CHITRADURGA NEWS | 14 JUNE 2026
ಚಿತ್ರದುರ್ಗ: ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದ್ರೆ ಆಕಾಶ, ಮತ್ತೆ ಹಾಡಿತು ಕೋಗಿಲೆ ಹೀಗೆ ಸಾಲು ಸಾಲು ಸೂಪರ್ ಹಿಟ್ ಪುಸ್ತಕಗಳನ್ನು ಬರೆದು, ಅವು ದಾಖಲೆ ಮುದ್ರಣ ಕಂಡಿರುವ ಪತ್ರಕರ್ತ, ಕಥೆಗಾರ, ಅಂಕಣಕಾರ ಎ.ಆರ್.ಮಣಿಕಾಂತ್ ಮದ್ದೂರು ವಡೆ ಬಗ್ಗೆ ಬರೆದ ಕಥೆಯ ಬಗ್ಗೆ ಆಸಕ್ತಿದಾಯಕ ಅಂಶಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ:ಕಳೆದುಹೋದ ತೇವಾಂಶವನ್ನು ಮರಳಿ ತರಲು ಹಚ್ಚಿ ಸ್ಟ್ರಾಬೆರಿ-ಜೇನುತುಪ್ಪದ ಫೇಸ್ ಪ್ಯಾಕ್
ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಅವರು, ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಬರೆದಾದ ನಂತರ ಆಗಿರುವ ಹಲವು ಮಹತ್ವದ ಘಟನೆಗಳ ಬಗ್ಗೆಯೂ ವಿವರಿಸಿದ್ದಾರೆ.
ಏನಿದು ಮದ್ದೂರು ವಡೆಯ ಕಥೆ…
ಎ.ಆರ್.ಮಣಿಕಾಂತ್ ಮೂಲತಃ ಮಂಡ್ಯದ ನಾಗಮಂಗಲದವರು. ಆಗಿನ್ನೂ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದರು. ಇಂಜಿನಿಯರಿಂಗ್‌ನಲ್ಲಿ ಕೆಲ ವಿಷಯದಲ್ಲಿ ಫೇಲ್ ಆಗಿದ್ದ ಅವರಿಗೆ ಅಪ್ಪನಿಂದ ಬರುತ್ತಿದ್ದ ಪಾಕೇಟ್ ಮನಿ ನಿಂತು ಹೋಗಿತ್ತು.
ಈ ವೇಳೆ ಕೆಲ ದಿನ ಸ್ನೇಹಿತರಿಂದ ಸಾಲವಾಗಿ ಪಡೆದಿದ್ದೂ ಇದೆ. ಆದರೆ, ಎಷ್ಟು ದಿನ. ಕೊನೆಗೆ ಗೆಳೆಯನೊಬ್ಬ ನಿನಗೆ ಹೇಗಿದ್ದರೂ ಒಳ್ಳೆಯ ಬರವಣಿಗೆ ಇದೆ. ಪತ್ರಿಕೆಗಳಿಗೆ ಬರಿ ಅವರು ಹಣ ಕೊಡುತ್ತಾರೆ ಎಂಬ ಸಲಹೆ ಕೊಡುತ್ತಾರೆ.
ಇದನ್ನೂ ಓದಿ:ನಿಮ್ಮ ಈ ನಾಲ್ಕು ಕೆಟ್ಟ ಅಭ್ಯಾಸಗಳು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತಿವೆಯಂತೆ
ಅದರಂತೆ ಮಣಿಕಾಂತ್ ಆಗಾಗ ಬೇರೆ ಬೇರೆ ಪತ್ರಿಕೆಗಳ ಸಾಪ್ತಾಹಿಕಗಳಿಗೆ ಬರೆಯುತ್ತಾರೆ. ಪತ್ರಿಕೆಗಳಿಂದ ನೂರು, ಇನ್ನೂರು ಸಿಗುತ್ತದೆ.
