CHITRADURGA NEWS | 29 MARCH 2026
ಚಿತ್ರದುರ್ಗ: ಭೂಮಿ ಇರುವ ವರೆಗೂ ರಂಗಭೂಮಿ ಶಾಶ್ವತವಾಗಿರುತ್ತದೆ ಎಂದು DYSP ಶ್ರೀನಿವಾಸ್ ಹೇಳಿದರು.

ಶ್ರೀ ಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಒನಕೆ ಓಬವ್ವ ಕ್ರೀಡಾಂಗಣ ಮುಂಭಾಗದ ಬುದ್ದ ಸರ್ಕಲ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ, ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.
ಇದನ್ನೂ ಓದಿ: ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ | ಪಿಸಿಪಿಎನ್ಡಿಟಿ ಸಮಿತಿ ಕಳವಳ
ಆಧುನಿಕ ಜಾಲತಾಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮರೆಮಾಚುತ್ತಿದೆ, ಮೊಬೈಲ್ ಗಳಲ್ಲಿ 3 ನಿಮಿಷದ ರೀಲ್ಸ್ ನೋಡುತ್ತ ಎಕಾಗ್ರತೆಯನ್ನು ಬರೀ 3 ನಿಮಿಷಕ್ಕೆ ಸೀಮಿತ ವಾಗಿಸಿಕೊಂಡಿದ್ದಾರೆ. ಅದ್ದರಿಂದ ಮಕ್ಕಳು ಮತ್ತು ಯುವಕರು ಮೋಬೈಲ್ ಮಾಹೆಗೆ ಬಲಿಯಾಗಿ ಸಮಾಜದ ಶಾಂತಿ ಕದಡುತ್ತಿದ್ದಾರೆ.
ಮಕ್ಕಳಿಗೆ ನಾಟಕ, ಸಂಗೀತ ಕ್ರೀಡೆ ಮುತಾದ ಚಟುವಟಿಕೆಗಳಿಗೆ ಅಸಕ್ತಿ ಮೂಡಿಸುವುದು ಎಲ್ಲಾರ ಕರ್ತವ್ಯ, ಶ್ರೀ ಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ ಶೈಕ್ಷಣಿಕ ಸಂಸ್ಥೆ ಅದನ್ನು ಉಳಿಸುವನಿಟ್ಟಿನಲ್ಲಿ ಇಂಥಹ ಕಾರ್ಯಕ್ರಮಗಳು ಮೂಲಕ ವಿವಿಧ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಆದ್ಯಕ್ಷತೆ ವಹಿಸಿದ್ದ ನೇರ್ಲಿಗೆ ಪೌಡೇಷನ್‌ನ ಅಧ್ಯಕ್ಷರಾದ ಮಮತ ನೇರ್ಲಿಗೆ ಮಾತನಾಡಿ, ಬದುಕಿಗೆ ಬೇಕಾದ ಮೌಲ್ಯಗಳು ಕಾಣೆಯಾಗುತ್ತಿವೆ, ಮಕ್ಕಳು ಶಿಕ್ಷಣದ ಜೊತೆಗೆ ರಂಗಭೂಮಿಯ ಚಟುವಟಿಕೆಗಳನ್ನು ಭಾಗವಹಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ, ರಂಗಭೂಮಿಯ ವಿವಿಧ ಪ್ರಕಾರಗಳಾದ ಗಾಯನ,ವಾದನ,ನರ್ತನಗಳನ್ನು ಕಲಿಯುವ ಮೂಲಕ ಉತ್ತಮ ಸಂಸ್ಕಾರವನ್ನು ಪಡೆಯಬಹುದು ಎಂದರು.
ಇದನ್ನೂ ಓದಿ: ಬೆಂಗಳೂರು ಲಾಲಾಭಾಗ್ ಉದ್ಯಾನವನ ನಿರ್ಮಾಣದಲ್ಲಿ ತಿಗಳ ಸಮಾಜದ ಪಾತ್ರ ಅನನ್ಯ
ವಿಮರ್ಶಕರು ಹಾಗೂ ಸಾಹಿತಿಗಳಾದ ಹುರಳಿ ಬಸವರಾಜ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹುಣಸೇಕಟ್ಟೆ ದ್ಯಾಮಯ್ಯ ಮತ್ತು ತಂಡದಿಂದ ತತ್ವಪದ ಗಾಯನ, ಪವಿತ್ರ ಮತ್ತು ತಂಡದಿಂದ ಸುಗಮ ಸಂಗೀತ, ಶಿವಣ್ಣ ಮತ್ತು ತಂಡದಿಂದ ಜನಪದ ಸಂಗೀತ, ಹಿಮಂತ್‌ರಾಜ್ ಮತ್ತು ತಂಡದಿಂದ ರಂಗಗೀತೆಗಳು, ಹರ್ಷಿಣಿ ಹಾಗೂ ವೈಷ್ಣವಿ ಜನಪದ ನೃತ್ಯವನ್ನು ನೆಡಸಿಕೊಟ್ಟರು.
ಶ್ರೀ ಸಿರಿಸಂಪಿಗೆ ಪುರಸ್ಕಾರವನ್ನು ಜನಪದ ಕಲಾವಿದ ಏಕಾಂತಪ್ಪ ಹಾಗೂ ಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಕ್ಕಳಾದ ಎಸ್.ಹರ್ಷಿಣಿ, ವೈಷ್ಣವಿ, ತನ್ವೀಕ್ ಪಿ.ರೆಡ್ಡಿ. ಯಶಸ್ವಿನಿ.ಅರ್, ಪುರುಶೋತ್ತಮ್.ಎಚ್, ಚೇತನ್ ಕುಮಾರ್, ಸಯ್ಯದ್ ಆಯಾನ್, ಮಿಥುನ್, ಚಿನ್ವಿತಾ, ವಿ.ಎಸ್, ರಕ್ಷ ಎಸ್ ಇವರುಗಳಿಗೆ ಸನ್ಮಾನಿಸಲಾಯಿತು.
ಇದನ್ನೂ ಓದಿ: ಬಸವ ಜಯಂತಿ | ಮುರುಘಾ ಮಠದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಹಿರಿಯ ಸಾಹಿತಿ ಪರಶುರಾಮ್ ಗೊರಪ್ಪ, ಪರಮೇಶ್ವರಪ್ಪ ಕುದರಿ ಮಾತನಾಡಿದರು. ಯುವ ಸಾಹಿತಿಗಳಾದ ರಾಘವೇಂದ್ರ, ದೇವರತ್ನ ಮಂಜು, ಪವನ್ ಕುಮಾರ್, ಶಾಮ್, ಉದಯಕುಮಾರ್ ಶ್ರೀನಿವಾಸ್, ಪವಿತ್ರ, ಶಿವಣ್ಣ, ಮುರುಘನ್ ಮುಂತಾದವರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
