
CHITRADURGA NEWS | 29 MARCH 2026
ಚಿತ್ರದುರ್ಗ: ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿಯಾಗಿರುತ್ತದೆ. ಹಸಿವು ನಿಗಿಸುವ ಕೆಲಸವನ್ನು ರೈತ ಬಿಟ್ಟು ಇನ್ಯಾರು ಕೂಡ ಮಾಡಲಾಗದು ಹಾಗಾಗಿ ನಾನು ರೈತರ ಪರವಾಗಿ ಯಾವಾಗಲೂ ಇರುತ್ತೇನೆ ಎಂದು ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವರು ತಿಳಿಸಿದರು.
ಇದನ್ನೂ ಓದಿ: ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ
ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕಷ್ಟ ಬಿದ್ದು ಭೂಮಿಯನ್ನು ಹದ ಮಾಡಿ ಫಸಲನ್ನು ತೆಗೆಯಲು ಸಾಕಷ್ಟು ಸಮಸ್ಯೆಗಳನ್ನ ಹೆದರಿಸಿ ನಿಲ್ಲುತ್ತಾನೆ ಆದರೆ ಸರಿಯಾದ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲ್ಕುತಿದ್ದಾರೆ. ಈ ವಿಚಾರವನ್ನು ನಾನು ಗಂಭೀರವಾಗಿ ಅರಿತಿದ್ದೇನೆ, ಆದ್ದರಿಂದ ರೈತರಿಗೆ ಅನುಕೂಲವಾಗುವಂತಹ ಕೃಷಿ ಯೋಜನೆಗಳು ರೈತರಿಗೆ ತಲುಪಿಸುವಂತಹ ಕೆಲಸವನ್ನ ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ರೈತ ಬಾಂಧವರು ಒಂದಾದರೆ ಇಡೀ ದೇಶದ ಚಿತ್ರಣವೇ ಬದಲಾಗುತ್ತದೆ ಎಂಬುವುದನ್ನು ನಾನು ಅರಿತಿದ್ದೇನೆ ಆದ್ದರಿಂದ ಭೀಮಸಮುದ್ರ ಗ್ರಾಮದ ಸುತ್ತಮುತ್ತಲಿನ ರೈತಪಿ ವರ್ಗದವರು ಈಗಾಗಲೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ ಇವುಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಸದಾ ನಿಮ್ಮೊಂದಿಗೆ ನಾನಿರುತ್ತೇನೆ ಹೋರಾಟದ ಜೊತೆ ಜೊತೆಗೆ ಪೂರಕವಾಗಿ ನಾನು ಸಾಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತನ ಬೆಳೆಯುವ ಬೆಳೆಗಳಿಗೆ ಸರಿಯಾಗಿ ಮಾರುಕಟ್ಟೆಗಳಲ್ಲಿ ಬೆಲೆ ಸಿಗದ ರೈತ ಸಾಲಗಾರನಾಗಿದ್ದಾನೆ, ರೈತರಿಗೆ ಮಾರುಕಟ್ಟೆಯಲ್ಲಿ ದೊರೆಯುವಂತಹ ಬೆಲೆಯು ಶ್ರೀಮಂತಿಕೆಯನ್ನು ತಂದು ಕೊಡುವುದಿಲ್ಲ, ಬೆಳೆ ಬೆಳೆಯುವ ಖರ್ಚು ವೆಚ್ಚಗಳಿಗೆ ಸರಿಯಾಗುತ್ತದೆ ಆದರೆ ಮಾರುಕಟ್ಟೆಯಿಂದ ನಂತರ ವ್ಯವಹರಿಕರಣವಾಗುವಾಗ ಬೆಳೆಯು ಮಧ್ಯವರ್ತಿಗಳಿಗೆ ಸಾಕಷ್ಟು ಲಾಭವಾಗುತ್ತದೆ ಇದರಿಂದ ರೈತನಿಗೆ ಮತ್ತಷ್ಟು ನಷ್ಟವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಭೂಮಿ ಇರುವವರೆಗೂ ರಂಗಭೂಮಿ ಶಾಶ್ವತ
ಭೀಮಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣಿ ಬಾಧಿತ ನಡೆಯುತ್ತಿರುವುದರಿಂದ ಬೆಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ, ಉತ್ಕೃಷ್ಟವಾದ ಬೆಳೆಯನ್ನ ಬೆಳೆಯಲು ರೈತ ಸಾಲಗಾರನಾಗುತ್ತಿದ್ದಾನೆ ಬೆಳೆಗಳ ಮೇಲೆ ಗಣಿಯ ಧೂಳು ಕುಳಿತುಕೊಂಡು ಫಸಲು ಬರದಂತಾಗುತ್ತಿದೆ, ಇಲ್ಲಿನ ಧೂಳಿನಿಂದಾಗಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ವಿಪರೀತ ಬದಲಾವಣೆಗಳು ಕಂಡುಬರುತ್ತವೆ ಹಾಗಾಗಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟವನ್ನ ಗಣಿಗಾರಿಕೆಗಳ ವಿರುದ್ಧವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮಾಡಬೇಕಿದೆ ಎಂದು ತಿಳಿಸಿದರು.
