CHITRADURGA NEWS | 20 JANUARY 2024
ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1 ಮತ್ತು ಘಟಕ-3ರ ವ್ಯಾಪ್ತಿಯಲ್ಲಿ ಬರುವ ಕೋಟೆ, ಜಿಲ್ಲಾ ಪಂಚಾಯತ್, ಕಾಪರ್ ಮೈನ್ಸ್, 11 ಕೆ.ವಿ ಮಾರ್ಗಗಳ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಜನವರಿ 21 ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಭೀಕರ ಅಪಘಾತ ಕೃಷಿ ಇಲಾಖೆ ಅಧಿಕಾರಿ ಮೃತ
ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು: ಕೆಳಗೋಟೆ-ಇಂಡಸ್ಟ್ರೀಯಲ್ ಏರಿಯಾ, ಗಾಂಧಿ ನಗರ, ಐಯುಡಿಪಿ ಲೇಔಟ್, ವಿಜ್ಞಾನ ಕಾಲೇಜ್, ಬುದ್ಧ ನಗರ, ಜೋಗಿಮಟ್ಟಿ ರಸ್ತೆ, ಎಸ್.ವಿ.ನಗರ, ಟೀಚರ್ಸ್ ಕಾಲೋನಿ, ಸೂರ್ಯಪುತ್ರ ಸರ್ಕಲ್, ಕಣುಮಪ್ಪ ಲೇಔಟ್, ಜೆ.ಪಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ. ಜಿಲ್ಲಾ ಪಂಚಾಯತ್-ಐಯುಡಿಪಿ ಲೇಔಟ್, ಸರಸ್ವತಿ ಪುರಂ, ಕೆ.ಕೆ.ಸರ್ಕಲ್, ಕಾಮನಬಾವಿ ಬಡಾವಣೆ, ಕೋಟೆ ರಸ್ತೆ, ಸರ್ಕಾರಿ ಡಿಪ್ಲೊಮಾ ಕಾಲೇಜ್, ಮಹಾರಾಣಿ ಕಾಲೇಜ್, ದೊಡ್ಡಪೇಟೆ, ದೊಡ್ಡಗರಡಿ ಹಾಗೂ ಸುತ್ತಮುತ್ತಲಿನ ಪ್ರದೇಶ. ಕಾಪರ್ ಮೈನ್ಸ್-ಕುಂಚಿಗನಾಳ್, ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಡೆಲ, ಕ್ಯಾದಿಗೆರೆ, ಡಿ.ಎಸ್.ಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
