
CHITRADURGA NEWS | 17 SEPTEMBER 2025
ಚಿತ್ರದುರ್ಗ: ಒಳಮೀಸಲಾತಿ ಸಮೀಕ್ಷೆ ವೇಳೆ ಎಕೆ, ಎಡಿ, ಎಎ ಎಂದು ಬರೆಯಿಸಿದವರು ಮೂಲ ಜಾತಿಯಲ್ಲಿ ಬರೆಯಿಸಿಕೊಳ್ಳುವಂತೆ ಸರ್ಕಾರ ಆದೇಶ ಮಾಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.
ಇದನ್ನೂ ಓದಿ: ನಕಲಿ ವೈದ್ಯರ ಪತ್ತೆಗೆ ವಿಶೇಷ ತಂಡ | ಪ್ರತಿ ತಾಲ್ಲೂಕಿನಲ್ಲೂ ಶೋಧನೆ | ಡಿಸಿ

ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಆಗಿದೆ. ಆದಿ ಕರ್ನಾಟಕ, ಆದಿ ಆಂದ್ರ ಎಂದು ಐದು ಲಕ್ಷಜನ ಗುರುತಿಸಿಕೊಂಡಿದ್ದರು. ಅವರು ಮೂಲ ಜಾತಿಯಲ್ಲಿ ಗುರುತಿಸಿಕೊಳ್ಳದಿದ್ದರೆ ಚಿಪ್ಪು ಗತಿ ಆಗುತ್ತದೆ ಎಂದರು.
ಆದಿ ಆಂದ್ರ, ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಎಂದು ಗುರುತಿಸಿಕೊಂಡವರನ್ನು ಸರ್ಕಾರ ಎ ಮತ್ತು ಬಿ ಗುಂಪಿಗೆ ತಕಾ ಅರ್ಧ ಹಂಚಿಕೆ ಮಾಡಿದೆ. ಆದರೆ, ಅವರು ಸರಿಯಾದ ಜಾತಿಯಲ್ಲಿ ಗುರುತಿಸಿಕೊಳ್ಳಲು ಸರ್ಕಾರ ಆದೇಶ ಮಾಡಬೇಕು. ಇದು ವಿಳಂಬ ಆಗುತ್ತಿರುವುದು ಬೇಸರದ ಸಂಗತಿ ಎಂದರು.
ನಿಮ್ಮ ಮೂಲ ಜಾತಿಯಲ್ಲಿ ಗುರುತಿಸಿಕೊಳ್ಳಬೇಕು. ಮಾದಿಗರಾದರೆ ಎ ಗುಂಪು, ಹೊಲೆಯರಾದರೆ ಬಿ ಗುಂಪಿನಲ್ಲಿ ಸೇರಿಕೊಳ್ಳಿ ಎಂದು ಹೇಳಿದರು.ಈಗ ಮತ್ತೆ ಸಮೀಕ್ಷೆ ನಡೆಯುತ್ತಿರುವುದರಿಂದ ಮಾದಿಗರು ಎಚ್ಚೆತ್ತುಕೊಳ್ಳಬೇಕು. ನಮ್ಮ ವಿರುದ್ಧ ಹುನ್ನಾರ ಮಾಡುತ್ತಿದ್ದಾರೆ. ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.
ಸಮಾಜದ ಪ್ರಮುಖರು, ಹೋರಾಟಗಾರರು ಸಮೀಕ್ಷೆ ವೇಳೆ ಸರಿಯಾಗಿ ಬರೆಸದಿದ್ದರೆ ಒಳಮೀಸಲಾತಿ ವಂಚಿತರಾಗುತ್ತೀರಿ.
ಇದನ್ನೂ ಓದಿ: ಶರಣಸಂಸ್ಕೃತಿ ಉತ್ಸವ | ಸೆ.30 ರಂದು ಮುರುಘಾಮಠದಲ್ಲಿ ಜೋಡೆತ್ತು ಮತ್ತು ದೇಶಿತಳಿ ಪ್ರದರ್ಶನ
ಸರ್ಕಾರ ಶಾಶ್ವತವಾಗಿ ಆಯೋಗ ರಚಿಸಲಿದೆ. ಎ ಗುಂಪಿನಲ್ಲಿ ಇರುವವರು ಅತ್ಯಂತ ಹಿಂದುಳಿದವರು. ಮಾದಿಗರನ್ನು ಇದರಿಂದ ತೆಗೆಯಲು ಸಾಧ್ಯವಿಲ್ಲ.ಎಲ್ಲ ಜಾತಿಗಳು ಜಾಗೃತವಾಗಿವೆ. ಕಾಂತರಾಜ ಆಯೋಗದ ವರದಿ ವಿರುದ್ಧ ಹೋರಾಡಿ ಮರು ಸಮೀಕ್ಷೆ ಆಗುವಂತೆ ಮಾಡಿದ್ದಾರೆ.
ಸೆ.20 ರಂದು ಬೆಂಗಳೂರಿನಲ್ಲಿ ಸಚಿವ ಮುನಿಯಪ್ಪ ಜೊತೆ ಸೇರಿ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು.
ಸೆ.15 ರಿಂದ ಮಾಜಿ ದೇವದಾಸಿಯರ ಸಮೀಕ್ಚೆ ನಡೆಯುತ್ತಿದೆ. ಯಾರು ಇದ್ದಾರೆ ಅವರು ನೊಂದಾಯಿಸಿಕೊಳ್ಳಬೇಕು. ಮೂರು ತಲೆಮಾರಿಗೆ ಆಗುವಷ್ಟು ಸೌಲಭ್ಯ ಕೊಡಲಾಗುತ್ತದೆ.
ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಒಳಮೀಸಲಾತಿ ಹೋರಾಟಗಾರ ಶರಣು ರಾಯಚೂರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
