Connect with us

    ಮಕ್ಕಳ ಒಲವು, ಭಾವನೆ ಗೌರವಿಸಿ | ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಹೊಸದುರ್ಗ

    ಮಕ್ಕಳ ಒಲವು, ಭಾವನೆ ಗೌರವಿಸಿ | ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 JANUARY 2024
    ಚಿತ್ರದುರ್ಗ (CHITRADURGA): ದೇವರ ಸಮಾನವಾದ ಮಕ್ಕಳು ಬೆಳೆಯುತ್ತಾ ದೇವಮಾನವರಾಗಬೇಕಾಗಿತ್ತು. ಆದರೆ ನೈತಿಕ, ಸಾಂಸ್ಕೃತಿಕ, ವೈಚಾರಿಕ, ಸಾಮಾಜಿಕ, ಪ್ರಜ್ಞೆ ಮೂಡಿಸದ ಕಾರಣ ಅವರಲ್ಲಿನ ವ್ಯಕ್ತಿತ್ವ ವಿನಾಶದ ಕಡೆ ಸಾಗುತ್ತಿದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸದ್ದಾರೆ.

    ಇದನ್ನೂ ಓದಿ: ಕೊಲೆಯಲ್ಲಿ ಅಂತ್ಯವಾದ ಸಹೋದರರ ಆಸ್ತಿ ಜಗಳ | ಬೆಲಗೂರು ಗ್ರಾಮದಲ್ಲಿ ಘಟನೆ

    ಹೊಸದುರ್ಗದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ‘ಓದಬೇಕು ಎಂಬ ಕಾರಣಕ್ಕೆ ಮಕ್ಕಳನ್ನು ಪುಸ್ತಕದ ಕೀಟಗಳನ್ನಾಗಿ ಮಾಡುತ್ತಿದ್ದೇವೆ. ಇದರಿಂದ ಮಕ್ಕಳು ಮನೋವಿಕಾಸವಾಗದೆ ಮನೋವಿಲಾಸಕ್ಕೆ ಒಳಗಾಗುತ್ತಿದ್ದಾರೆ. ಯಾರು ಮನೋವಿಲಾಸಕ್ಕೆ ಒಳಗಾಗುವರೋ ಅವರ ವ್ಯಕ್ತಿತ್ವ ವಿನಾಶದ ಕಡೆ ಸಾಗುತ್ತೆ. ಯಾರು ಮನೋವಿಕಾಸದ ಕಡೆ ಒಲವನ್ನು ತೋರಿಸುವರೋ ಅವರ ವ್ಯಕ್ತಿತ್ವ ಇನ್ನಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತಾರೆ’ ಎಂದರು.

    ಇದನ್ನೂ ಓದಿ: ಮಠದ ಆವರಣದಲ್ಲಿ ಕರಡಿಯ ಸಂಚಾರ

    ‘ಅಧ್ಯಾಪಕರು ಹಾಗೂ ಪೋಷಕರು ಮಕ್ಕಳ ಒಲವು ಏನಿದೆ ಎನ್ನುವುದನ್ನು ಗಮನಿಸಬೇಕು. ಮಕ್ಕಳ ಮೇಲೆ ನಮ್ಮ ಭಾವನೆಗಳನ್ನು ಹೇರಬಾರದು. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಹೆಚ್ಚು ಒಲವು ಮೂಡಿಸುತ್ತಾ ಹೋದರೆ ಮಕ್ಕಳು ಅದ್ಭುತ ಸಾಧನೆ ಮಾಡುತ್ತಾರೆ’ ಎಂದು ತಿಳಿಸಿದರು.

    ‘ಮಕ್ಕಳ ಓದಿನ ಜೊತೆಗೆ ಕೃಷಿ, ದನಕರು ಸಾಕುವುದು, ವ್ಯವಸಾಯ, ಕಸ ಹೊಡೆಯುವುದು ಹೀಗೆ ಎಲ್ಲ ಕೆಲಸಕಾರ್ಯಗಳಲ್ಲಿ ತೊಡಗುವ ಹಾಗೆ ಶಿಕ್ಷಕರು ಮತ್ತು ಪೋಷಕರು ನೋಡಿಕೊಳ್ಳಬೇಕು. ಆಗ ಮುಂದೆ ಮಕ್ಕಳು ಸ್ವಂತ ಕಾಲ ಮೇಲೆ ತಾನು ನಿಲ್ಲೋದಕ್ಕೆ ಸಾಧ್ಯವಾಗುತ್ತದೆ’ ಎಂದರು.

    ಇದನ್ನೂ ಓದಿ: ಸಾಣೇಹಳ್ಳಿ ರಂಗಕರ್ಮಿ ಬಿ. ರಾಜು ‘ರಂಗ ಆರಾಧಕ’ | ಪರಸಗಡ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ

    ‘ಬಹುಮಾನ ಪಡೆದವರು ಪ್ರತಿಭಾವಂತರು, ಪಡೆಯದವರು ಪ್ರತಿಭಾವಂತರಲ್ಲ ಎನ್ನುವುದನ್ನು ಯಾರೂ ಭಾವಿಸಬಾರದು. ಇಲ್ಲಿ ಬಹುಮಾನ ಪಡೆದವರಿಗಿಂತ ಹೆಚ್ಚು ಪ್ರತಿಭಾವಂತರು ಇಲ್ಲಿ ಇದ್ದೇ ಇರುವರು. ಆದರೆ ಅವರಿಗೆ ಪ್ರೋತ್ಸಾಹದ ಹಾಗೂ ಅವರಲ್ಲಿ ಆಸಕ್ತಿ ಅರಳಿಸುವುದರಲ್ಲಿ ಕೊರತೆ ಇರಬಹುದು. ಆದರೆ ಶಿಕ್ಷಕರು ಮತ್ತು ಪೋಷಕರು ಅಂತಹ ಮಕ್ಕಳನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಾರ್ಯ ಮಾಡಬಬೇಕು’ ಎಂದು ತಿಳಿಸಿದರು.

    ಕನ್ನಡ ವಿಷಯ ಪರೀಕ್ಷಕ ಶಿವಣ್ಣ, ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಡಿ.ವಿ.ಗಂಗಾಧರಪ್ಪ, ಸಮಿತಿ ಅಧ್ಯಕ್ಷ ಎ.ಸಿ. ಚಂದ್ರಣ್ಣ, ಮುಖ್ಯ ಶಿಕ್ಷಕ ಬಸವರಾಜ, ಶಿಕ್ಷಕರಾದ ಎಸ್‌.ಪಿ.ಶೋಭಾ, ಬಿ.ಎಸ್‌.ಶಿವಕುಮಾರ್, ಎನ್‌.ಎಚ್‌.ಹೊನ್ನೇಶಪ್ಪ, ಎ.ಎಸ್‌.ಶಿಲ್ಪ ಉಪಸ್ಥಿತರಿದ್ದರು.
    ನಾಗರಾಜ್ ಮತ್ತು ತಬಲಸಾಥಿ ಶರಣ್‌ ವಚನಗೀತೆ ಹಾಡಿದರು. ವಿದ್ಯಾರ್ಥಿನಿ ಪೂಜಾ ಸ್ವಾಗತಿಸಿದರೆ, ಕೆ.ಜೆ.ವರ್ಷ ಕಾರ್ಯಕ್ರಮ ನಿರೂಪಿಸಿದರು. ಉಭಯ ಶಾಲೆಯ ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top