CHITRADURGA NEWS | 14 JUNE 2026
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರೂ.44 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ಅನುಮೋದನೆಗೊಂಡರೆ ತಾಲ್ಲೂಕಿನ ಸರ್ಕಾರಿ ಶಾಲೆಗಳ ರೀಪೇರಿ, ಹೊಸ ಕೊಠಡಿಗಳ ನಿರ್ಮಾಣ, ಕೊಠಡಿಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ಎನ್.ಶಿವಕುಮಾರ್ ಆಯ್ಕೆ
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಚಿತ್ರದುರ್ಗ ತಾಲ್ಲೂಕು ಘಟಕದ ನೂತನ ನಿರ್ದೆಶಕರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು.
ಶಿಕ್ಷಕರಾದವರು ಸಮಾಜವನ್ನು ತಿದ್ದುವ ಕಟ್ಟುವ ಕೆಲಸ ಮಾಡುವಂತ ವ್ಯಕ್ತಿಗಳಾಗಿದ್ದಾರೆ. ಶಿಕ್ಷಕರಲ್ಲಿ ವೈಮನಸ್ಸು ಬರಬಾರದು, ಚುನಾವಣೆ ನಡೆದರೆ ದ್ವೇಷಕ್ಕೆ ಕಾರಣವಾಗುತ್ತದೆ ಎಂಬ ಉದ್ದೇಶದಿಂದ ಸಂಘದಲ್ಲಿ ಚುನಾವಣೆ ನೆಡೆಸದೆ ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಎಲ್ಲರು ಒಟ್ಟಾಗಿ ಇರುವಂತ ಕಾರ್ಯ ಮಾಡಲಾಗಿದೆ.
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅನಿವಾರ್ಯ ಆದರೆ ಕೆಲ ಸಮಯದಲ್ಲಿ ಅವಿರೋಧ ಆಯ್ಕೆಯೂ ಅಗತ್ಯವಾಗುತ್ತದೆ. ರಾಜ್ಯದಲ್ಲಿ ಚಿತ್ರದುರ್ಗ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ಪ್ರಥಮವಾಗಿದೆ ಎಂದರು.
ಇದನ್ನೂ ಓದಿ: ಕಥೆಗಾರ ಎ.ಆರ್.ಮಣಿಕಾಂತ್ ಹೇಳಿದ ಮದ್ದೂರು ವಡೆಯ ಕಥೆ..!
ಈಗ ಆಯ್ಕೆಯಾಗಿರುವ ಪದಾಧಿಕಾರಿಗಳು, ಶಿಕ್ಷಕರು ಸಮಸ್ಯೆಯನ್ನು ಅರಿತು ಅದರ ಪರಿಹಾರದ ಕಡೆಗೆ ಗಮನ ನೀಡಿ. ನಾನು ಯಾವೂತ್ತು ಸಹಾ ನಿಮ್ಮ ಜೊತೆಯಲ್ಲಿ ಇದ್ದೇನೆ. ನಿಮ್ಮ ಯಾವುದೇ ಸಮಸ್ಯೆ ಬಂದರು ಸಹಾ ಅದರ ಪರಿಹಾರಕ್ಕೆ ಮುಂದೆ ಇರುತ್ತೇನೆ. ಇದೇ ರೀತಿ ಸಂಘವೂ ಸಹಾ ಶಿಕ್ಷಕರ ಸಮಸ್ಯೆ ಪರಿಹಾರದಲ್ಲಿ ಮುಂದೆ ಇರಬೇಕಿದೆ. ಶಿಕ್ಷಕರ ಸಮಸ್ಯೆಯ ಬಗ್ಗೆ ಧ್ವನಿಯನ್ನು ಎತ್ತಬೇಕಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣ ಮಾಡುವಂತೆ ಬೇಡಿಕೆ ಇಡಲಾಗಿದೆ. ಇದರ ಬಗ್ಗೆ ನನ್ನ ಪೂರ್ಣವಾದ ಸಹಕಾರ ಬೆಂಬಲ ಇದೆ. ನಾನು ಹಾಗೂ ಜಿಲ್ಲೆಯ ಇತರೆ ಚುನಾಯಿತ ಪದಾಧಿಕಾರಿಗಳ ಸಹಕಾರದೊಂದಿಗೆ ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ ಮಾತನಾಡಿ, ಪ್ರಾಥಮಿಕ ಶಾಲಾ ಚಿತ್ರದುರ್ಗ ತಾಲ್ಲೂಕು ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಮಾಡುವಂತೆ ಶಾಸಕರ ನಿರ್ದೆಶನದ ಮೇರೆಗೆ, ಸಂಘಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಬ್ರಾಂಡ್ ಚಿತ್ರದುರ್ಗ | ಹಿಂದೂ ಎಕನಾಮಿಕ್ ಫೋರಂ ಆಯೋಜನೆ : ಎಂಎಲ್ಸಿ ಕೆ.ಎಸ್.ನವೀನ್ ಭಾಗೀ
ಈಗ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸಂಘವೂ ಮುಂದಿನ ದಿನದಲ್ಲಿ ಉತ್ತಮವಾದ ಕೆಲಸ ಮಾಡಲಿ. ಶಿಕ್ಷಕರ ಸಮಸ್ಯೆ ಪರಿಹಾರ ಮಾಡುವ ನಿಟ್ಟನಲ್ಲಿ ಕ್ರಮ ತೆಗೆದುಕೊಳ್ಳಲಿ. ಪ್ರಾಥಮಿಕ ಶಾಲಾ ಶಿಕ್ಷಕರು ತಾವು ಕಲಿಸಿದ ಮಕ್ಕಳು ಉನ್ನತವಾದ ಸ್ಥಾನವನ್ನು ಪಡೆದಾಗ ಅವರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ತಂದೆ-ತಾಯಿಯವರಿಗಿಂತಲೂ ಹೆಚ್ಚಾಗಿ ಸಂತೋಷವನ್ನು ಪಡುವವರು ಶಿಕ್ಷಕರಾಗಿದ್ದಾರೆ.
ಸರ್ಕಾರ ಶಿಕ್ಷಕರುಗಳಿಗೆ ತಮ್ಮ ಕೆಲಸದ ಜೊತೆಗೆ ಇತರೆ ಕೆಲಸವನ್ನು ಸಹಾ ವಹಿಸುತ್ತಿದೆ, ಇದರಿಂದ ಶಿಕ್ಷಕರುಗಳಿಗೆ ಭೋಧನೆ ಮಾಡಲು ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರನ್ನು ಅನ್ಯ ಕಾರ್ಯಕ್ರಮಗಳಿಂದ ದೂರ ಇರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಸಂಘದ ಹಿಂದಿನ ಪದಾಧಿಕಾರಿಗಳು ನೂತನ ಸಂಘದ ಪಧಾಧಿಕಾರಿಗಳು ಅಧಿಕಾರವನ್ನು ಹಸ್ತಾಂತರ ಮಾಡಿದರು.
ಇದನ್ನೂ ಓದಿ: ದಿವ್ಯಾಂಗ ಜನ ಪ್ರಯಾಣಿಕರಿಗೆ ರಿಯಾಯಿತಿ ಗುರುತಿನ ಚೀಟಿ | ಆನ್‌ಲೈನ್ ಮೂಲಕ ವಿತರಣೆ
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇಶಕರಾದ ಮಂಜುನಾಥ್, ಮಹಾಂತೇಶ, ಶಿವಕುಮಾರ್, ಮಹೇಶ್ ಮಹಾಂತೇಶ್, ಶ್ರೀನಿವಾಸ್, ರಾಜಪ್ಪ, ರಮೇಶ್, ಕೆಂಚಪ್ಪ, ವಿಮಲಾಕ್ಷಮ್ಮ, ಶಿವಣ್ಣ, ಚಿದಾನಂದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
