
CHITRADURGA NEWS | 16 SEPTEMBER 2025
ಚತ್ರದುರ್ಗ: ಬಸವಕೇಂದ್ರ, ಶ್ರೀ ಜಗದ್ಗುರು ಮುರುಘರಾಜೆಂದ್ರ ಬೃಹನ್ಮಠ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಶ್ರೀಮುರುಘಾಮಠದ ವತಿಯಿಂದ ನಡೆಯುವ ಶರಣಸಂಸ್ಕೃತಿ ಉತ್ಸವದ ಅಂಗವಾಗಿ ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಜೋಡೆತ್ತು ಮತ್ತು ದೇಶಿತಳಿ ಹಾಗೂ ಸಾಕುಪ್ರಾಣಿಗಳ ಪ್ರದರ್ಶನ ಮತ್ತು ಸ್ಪರ್ಧೆ ಆಯೋಜಿಸಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ | ನಾಳೆ ಉದ್ಘಾಟನೆ

ರೈತಬಾಂಧವರು ಮತ್ತು ಸಾರ್ವಜನಿಕರು ಉತ್ತಮ ತಳಿಯ ಜೋಡೆತ್ತುಗಳು ಮತ್ತು ಸಾಕುಪ್ರಾಣಿಗಳನ್ನು ಪ್ರದರ್ಶಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.
ಬಹುಮಾನ ವಿವರ :
ಜೋಡೆತ್ತುಗಳಿಗೆ ಪ್ರಥಮ ರೂ.15,000, ದ್ವಿತೀಯ 10,000, ತೃತ್ತೀಯ 5,000, ನಾಲ್ಕನೇ ಬಹುಮಾನ 4000, ಐದನೇ ಬಹುಮಾನ 3000, ಆರನೇ ಬಹುಮಾನ 2000, ಏಳನೆ ಬಹುಮಾನ 1000 ರೂಗಳನ್ನು ನಿಗಧಿ ಮಾಡಿದೆ.
ವಿಶೇಷ ಸೂಚನೆ :
ಭಾಗವಹಿಸಿದ ಉತ್ತಮ ಜೋಡೆತ್ತುಗಳಿಗೆ ಸಾಗಾಣಿಕೆ ವೆಚ್ಚಕ್ಕಾಗಿ 1000ರೂ ಹಾಗೂ ಸ್ಥಳೀಯ ಜಾನುವಾರುಗಳಿಗೆ ಸಾಗಾಣಿಕೆ ವೆಚ್ಚಕ್ಕೆ 200 ರಿಂದ 500ರೂ ಗಳು ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಸೆಪ್ಟೆಂಬರ್ 29 ರಂದು ಸಂಜೆ 5 ಗಂಟೆಯೊಳಗೆ ನೊಂದಾಯಿಸಿಕೊಳ್ಳತಕ್ಕದ್ದು.
ಇದನ್ನೂ ಓದಿ: ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಪರಿಶೀಲನೆಗೆ ತಜ್ಞರ ಸಮಿತಿ ರಚನೆ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಭಾಗವಹಿಸಿದ ಎಲ್ಲಾ ಪ್ರಾಣಿಗಳಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ.ಎನ್.ಕುಮಾರ 9741927007, ಡಾ.ಸಿ.ತಿಪ್ಪೇಸ್ವಾಮಿ 9448656231, ಡಾ.ಇಂದಿರಾಬಾಯಿ 9482943111, ಡಾ.ವಿ.ಟಿ.ಮುರುಗೇಶ್ 9886002248, ಟಿ.ತಿಪೇಸ್ವಾಮಿ 9731354986, ಪ್ರಕಾಶ್ ರೆಡ್ಡಿ 9880825652, ವೀರೇಂದ್ರಕುಮಾರ್ 9845396588 ಗೆ ಸಂಪರ್ಕಿಸಬಹುದು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
