CHITRADURGA NEWS | 20 JANUARY 2024
ಚಿತ್ರದುರ್ಗ (CHITRADURGA): ತಮಗಿರುವ ಅವಕಾಶ, ಸೌಲಭ್ಯದಲ್ಲೇ ಶ್ರದ್ಧೆಯಿಂದ ದುಡಿದರೆ ಮತ್ತೊಬ್ಬರಿಗೆ ನೀಡುವಷ್ಟು ಹಣ, ಆಸ್ತಿ ಸಂಪಾದನೆ ಮಾಡಬಹುದು. ಆದರೆ ಹೊಸದುರ್ಗದಲ್ಲಿ ಆಸ್ತಿ ವಿಚಾರಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ವ್ಯಕ್ತಿಯ ವಯಸ್ಸು ಕೇವಲ 36.
ಇದನ್ನೂ ಓದಿ: ಸಾಣೇಹಳ್ಳಿ ರಂಗಕರ್ಮಿ ಬಿ. ರಾಜು ‘ರಂಗ ಆರಾಧಕ’ | ಪರಸಗಡ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಬೆಲಗೂರು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ಆಸ್ತಿ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ರಾತ್ರಿ ಜಗಳ ಪ್ರಾರಂಭವಾಗಿದೆ. ಕೋಪಕ್ಕೆ ಬುದ್ದಿ ನೀಡಿದ ತಮ್ಮನನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ದೇವರ ಎತ್ತುಗಳಿಗೆ 9 ಟನ್ ಮೇವು ವಿತರಿಸಿದ ಶಾಸಕ ಟಿ.ರಘುಮೂರ್ತಿ| ಶಾಶ್ವತ ಶೆಡ್ ನಿರ್ಮಿಸಲು ಸೂಚನೆ
ಬೆಲಗೂರು ಗ್ರಾಮದ ಸಿದ್ದೇಶ್ (36) ಕೊಲೆಯಾಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಅಣ್ಣ ತಮ್ಮಂದಿರು ಬೇರೆ ಬೇರೆ ಮನೆಯಲ್ಲಿ ವಾಸವಿದ್ದರು. ಆಸ್ತಿ ವಿಚಾರವಾಗಿ ಅಣ್ಣ ಸತೀಶ್ ಮನೆಗೆ ಬಂದಿದ್ದ ಸಿದ್ದೇಶ್ ಜಗಳ ತೆಗೆದಿದ್ದಾನೆ.
ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದಾಗ ಅಣ್ಣ ಮರದ ರೀಪರ್‌ನಿಂದ ತಮ್ಮ ಸಿದ್ದೇಶ್ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಿದ್ದೇಶ್ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಿಪಿಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