ವಿಜಾಪುರ ಸಂಚಾರಿ ಪೀಠದ ಶ್ರೀ ಪ್ರವೀಣ್ ಗುರೂಜಿ ಮಾತನಾಡಿ, ರೈತ ಮತ್ತು ಪರಿಸರ ಇವೆರಡು ಒಂದೇ ಮುಖದ ಎರಡು ನಾಣ್ಯಗಳು ಇದ್ದಂತೆ ಪರಿಸರಕ್ಕೆ ಮಾನವ ಅವಲಂಬಿತವಾಗಿ ಬದುಕುತ್ತಿದ್ದಾನೆ. ಪರಿಸರ ಉತ್ತಮವಾಗಿದ್ದರೆ ಉತ್ತಮವಾದ ಮಳೆಯಿಂದಾಗಿ ಬೆಳೆಯಾಗುತ್ತದೆ ಪರಿಸರವೇ ವಿನಾಶವಾದರೆ ರೈತ ಈನ್ನೆಲೆ ಬದುಕುತ್ತಾನೆ ಹಾಗಾಗಿ ಪರಿಸರ ಕಾಪಾಡುವುದು ರೈತನ ಜವಾಬ್ದಾರಿಯ ಜೊತೆಜೊತೆಗೆ ಪ್ರತಿಯೊಬ್ಬರ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗಣಿ ಬಾಧಿತ ಪ್ರದೇಶಗಳಲ್ಲಿ ರೈತ ಸಾಲ ಮಾಡಿ ಉತ್ತಮ ಬೆಳೆ ಬೆಳೆಯಲು ವಿಫಲನಾಗುತ್ತಿದ್ದಾನೆ ಅಂತರ್ಜಲ ಮಟ್ಟವು ಕೂಡ ಕಡಿಮೆಯಾಗುತ್ತಿದೆ ಗಣಿ ಬಾಧಿತ ಪ್ರದೇಶಕ್ಕೆ ಪ್ರತ್ಯೇಕವಾಗಿ ನಿಗಮಗಳನ್ನ ತೆರೆದು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತ ವಿವಿಧ ಯೋಜನೆಗಳನ್ನು ರೂಪಿಸಿ ಗಣಿ ಬಾಧಿತ ಹಣವನ್ನ ಸದುಪಯೋಗ ಪಡೆದುಕೊಳ್ಳುವುದು ಗಣಿ ಬಾಧಿತ ಪ್ರದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದವನಿಗೆ ಜೈಲು ಶಿಕ್ಷೆ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಪಡಗಲಪುರ ನಾಗೇಂದ್ರ ಮಾತನಾಡಿ, ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಕೃಷಿ ಕಾಯಕ ಮೊದಲಿಗ ಬರುತ್ತದೆ, ಈ ದೇಶದಲ್ಲಿ ಯಾರೂ ಕೂಡ ಉಪವಾಸವಾಗಿ ಇರಬಾರದು ಎನ್ನುವ ನಿಟ್ಟಿನಲ್ಲಿ ರೈತ ಕಷ್ಟ ಬಿದ್ದು ಹೊಲವನ್ನು ಅಸನ್ನು ಮಾಡಿ ಬಿತ್ತಿ ಬೆಳೆಯಲು ಮುಂದಾಗುತ್ತಾನೆ ಆದರೆ ಸರ್ಕಾರ ತರುವ ಯೋಜನೆಗಳು ಹಾಗೂ ಪರಿಸರವಾಡುವ ಆಟಗಳಿಂದ ರೈತ ಮತ್ತೆ ಸಾಲದ ಸುಳಿಯಲ್ಲಿ ಸಿಲುಕಿ ರೈತ ಪ್ರಾಣವನ್ನು ಬಿಡುತ್ತಿದ್ದಾರೆ ಎಂದು ತಿಳಿಸಿದರು.
ರೈತರ ಬದುಕಿಗೆ ಯಾವುದೇ ಸರ್ಕಾರಗಳಾಗಲಿ ಉತ್ತೇಜನವನ್ನು ನೀಡಬೇಕು ವಿನಹ ರೈತರಿಗೆ ಸಂಕಷ್ಟಗಳನ್ನು ನೀಡಬಾರದು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿರುವುದನ್ನು ನಾವು ಗಂಭೀರವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ | ಪಿಸಿಪಿಎನ್ಡಿಟಿ ಸಮಿತಿ ಕಳವಳ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಚಾಮರಸ ಮಾಲಿಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷರಾದ ಕೆ.ಪಿ ಭೂತಯ್ಯ, ಬಸ್ತಿಹಳ್ಳಿ ಸುರೇಶ್ ಬಾಬು, ಅರುಣ್ ಕುಮಾರ್, ಕುರುಡಿ ಕೆ.ಸಿ ಹೊರ್ಕೆರಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಧನಂಜಯ್, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಹುಣ್ಸೆಕಟ್ಟೆ, ಗಣಿ ಬಾಧಿತ ಪ್ರದೇಶ ಹೋರಾಟಗಾರ ಸಮಿತಿ ಸಂಚಾಲಕ ರಮೇಶ್ ಬಿ.ದುರ್ಗ, ಜಿಲ್ಲಾಟ್ರಸಿಟಿ ಸಮಿತಿ ಸದಸ್ಯ ಸಿ.ಎಲ್ ಅವಿನಾಶ್, ಭೀಮಸಮುದ್ರ ಘಟಕದ ಗೌರವಾಧ್ಯಕ್ಷರಾದ ಜಯಣ್ಣ, ಅಧ್ಯಕ್ಷರಾದ ಶಂಕರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ, ಖಜಾಂಚಿ ಶಿವಕುಮಾರ್, ಸಂಘಟನ ಕಾರ್ಯದರ್ಶಿ ಈರಣ್ಣ, ಸಂಚಾಲಕ ಬಸವರಾಜ್ ಹಾಗೂ ಸಂಘದ ಪದಾಧಿಕಾರಿಗಳು ಸೇರಿದಂತೆ ರೈತರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

