CHITRADURGA NEWS | 13 JUNE 2026
ಚಿತ್ರದುರ್ಗ: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಮತ್ತು PARAKH( performance assessment Review and Analysis of Knowledge)-ಎನ್ ಸಿ ಇ ಆರ್ ಟಿ ಮಾರ್ಗದರ್ಶನದಲ್ಲಿ FLS(Foundational Learning Study)-2026 ರಾಷ್ಟ್ರಮಟ್ಟದಲ್ಲಿ ನಡೆಸಲಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು, ಡಿಎಸ್‌ಇಆರ್‌ಟಿ, ಡಯಟ್ ಚಿತ್ರದುರ್ಗ ವತಿಯಿಂದ ಜೂನ್ 11 ಮತ್ತು 12ರಂದು ನಡೆಸಿದ ಫೌಂಡೇಶನಲ್ ಲರ್ನಿಂಗ್ ಸ್ಟಡಿ ಸಮೀಕ್ಷೆಯಲ್ಲಿ ಜಿಲ್ಲೆಯ 90 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ತಿಳಿಸಿದರು.

ಇದನ್ನೂ ಓದಿ: ದಿವ್ಯಾಂಗ ಜನ ಪ್ರಯಾಣಿಕರಿಗೆ ರಿಯಾಯಿತಿ ಗುರುತಿನ ಚೀಟಿ | ಆನ್‌ಲೈನ್ ಮೂಲಕ ವಿತರಣೆ
ಭರಮಸಾಗರ ಸಮೀಪದ ನೆಲ್ಲಿಕಟ್ಟೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಸಿದ ಬುನಾದಿ ಕಲಿಕಾ ಸಾಧನೆ ಮೌಲ್ಯಮಾಪನ ಸಮೀಕ್ಷೆ ವೀಕ್ಷಿಸಿ ಮಾತನಾಡಿದರು.
ಸಮೀಕ್ಷಾದಾರರಿಗೆ ಜಿಲ್ಲಾ ಹಂತದಲ್ಲಿ ತರಬೇತಿ ನೀಡಿದ್ದು ಸಮೀಕ್ಷೆಯನ್ನು ಟ್ಯಾಬ್ಲೆಟ್ ಡಿಜಿಟಲ್ ತಂತ್ರಜ್ಞಾನದ ಮೂಲಕ ನಡೆಸಲಾಗಿದೆ. ಪ್ರಸಕ್ತ ವರ್ಷ 4 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರ ಮೂಲಭೂತ ಭಾಷಾ ಕೌಶಲ ಮತ್ತು ಸಂಖ್ಯಾಜ್ಞಾನ ಕೌಶಲ ಪರೀಕ್ಷಿಸಲಾಗಿದೆ ಎಂದರು.
ಚಿತ್ರದುರ್ಗ-4, ಚಳ್ಳಕೆರೆ-1, ಹೊಳಲ್ಕೆರೆ-1, ಹಿರಿಯೂರು-3, ಮೊಳಕಾಲ್ಮೂರು-2 ಒಟ್ಟು 11 ಶಾಲೆಗಳಿಂದ 90 ವಿದ್ಯಾರ್ಥಿಗಳು ಭಾಗವಹಿಸಿರುವರು ಎಂದರು.
ನೋಡಲ್ ಅಧಿಕಾರಿ ಎಲ್.ರೇವಣ್ಣ ಮಾತನಾಡಿ, ಸಮೀಕ್ಷೆಗೆ ಆಯ್ಕೆಯಾಗಿರುವ ಪ್ರತಿ ಶಾಲೆಯಿಂದ ಶಾಲಾ ಪ್ರಶ್ನಾವಳಿ ಮೂಲಕ ಶಾಲೆಯ ಮೂಲಭೂತ ಸೌಲಭ್ಯಗಳು, ಶಿಕ್ಷಕರ ಪ್ರಶ್ನಾವಳಿಯಿಂದ ಇಬ್ಬರು ಶಿಕ್ಷಕರ ವಿದ್ಯಾರ್ಹತೆ ಮತ್ತು ವೃತ್ತಿಪರ ಮಾಹಿತಿ, ವಿದ್ಯಾರ್ಥಿ ಪ್ರಶ್ನಾವಳಿ ಮೂಲಕ ಕಲಿಕಾ ಪ್ರಗತಿ ಮೌಲ್ಯಮಾಪನ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ | ವಿಜೇತ ವಿದ್ಯಾರ್ಥಿಗಳಿಗೆ ನ್ಯಾ.ಸುದೀನ್ ಕುಮಾರ್ ಬಹುಮಾನ ವಿತರಣೆ
ಈ ವೇಳೆ ಹಿರಿಯ ಉಪನ್ಯಾಸಕ ತಿಪ್ಪೇಸ್ವಾಮಿ, ಉಪನ್ಯಾಸಕ ಎಸ್.ಬಸವರಾಜು, ಸಿ.ಆರ್,ಪಿಗಳಾದ ತಿಮ್ಮೇಶ್, ರಾಜಪ್ಪ, ಮುಖ್ಯ ಶಿಕ್ಷಕ ಕೆ.ಚಂದ್ರಪ್ಪ, ಶಿಕ್ಷಕರಾದ ಹನುಮಂತಪ್ಪ, ಸಿ.ಬಿ.ಮಹದೇವಪ್ಪ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