ಹೀಗಿರುವಾಗ ಒಮ್ಮೆ ಮದ್ದೂರು ವಡೆಗೆ 90 ವರ್ಷವಾಗಿದೆ ಎನ್ನುವ ವಿಷಯ ಅವರ ಕಿವಿಗೆ ಬೀಳುತ್ತದೆ. ಈ ವಿಷಯವನ್ನು ಬರೆಯಬೇಕು ಎಂಬ ಆಸೆಯಿಂದ ಗೆಳಯನ ಜೊತೆಗೆ ಮದ್ದೂರಿಗೆ ಹೋಗಿ ಅಲ್ಲಿ ಮದ್ದೂರು ವಡೆ ಮಾಡುವ ಹೋಟೆಲ್‌ಗೆ ಹೋಗುತ್ತಾರೆ.
ಮಂಗಳೂರಿನಿಂದ ಬಂದು ಮದ್ದೂರಿನಲ್ಲಿ ವಡೆ ಮಾಡಿ ಅದನ್ನು ಫೇಮಸ್ ಮಾಡಿದ ಕಥೆ ಬರೆದು ಪ್ರಜಾವಾಣಿ ಪತ್ರಿಕೆಗೆ ಪೋಟೊ ಸಹಿತ ಕಳಿಸುತ್ತಾರೆ.
ಇದನ್ನೂ ಓದಿ:ಪಾದಗಳಲ್ಲಿ ಮೂಡಿರುವ ಚಪ್ಪಲಿಯ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲೇ ಈ ಪ್ಯಾಕ್ ತಯಾರಿಸಿ ಹಚ್ಚಿ
ಮದ್ದೂರು ವಡೆ ಇಂಟರೆಸ್ಟಿಂಗ್ ಕಥೆ ಪೋಟೊ ಸಹಿತ ಪ್ರಕಟವಾದರೆ ಏನಿಲ್ಲವೆಂದರೂ 500 ರಿಂದ 600 ಬರಬಹುದು ಎಂಬ ಲೆಕ್ಕಾಚಾರದಲ್ಲಿ ಮಣಿಕಾಂತ್ ಇರುತ್ತಾರೆ.
ಆದರೆ, 15 ದಿನವಾದರೂ ಕತೆ ಪ್ರಕಟವಾಗಲೇ ಇಲ್ಲ. ಈ ಸಂದರ್ಭಕ್ಕೆ ಪ್ರಜಾವಾಣಿಯಿಂದ ಮಣಿಕಾಂತ್ ಅವರಿಗೆ ಪೋಸ್ಟ್ ಕಾರ್ಡ್ ಬರುತ್ತದೆ.
ಆ ಪತ್ರದಲ್ಲಿ, ನೀವು ಮದ್ದೂರು ವಡೆ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ದಿನವೂ ಐದಾರು ಸಾವಿರ ವಡೆ ಖರ್ಚಾಗುತ್ತದೆ ಎಂದು ಉಲ್ಲೇಖಿಸಿದ್ದೀರಿ. ಇದಕ್ಕೆ ಈರುಳ್ಳಿ ಎಲ್ಲಿಂದ ಬರುತ್ತದೆ. ಸ್ಥಳೀಯವಾಗಿ ಸಿಗುತ್ತಾ ಅಥವಾ ಹೇಗೆ ವ್ಯವಸ್ತೆ ಮಾಡಿಕೊಂಡಿದ್ದಾರೆ ತಿಳಿಸಿ ಎಂದಿರುತ್ತದೆ.
ಇದನ್ನೂ ಓದಿ:ಟೊಮೆಟೊಗಳನ್ನು ದೀರ್ಘಕಾಲ ತಾಜಾವಾಗಿಡಲು ಈ ಸಲಹೆ ಪಾಲಿಸಿರಿ
ಆಗ ಮಣಿಕಾಂತ್ ಮತ್ತೆ ಮದ್ದೂರಿಗೆ ಹೋಗಿ ಹೋಟೆಲ್ ಮಾಲಿಕರ ಬಳಿ ಈರುಳ್ಳಿ ಬಗ್ಗೆ ವಿಚಾರಿಸಿದಾಗ ಅವರು, ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಿಂದ ತರಿಸುವುದಾಗಿ ತಿಳಿಸುತ್ತಾರೆ. ಈ ವಿಷಯವನ್ನು ಮಣಿಕಾಂತ್ ಪ್ರಜಾವಾಣಿಗೆ ಅಪ್ಡೇಟ್ ಮಾಡುತ್ತಾರೆ.
