
CHITRADURGA NEWS | 04 OCTOBER 2024
ಚಿತ್ರದುರ್ಗ: ಟಿಪ್ಪರ್ ಲಾರಿ ಹರಿದು ಸುಮಾರು 30 ಕುರಿಗಳು (Sheep) ನಡು ರಸ್ತೆಯಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಹೊಳಲ್ಕೆರೆ ರಸ್ತೆಯಲ್ಲಿ ನಡೆದಿದೆ.
ಹೊಳಲ್ಕೆರೆ ರಸ್ತೆಯ ಜಾನುಕೊಂಡ ಸಮೀಪದ ನಮಸ್ತೆ ದುರ್ಗ ಹೋಟೆಲ್ ಸಮೀಪದಲ್ಲಿ ಈ ಭೀಕರ ಅಪಘಾತ ನಡೆದಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಶೇಂಗಾ, ಮೆಕ್ಕೆಜೋಳದ ಧಾರಣೆ ಎಷ್ಟಿದೆ ?
ಕರಿಹಟ್ಟಿ ಗ್ರಾಮದ ತಿಪ್ಪೇಶ್ ಎಂಬುವವರಿಗೆ ಸೇರಿದ 30 ಕುರಿಗಳು, ಅಪಘಾತಕ್ಕೀಡಾಗಿದ್ದು, ಸುಮಾರು 5 ಲಕ್ಷ ರೂ. ಮೌಲ್ಯದ ಕುರಿಗಳು ನಡು ರಸ್ತೆಯಲ್ಲಿ ನಜ್ಜುಗುಜ್ಜಾಗಿವೆ.

ಅಪಘಾತ ಮಾಡಿದ ಟಿಪ್ಪರ್ ಲಾರಿಯನ್ನು ಗ್ರಾಮಸ್ಥರು ಹಿಡಿದು ನಿಲ್ಲಿಸಿದ್ದಾರೆ. ಕುರಿ ಕರೆದುಕೊಂಡು ಹೋಗುತ್ತಿದ್ದ ತಿಪ್ಪೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ವಿದ್ಯುತ್ ತಗುಲಿ ಎರಡು ಎಮ್ಮೆ ಸಾವು
ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
