CHITRADURGA NEWS | 14 JUNE 2026
ಚಿತ್ರದುರ್ಗ: 2023ರ ವಿಧಾನಸಭೆ ಚುನಾವಣೆ ಸೋಲಿನ ಕುರಿತು ಮಾಜಿ ಸಚಿವ ಎಚ್.ಆಂಜನೇಯ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿನಡೆದ ಸುದ್ದಿಗೋಷ್ಠಿ ವೇಳೆ ಮಾಧ್ಯಮದವರ ಜೊತೆ ಮಾತನಾಡುತ್ತಾ, ಸೋಲಿನ ಕಾರಣ ಹಾಗೂ ಅಂದು ಹೈಕಮಾಂಡ್ ನೀಡಿದ್ದ ಭರವಸೆ ಕುರಿತು ವಿವರಿಸಿದರು.
ಇದನ್ನೂ ಓದಿ:ಚಿತ್ರದುರ್ಗ ತಾಲೂಕಿನ ಶಾಲೆಗಳ ಅಭಿವೃದ್ಧಿಗೆ 44 ಕೋಟಿ ಪ್ರಸ್ತಾವನೆ | ಶಾಸಕ ವೀರೇಂದ್ರ ಪಪ್ಪಿ
2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸ್ವಯಂಕೃತ ಅಪರಾಧದಿಂದ ಸೋತಿದ್ದೇನೆ. ಜೊತೆಗಿದ್ದ ಕೆಲವರು ಬಿಜೆಪಿ ಏಜೆಂಟರಂತೆ ಕೆಲಸ ಮಾಡಿದ್ದರಿಂದ ನಾನು ಸೋತೆ ಎಂದರು.
2023ರ ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡ ಎಂದು ಹೇಳಿದ್ದರು. ರಾಜ್ಯ ಪ್ರವಾಸ ಮಾಡಿ ಪಕ್ಷ ಗೆಲ್ಲಿಸುವ ಕೆಲಸ ಮಾಡು, ನೇರವಾಗಿ MLC ಮಾಡಿ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು ಎಂದು ಸ್ಮರಿಸಿಕೊಂಡರು.
ಇದನ್ನೂ ಓದಿ:INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
ಈಗ ನನ್ನ ಬೆಂಬಲಿಗರು ಒತ್ತಾಯ ಎಂಎಲ್ಸಿ ಮಾಡಲು ಒತ್ತಾಯ ಮಾಡುತ್ತಿದ್ದಾರೆ, ಅದು ಬೇಡ. ಒತ್ತಾಯ ಮಾಡಿ ನಾನು ಯಾವುದನ್ನೂ ಪಡೆದುಕೊಂಡಿಲ್ಲ.
ನನ್ನ ಸ್ವಯಂಕೃತ ಅಪರಾಧ ಸೋತಿದ್ದೇನೆ. ಚುನಾವಣೆಯನ್ನುಸರಿಯಾಗಿ ನಿರ್ವಹಣೆ ಮಾಡಲಿಲ್ಲ, ನನ್ನ ಜೊತೆಗೆ ಇದ್ದ ಕೆಲವರು ಬಿಜೆಪಿ ಏಜೆಂಟರಂತೆ ಕೆಲಸ ಮಾಡಿದರು ಎಂದರು.
ಇದನ್ನೂ ಓದಿ: ಕಥೆಗಾರ ಎ.ಆರ್.ಮಣಿಕಾಂತ್ ಹೇಳಿದ ಮದ್ದೂರು ವಡೆಯ ಕಥೆ..!
ಚುನಾವಣೆ ಸಂದರ್ಭದಲ್ಲಿ ಯಾರನ್ನೂ ನಿರ್ಲಕ್ಷಿಸಬಾರದು ಎನ್ನುವುದು ಗೊತ್ತಾಗಿದೆ. ಮುಂದಿನ ಚುನಾವಣೆಗೆ ಒಂದೂವರೆ ವರ್ಷ ಇದೆ. ಈಗ ಯಾವ ಅಧಿಕಾರವೂ ಬೇಡ, ಪಕ್ಷ ಕೊಟ್ಟ ಕೆಲಸ ನಿಭಾಯಿಸುತ್ತೇನೆ. ಇನ್ನ ಮುಂದೆ ನಾವು ಏನು ಅಂತಾ ತೋರಿಸುತ್ತೇವೆ ಎಂದು ಹೇಳಿದರು.
ನಿಷ್ಠಾವಂತ, ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿನ ಕಾವಲುಗಾರ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷರಾಗಿ ಬಂದಿದ್ದಾರೆ. ಮುಂದೆ ಎಲ್ಲವನ್ನೂ ಬಟಾಬಯಲು ಮಾಡುತ್ತೇನೆ. ಜನನ ಈವರೆಗೆ ನಾನು ಯಾರ ಬಗ್ಗೆಯು ದೂರು ನೀಡಿಲ್ಲ ಎಂದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