ಆನಂತರ, ಕಥೆ ಪ್ರಕಟವಾಗುವ ನಿರೀಕ್ಷೆಯಲ್ಲಿದ್ದಾಗಲೇ ಮತ್ತೊಂದು ಪತ್ರ ಬರುತ್ತದೆ. ಇದಕ್ಕೆ ಎಣ್ಣೆ, ಎಲ್ಲಿಂದ ಬರುತ್ತದೆ, ರವೆ ಎಲ್ಲಿಂದ ಬರುತ್ತದೆ ಎನ್ನುವ ಪ್ರಶ್ನೆಗಳದ್ದು.
ಇದನ್ನೂ ಓದಿ:ಕೂದಲು ಉದುರುವುದು ನಿಲ್ಲಲು ಈ ಹಣ್ಣಿನ ಹೇರ್ ಮಾಸ್ಕ್ ಬಳಸಿ
ಮಣಿಕಾಂತ್ ಇದೊಳ್ಳೆ ಕತೆ ಆಯ್ತಲ್ಲ ಎಂದು ಮತ್ತೆ ಮದ್ದೂರಿಗೆ ಹೋಗುತ್ತಾರೆ. ಹೋಟೆಲ್‌ನವರು ನಿಮ್ಮ ಲೇಖನ ಬರಲೇ ಇಲ್ಲ ಎನ್ನುತ್ತಾರೆ. ಆಗ ಮಣಿಕಾಂತ್ ಎಣ್ಣೆ ರವೆ ಬಗ್ಗೆ ಮಾಹಿತಿ ಪಡೆಯುತ್ತಾರೆ.
ನಂತರ, ಈ ಮದ್ದೂರು ವಡೆಗೆ ಡೂಪ್ಲಿಕೇಟ್ ಕಾಟ ಇಲ್ಲವೇ, ಕಡಿಮೆ ವಸ್ತು ಬಳಸಿ ಕಾಪಿ ಮಾಡುವುದಿಲ್ಲವೆ ಎಂಬ ಮಾಹಿತಿ ಕೇಳಿ ಮತ್ತೊಂದು ಪತ್ರ ಬರುತ್ತದೆ. ಆಗ ಮಣಿಕಾಂತ್ ಮದ್ದೂರಿಗೆ ಪತ್ರದ ಸಮೇತ ಹೋಗಿ ವಿವರಿಸಿ ಮಾಹಿತಿ ಪಡೆಯುತ್ತಾರಂತೆ. ಹೋಟೆಲ್‌ನವರು ಡೂಪ್ಲಿಕೇಟ್ ಎಲ್ಲಾ ಕಡೆ ಇರುತ್ತದೆ. ಆದರೆ, ಅದು ತಿನ್ನುವವರಿಗೆ ಗೊತ್ತಾಗುತ್ತದೆ ಎಂದು ತಿಳಿಸುತ್ತಾರೆ.
ಇಷ್ಟೆಲ್ಲಾ ಆಗುವ ಹೊತ್ತಿಗೆ ನಾಲ್ಕೈದು ತಿಂಗಳಾಗಿದೆ. ಕೊನೆಗೆ ಎಲ್ಲ ಮಾಹಿತಿ ಕಳಿಸಿದಾಗ ಒಂದು ದಿನ ಬೆಳಗ್ಗೆ ಪ್ರಜಾವಾಣಿಯ ಮುಖಪುಟದಲ್ಲಿ ಎ.ಆರ್.ಮಣಿಕಾಂತ್ ಬರೆದ ಮದ್ದೂರು ವಡೆ ಕುರಿತ ಲೇಖನ ಅರ್ಧ ಪುಟದಷ್ಟು ಪ್ರಕಟವಾಗಿತ್ತು. ಅದಕ್ಕೆ ಹಣವೂ ಸಿಕ್ಕಿತು ಎಂದು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರಿಗೆ ವಿವರಿಸಿದರು.
