ಅವರಿಂದ 1 ಲಕ್ಷ ದತ್ತಿನಿಧಿ ಠೇವಣಿ
ಗುರುಗಳಂತೆ ಸಮಾಜವು ಜಾತ್ಯತೀತ ಮನೋಭಾವನೆ ಹೊಂದಿರುವುದು ಉತ್ತಮ ಬೆಳವಣಿಗೆ ಹೆಣ್ಣು ಮತ್ತು ಗಂಡಿನ ಎರಡು ಕಡೆಯವರು ಶ್ರೀಮಠಕ್ಕೆ ಅತ್ಯಂತ ಸಂತೋಷದಿಂದ ಬಂದು ದೀಕ್ಷೆ ಸಂಸ್ಕಾರ ಸ್ವೀಕರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಸಂತಸದ ವಿಚಾರ ಶ್ರೀಮಠ ಯಾವುದನ್ನು ಒತ್ತಾಯ ಪೂರಕವಾಗಿ ಹೇರುವುದಿಲ್ಲ ಅವರಾಗಿ ಸ್ವಯಂ ಪ್ರೇರಣೆಯಿಂದ ಬಂದವರಿಗೆ ದಾರಿ ತೋರುತ್ತದೆ ಎಂದು ಹೇಳಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
