ಕ್ರೈಂ ಸುದ್ದಿ
ಭೀಕರ ಅಪಘಾತದಲ್ಲಿ ಕೃಷಿ ಇಲಾಖೆ ಅಧಿಕಾರಿ ಮೃತ | ತಿರುಮಲ ಡಾಬ ಬಳಿ ಘಟನೆ

CHITRADURGA NEWS | 20 JANUARY 2024
ಚಿತ್ರದುರ್ಗ (CHITRADURGA): ನಗರದ ಹೊರವಲಯದ ಹೊಳಲ್ಕೆರೆ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಹೊಳಲ್ಕೆರೆ ಕೃಷಿ ಇಲಾಖೆ ತಾಂತ್ರಿಕ ಸಿಬ್ಬಂದಿ ವಿ.ವಿಶಾಲ್ ಕುಮಾರ್ (29 ) ಮೃತಪಟ್ಟಿದ್ದಾನೆ.
ಹೊಳಲ್ಕೆರೆ ರಸ್ತೆಯ ತಿರುಮಲ ಡಾಬ ಬಳಿ ಶನಿವಾರ ಬೆಳಿಗ್ಗೆ ವಿಶಾಲ್ ಕುಮಾರ್ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ವಿಶಾಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಮಕ್ಕಳ ಒಲವು, ಭಾವನೆ ಗೌರವಿಸಿ | ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗದಿಂದ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಮದುವೆ ನಿಶ್ಚಿತಾರ್ಥ ಭಾನುವಾರ ನಿಗಧಿಯಾಗಿತ್ತು.
ಇದನ್ನೂ ಓದಿ: ಕೊಲೆಯಲ್ಲಿ ಅಂತ್ಯವಾದ ಸಹೋದರರ ಆಸ್ತಿ ಜಗಳ | ಬೆಲಗೂರು ಗ್ರಾಮದಲ್ಲಿ ಘಟನೆ
ಶಿವಮೊಗ್ಗದಲ್ಲಿ ಬಿಎಸ್ಸಿ (ಕೃಷಿ) ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಕೃಷಿ)ಪೂರ್ಣಗೊಳಿಸಿ 2018 ರಲ್ಲಿ ಸರ್ಕಾರಿ ಹುದ್ದೆ ಪಡೆದಿದ್ದರು. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