ಇದನ್ನೂ ಓದಿ:ನಿಮ್ಮ ಅತ್ತೆಯ ಮನೆಯಿಂದ ಈ ವಸ್ತುಗಳನ್ನು ಎಂದಿಗೂ ತರಬೇಡಿ, ಇದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳಬಹುದು
ಅಂದರೆ, ಬರಹಗಾರನಿಗೆ ತಾಳ್ಮೆ ಬಹಳ ಮುಖ್ಯ. ಮತ್ತು ವಿಷಯವನ್ನು ಸೂಕ್ಷ್ಮ ಮತ್ತು ಆಳವಾಗಿ ಸಂಗ್ರಹ ಮಾಡುವುದು ಮುಖ್ಯ ಎಂದು ಮದ್ದೂರು ವಡೆಯ ಘಟನೆ ವಿವರಿಸಿದರು.
ಅಮ್ಮ ಹೇಳಿದ ಎಂಟು ಸುಳ್ಳು ಪುಸ್ತಕ ಓದಿ ಪೋನ್ ಮಾಡಿದ ಮಾಜಿ ಸಿಎಂ:
ಇನ್ನೂ ಎ.ಆರ್.ಮಣಿಕಾಂತ್ ಅವರು ಬರೆದ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಅನೇಕರ ಮನಸ್ಸುಗಳನ್ನೇ ಬದಲಾಯಿಸಿದೆ.
ಅದರಲ್ಲಿ ವಿಶೇಷವೆಂದರೆ ಹಲವು ರಾಜಕಾರಣಿಗಳು ಪುಸ್ತಕ ಓದಿದ ನಂತರ ಕಣ್ಣಿರಾಗಿ ಮಣಿಕಾಂತ್ ಅವರಿಗೆ ಫೋನ್ ಮಾಡಿ ಮಾತನಾಡಿರುವುದು.
ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ನೇರಳೆ ಬೀಜದ ಪುಡಿಯನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಕುಡಿದರೆ ಏನಾಗುತ್ತದೆ ಗೊತ್ತಾ?
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ಒಂದು ದಿನ ಮಣಿಕಾಂತ್ ಅವರಿಗೆ ಪೋನ್ ಮಾಡಿ ಮನೆಗೆ ಆಹ್ವಾನ ಮಾಡಿದ್ದನ್ನು ಸ್ಮರಿಸಿಕೊಂಡರು.
ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರೈಲಿನಲ್ಲಿ ಪ್ರಯಾಣಿಸುವಾಗ ಪುಸ್ತಕ ಓದಿ ಭಾವುಕರಾಗಿ ಫೋನ್ ಮಾಡಿದ್ದರು ಎಂದು ಮಣಿಕಾಂತ್ ತಿಳಿಸಿದರು.
ಇದನ್ನೂ ಓದಿ:ಬ್ರಾಂಡ್ ಚಿತ್ರದುರ್ಗ | ಹಿಂದೂ ಎಕನಾಮಿಕ್ ಫೋರಂ ಆಯೋಜನೆ : ಎಂಎಲ್ಸಿ ಕೆ.ಎಸ್.ನವೀನ್ ಭಾಗೀ
ತಮ್ಮ ಪುಸ್ತಕ ಹಾಗೂ ಲೇಖನ ಬರವಣಿಗೆಯಿಂದ ದೇಶಾದ್ಯಂತ ಸಿಕ್ಕಿರುವ ಸಂಪರ್ಕ, ಮನ ಪರಿವರ್ತನೆಯಾದ ಹಲವು ಘಟನೆಗಳನ್ನು ಮಣಿಕಾಂತ್ ಹೇಳಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
