CHITRADURGA NEWS | 28 MARCH 2026
ಚಿತ್ರದುರ್ಗ: ಜಿಲ್ಲಾ ಪಂಚಾಯತ್‍ನಲ್ಲಿ ವ್ಯವಸ್ಥಾಪಕರ ಹುದ್ದೆಯಲ್ಲಿ ನಿವೃತ್ತಿ ಹೊಂದಿ ಈಗ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ಸಂಗಮ ಅವರು ತಮ್ಮ ತಾಯಿ ತಂದೆಯವರ ಹೆಸರಿನಲ್ಲಿ ದತ್ತಿನಿಧಿ ಠೇವಣಿಯನ್ನು ಚಳ್ಳಕೆರೆ ತಾಲ್ಲೂಕಿನ ಗಜ್ಜುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಲಕ್ಷ ರೂಪಾಯಿಗಳನ್ನು ಶಾಲೆಯ ಹೆಸರಿನಲ್ಲಿ ಠೇವಣಿಗೆ ನೀಡಿದರು.

ಇದನ್ನೂ ಓದಿ: ಬೆಂಗಳೂರು ಲಾಲಾಭಾಗ್ ಉದ್ಯಾನವನ ನಿರ್ಮಾಣದಲ್ಲಿ ತಿಗಳ ಸಮಾಜದ ಪಾತ್ರ ಅನನ್ಯ
ಠೇವಣಿ ಇಟ್ಟ ಹಣದ ಬಡ್ಡಿಯಲ್ಲಿ ಶಾಲೆಯ ಬಡ ಮಕ್ಕಳಿಗೆ ಪ್ರತಿ ವರ್ಷ ಲೇಖನ ಸಾಮಗ್ರಿಗಳ ವಿತರಿಸುವಂತೆ 1 ಲಕ್ಷ ರೂಪಾಯಿಯ ಚೆಕ್‍ನ್ನು 7ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮಾತನಾಡಿ, ಶಿಕ್ಷಣದ ಅರಿವು ಮತ್ತು ಬದುಕಿನೊಡನೆ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಶಿಕ್ಷಣದ ಕಲಿಕೆಗೆ ಆದ್ಯತೆ ನೀಡುವ ಮೂಲಕ ಪ್ರೇರಣೆಯಾಗಬೇಕು ಎಂದರು.
ನಾಗರಾಜ ಸಂಗಮ ಮಾತನಾಡಿ, ಇಂದಿನ ದಿನಮಾನದಲ್ಲಿ ಎಲ್ಲರಿಗೂ ಶಿಕ್ಷಣ ಅನಿವಾರ್ಯವಾಗಿದೆ. ಎಲ್ಲರೂ ಅಕ್ಷರ ಜ್ಞಾನವನ್ನು ಪಡೆಯಬೇಕಿದೆ. ಅಕ್ಷರದ ಜ್ಞಾನ ಇಲ್ಲದಿದ್ದರೆ ಇಂದಿನ ದಿನದಲ್ಲಿ ಸಮಾಜದಲ್ಲಿ ಬೆಲೆ ಇಲ್ಲದಂತೆ ಆಗುತ್ತದೆ. ಕೆಲವೊಂದು ಮಕ್ಕಳಿಗೆ ಕಲಿಯಲು ಎಲ್ಲಾ ರೀತಿಯ ಸೌಲಭ್ಯ ಇರುತ್ತದೆ ಆದರೆ ಕಲಿಕೆಯಲ್ಲಿ ಆಸಕ್ತಿ ಇರುವುದಿಲ್ಲ. ಆದೇ ಮತ್ತೆ ಕೆಲವರಿಗೆ ಕಲಿಯಲು ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ ಆದರೆ ಕಲಿಕೆಯ ಮೇಲೆ ಆಸಕ್ತಿ ಇರುತ್ತದೆ. ಇಂತಹ ಮಕ್ಕಳಿಗೆ ನಾನು ನೀಡಿದ ಧನ ಸಹಾಯ ನೇರವಾಗಬೇಕಿದೆ ಎಂದರು.
ಇದನ್ನೂ ಓದಿ: ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ | ಪಿಸಿಪಿಎನ್ಡಿಟಿ ಸಮಿತಿ ಕಳವಳ
ಈ ಸಂದರ್ಭದಲ್ಲಿ ಗ್ರಾಮದ 2 ಅಂಗನವಾಡಿ ಕೇಂದ್ರಗಳಿಗೆ ದಾಖಲಾತಿ ಪುಸ್ತಕಗಳ ನಿರ್ವಹಣೆಗಾಗಿ 2 ಗೋದ್ರೇಜ್ ಬೀರುಗಳನ್ನು ದೇಣಿಗೆಯಾಗಿ ನೀಡಲಾಯಿತು.
ಡಿಐಇಟಿ ಉಪನ್ಯಾಸಕ ರೇವಣ್ಣ, ಎಸ್‍ಡಿಎಂಸಿ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ಸಿಆರ್‍ಪಿ ಸಿ.ಹನುಮಂತಪ್ಪ, ಮುಖ್ಯ ಶಿಕ್ಷಕ ಬೊಮ್ಮಲಿಂಗಯ್ಯ, ನಿವೃತ್ತ ಶಿಕ್ಷಕ ಸ್ವಾಮಿನಾಥ, ಜಿ.ಒ. ನಾಗರಾಜ್, ಕೆ.ಒ.ಪೆನ್ನೋಬಳಿ, ಡಿ.ಸಿ. ಪಾಟೀಲ್, ಗ್ರಾಮಸ್ಥರಾದ ಸೋಮಣ್ಣ, ಬೊಮ್ಮಯ್ಯ, ಬಸವರಾಜ್, ಇಮ್ಮಿಯಾಜ್ ಸೇರಿದಂತೆ ಶಿಕ್ಷಕಿಯರು ಹಾಗೂ ಅಡಿಗೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
