ಮುಖ್ಯ ಸುದ್ದಿ
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಚಿತ್ರದುರ್ಗದಲ್ಲಿ ಮಗುವಿಗೆ ‘ರಾಮ’ನೆಂದು ನಾಮಕರಣ

CHITRADURGA NEWS | 20 JANUARY 2024
ಚಿತ್ರದುರ್ಗ: ಹೊಸ ವರ್ಷ ಸೇರಿದಂತೆ ವಿಶೇಷ ದಿನಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು, ಆ ದಿನ ಏನನ್ನಾದರೂ ಖರೀಧಿ ಮಾಡುವುದು, ಹೊಸ ಕೆಲಸಕ್ಕೆ ಕೈ ಹಾಕುವುದು ಸೇರಿದಂತೆ ನೆನಪಿನಲ್ಲಿ ಉಳಿಯುವ ಕೆಲಸಗಳನ್ನು ಮಾಡುವ ಒಂದು ಟ್ರೆಂಡ್ ಇದೆ.
ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ, ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ವಿದ್ವಾಂಸರು, ಪಂಡಿತರೆಲ್ಲಾ ಸೇರಿ ಜ.22ಕ್ಕೆ ಮುಹೂರ್ತ ನಿಗಧಿ ಮಾಡಿದ್ದಾರೆ. ಈ ದಿನ ಕೂಡಾ ಸಾಕಷ್ಟು ಜನ ವಿಶೇಷತೆಗಳಿಂದ ಕೂಡಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ದುರ್ಗದ ‘ಕೀರ್ತಿ’ | ಗಣಪತಿ ವಿಗ್ರಹ ಕೆತ್ತನೆಗೆ ಅವಕಾಶ
ಅತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಿಗೆ ಕೋಟೆನಾಡು ಚಿತ್ರದುರ್ಗದಲ್ಲಿ ಮಗುವೊಂದರ ನಾಮಕರಣ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅದೂ ರಾಮ ಎನ್ನುವ ಹೆಸರನ್ನೇ ಮಗುವಿಗೆ ನಾಮಕರಣ ಮಾಡುತ್ತಿರುವುದು ಇನ್ನೂ ವಿಶೇಷವಾಗಿದೆ.
ಚಿತ್ರದುರ್ಗದ ಗಾಂಧಿ ನಗರದ ನಿವಾಸಿಗಳಾದ ಭಾವನಾ ಹಾಗೂ ಸಾಗರ್ ದಂಪತಿಗಳು ತಮ್ಮ ಐದು ತಿಂಗಳ ಪುತ್ರನಿಗೆ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯ ದಿನವೇ ನಾಮಕರಣ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಟೈಗರ್ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು
ತಮ್ಮ ಮಗುವಿಗೂ ರಾಮ ಎನ್ನುವ ಹೆಸರನ್ನೇ ನಾಮಕರಣ ಮಾಡುವುದಾಗಿ ತಾಯಿ ಭಾವನಾ ಚಿತ್ರದುರ್ಗ ನ್ಯೂಸ್‍ಗೆ ತಿಳಿಸಿದ್ದಾರೆ.
ಜ.22 ಅತ್ಯಂತ ಪವಿತ್ರವಾದ ಮುಹೂರ್ತವಿದೆ. ಈ ಕಾರಣಕ್ಕೆ ನಾವು ಅದೇ ದಿನವನ್ನು ನಿಗಧಿ ಮಾಡಿಕೊಂಡಿದ್ದೇವೆ. ಜ.22 ರಂದು ರಾಮನಿಗೆ ಪ್ರಾಣಪ್ರತಿಷ್ಠ ಆಗುವ ವೇಳೆಗೆ ನಾವು ನಾಮಕರಣ ಮಾಡುತ್ತಿದ್ದೇವೆ. ಇದರೊಟ್ಟಿಗೆ ಮನೆಯಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
