
CHITRADURGA NEWS | 05 OCTOBER 2024
ಚಿತ್ರದುರ್ಗ: ಹೊಸದುರ್ಗ, ಚಿಕ್ಕಮಗಳೂರು ಭಾಗದಲ್ಲಿ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರಕ್ಕೆ (VV Sagara) ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಈ ಹಿಂದೆ ಬಂದ ಮಳೆಗಳ ಕಾರಣಕ್ಕೆ ವೇದಾವತಿ ನದಿಯಲ್ಲಿರುವ ಬ್ಯಾರೇಜ್‍ಗಳು ಭರ್ತಿಯಾಗಿದ್ದು, ಈಗ ಮಳೆ ಸುರಿಯುತ್ತಿರುವುದರಿಂದ ವೇದಾವತಿ ಹರಿದು ನೇರವಾಗಿ ವಿವಿ ಸಾಗರದ ಒಡಲು ಸೇರುತ್ತಿದ್ದಾಳೆ.
ಇದನ್ನೂ ಓದಿ: ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಖ್ಯಮಂತ್ರಿ ಮನೆಗೆ ಪಾದಯಾತ್ರೆ | ಪಾವಗಡ ಶ್ರೀರಾಮ್ ಎಚ್ಚರಿಕೆ
ಅ.8 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ, ವಿವಿ ಸಾಗರಕ್ಕೆ 1386 ಕ್ಯೂಸೆಕ್ ನೀರು ಹರಿದು ಬಂದಿದೆ.

135 ಅಡಿ ಎತ್ತರ ಹಾಗೂ 30 ಟಿಎಂಸಿ ಅಡಿ ಸಾಮಥ್ರ್ಯದ ವಿವಿ ಸಾಗರ ಜಲಾಶಯದಲ್ಲಿ ಅ.5 ಶನಿವಾರ ಬೆಳಗ್ಗೆ ನಡೆಸಿದ ಮಾಪನದಂತೆ 121.05 ಅಡಿವರೆಗೆ ನೀರು ಬಂದಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 122.55 ಅಡಿವರೆಗೆ ನೀರು ಬಂದಿದ್ದು, 24.16 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಹಿಂಗಾರು ಮಳೆಗಳು ಕೈ ಹಿಡಿದರೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹೊಳಲ್ಕೆರೆ ರಸ್ತೆಯಲ್ಲಿ ಭೀಕರ ಅಪಘಾತ | 30 ಕುರಿ ಸಾವು


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
