
CHITRADURGA NEWS | 05 OCTOBER 2024
ಚಿತ್ರದುರ್ಗ: ತಡರಾತ್ರಿ ಜಿಲ್ಲೆಯಲ್ಲಿ ಭರ್ಜರಿ ಮಳೆ (HeavyRain) ಸುರಿದಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಕೆರೆಗಳು ಕೋಡಿಬಿದ್ದು ನೀರು ಹರಿಯುತ್ತಿರುವ ಸುಂದರ ದೃಶ್ಯಗಳು ಕಂಡುಬಂದಿವೆ.

ಚಳ್ಳಕೆರೆ ತಾಲೂಕಿನ ದೇವರಹಳ್ಳ, ಜಿನಗಿಹಳ್ಳಗಳಲ್ಲಿ ನೀರು ಹರಿಯುತ್ತಿದೆ. ಮೊಳಕಾಲ್ಮೂರು ತಾಲೂಕಿನ ಜಹಗೀರ್ ಬುಡ್ಡೇನಹಳ್ಳಿ (ಜೆ.ಬಿ.ಹಳ್ಳಿ) ಕೆರೆ ಕೋಡಿ ಬಿದ್ದು ಜಲಾಶಯದಂತೆ ನೀರು ಹರಿಯುತ್ತಿದೆ. ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ.

ಇದನ್ನೂ ಓದಿ: ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಖ್ಯಮಂತ್ರಿ ಮನೆಗೆ ಪಾದಯಾತ್ರೆ | ಪಾವಗಡ ಶ್ರೀರಾಮ್ ಎಚ್ಚರಿಕೆ
ಇನ್ನೂ ಹೊಸದುರ್ಗ ಭಾಗದಲ್ಲಿಯೂ ಹದವಾದ ಮಳೆಯಾಗಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ.

ದೇವರಹಳ್ಳಿಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಬೆಳೆಗಳಿಗೆ ಅಪಾರ ಹಾನಿಯಾಗಿದೆ. ರೈತರು ಬೆಳೆದಿದ್ದ ಟಮೋಟಾ, ಕಲ್ಲಂಗಡಿ ಬೆಳೆ ನೀರು ಪಾಲಾಗಿದೆ.
ಇದನ್ನೂ ಓದಿ: ಹೊಳಲ್ಕೆರೆ ರಸ್ತೆಯಲ್ಲಿ ಭೀಕರ ಅಪಘಾತ | 30 ಕುರಿ ಸಾವು
ಇದೇ ಗ್ರಾಮದಲ್ಲಿ ಯಶೋದಮ್ಮ ಎನ್ನುವವರ ಮನೆಯ ಬಳಿಯಿರುವ ಬಾವಿ ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಇದನ್ನೂ ಓದಿ: ಮತ್ತೊಂದು ಅಡಿ ಹೆಚ್ಚಾಯ್ತು ವಿವಿ ಸಾಗರ ನೀರಿನ ಮಟ್ಟ | ಒಳಹರಿವಿನ ಪ್ರಮಾಣ ಹೆಚ್ಚಳ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
