CHITRADURGA NEWS | 14 JUNE 2026
ಚಿತ್ರದುರ್ಗ: ಹೆಚ್ಚು ಹೆಚ್ಚು ಓದಿದಷ್ಟು ಹೆಚ್ಚು ಬರೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಎ.ಆರ್.ಮಣಿಕಾಂತ್ ತಿಳಿಸಿದರು.

ಇದನ್ನೂ ಓದಿ: ಸ್ವಯಂಕೃತ ಅಪರಾಧದಿಂದ ಚುನಾವಣೆ ಸೋತಿದ್ದೇನೆ | ಎಚ್.ಆಂಜನೇಯ
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ಅಂಕಣಕಾರರಾಗಲು ನಡೆಸುವ ಸಿದ್ದತೆ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೆ ಕಥೆ ಅಥವಾ ಬರಹ ಒಂದಲ್ಲ ಎರಡು ಸಲ ಬರೆದಾಗ ಇನ್ನಷ್ಟು ಚೆನ್ನಾಗಿ ಮೂಡಿಬರುತ್ತದೆ. ಬರಹಗಾರನಿಗೆ ತಾಳ್ಮೆ ಬಹಳ ಮುಖ್ಯವಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಬರವಣಿಗೆ ಇನ್ನಷ್ಟು ಸುಲಭವಾಗುತ್ತದೆ ಎಂದರು.
ಕೆಲವೊಮ್ಮೆ ಬರಹಕ್ಕೆ ವಿಷಯ, ವಸ್ತು ಸಿಗುವುದು ತಡವಾಗುತ್ತದೆ. ಒಂದೇ ವಿಷಯಕ್ಕೆ ಅಂಟಿಕೊಂಡಿದ್ದರೆ ಕೆಲ ಸಲ ಸಮಸ್ಯೆ ಆಗುತ್ತದೆ. ಅದಕ್ಕೆ ಪ್ಲಾನ್ ಎ, ಬಿ ಹೀಗೆ ಸಿದ್ಧತೆ ಮಾಡಿಕೊಂಡಿರಬೇಕು. ನಾವು ಬರೆದಿದ್ದನ್ನು ಆತ್ಮೀಯರು, ಸ್ನೇಹಿತರಿಗೆ ಕಳಿಸಿ ಅವರ ಅಭಿಪ್ರಾಯ ಪಡೆಯುವುದು ಒಳ್ಳೆಯ ಅಭ್ಯಾಸ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ತಾಲೂಕಿನ ಶಾಲೆಗಳ ಅಭಿವೃದ್ಧಿಗೆ 44 ಕೋಟಿ ಪ್ರಸ್ತಾವನೆ | ಶಾಸಕ ವೀರೇಂದ್ರ ಪಪ್ಪಿ
ಪ್ರತಿ ವಾರ ಒಂದೇ ರೀತಿಯ ಕಥೆ ಅಥವಾ ಅಂಕಣ ಬರೆಯಬಾರದು. ಬದಲಾವಣೆ ಇರಬೇಕು. ಓದುಗರಿಗೆ ಬೇಸರ ಆಗದಂತೆ ಬರೆಯಬೇಕು ಎಂದು ವಿದ್ಯಾರ್ಥಿಗಳು ಸಾಹಿತ್ಯಾಸಕ್ತರಿಗೆ ವಿವರಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಆಧುನಿಕ ಮಾಧ್ಯಮಗಳ ಕಾರಣಕ್ಕೆ ಓದು ಕಡಿಮೆಯಾಗಿದೆ ಅನ್ನಿಸುವ ಕಾಲಘಟ್ಟದಲ್ಲಿದ್ದೇವೆ. ಬಹಳ ವೇಗದ ಕಾಲಕ್ಕೆ ಹೋಗಿದ್ದೇವೆ. ಆದರೆ, ಮತ್ತೆ ವಾಪಾಸು ಬರುತ್ತೇವೆ. ಸಾಹಿತ್ಯದ ಓದು, ಶಾಂತಿ ಸಮಾಧಾನ ಬೇಕಾಗುತ್ತದೆ. ಟಿವಿ ಬಿಟ್ಟು ಪುಸ್ತಕ ಹಿಡಿಯುವ ಕಾಲ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಲ್ಲಿ ಪ್ರಾದೇಶಿಕವಾರು ಸಾಹಿತ್ಯ ಪ್ರಕಾರ ಬದಲಾಗುತ್ತವೆ. ರೈತ ಚಳುವಳಿ ಮೂಲಕ ಹುಟ್ಟಿ ಕ್ರಾಂತಿಕಾರಿ ಸಾಹಿತ್ಯ, ದ್ರಾವಿಡ ಸಾಹಿತ್ಯ. ಕರ್ನಾಟಕದ ಹೆಮ್ಮೆಯ ವಚನ ಸಾಹಿತ್ಯ. ಇದಕ್ಕಿಂತ ಮೊದಲೂ ದೊಡ್ಡ ದೊಡ್ಡ ಕವಿ, ಸಾಹಿತಿಗಳು ಉತ್ತಮ ಕಾಣ್ಕೆ ಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ಎನ್.ಶಿವಕುಮಾರ್ ಆಯ್ಕೆ
ಉತ್ತಮ ವಾತಾವರಣದಲ್ಲಿ ಮಾತ್ರ ಸಾಹಿತ್ಯ ಹೊರ ಹೊಮ್ಮುತ್ತದೆ ಎನ್ನುತ್ತೇವೆ. ಆದರೆ, ಬರಡು ಭೂಮಿ ಚಿತ್ರದುರ್ಗದಲ್ಲೂ ತರಾಸು ಸೇರಿದಂತೆ ಹಲವು ದೊಡ್ಡ ಸಾಹಿತಿಗಳು ಕೊಡುಗೆ ನೀಡಿದ್ದಾರೆ ಎಂದರು.
ಬರೆಯುವವರು ಮಾತ್ರ ಸಾಹಿತಿಗಳು ಅಂದುಕೊಳ್ಳುತ್ತೇವೆ. ಆದರೆ, ಬರವಣಿಗೆ ಇಲ್ಲದೆ ಉತ್ತಮವಾಗಿ ಮಾತನಾಡುವವರೂ ನಮ್ಮ ನಡುವೆ ಇದ್ದಾರೆ. ಸಂಘ, ಸಂಸ್ಥೆಗಳು, ಮಠ ಮಾನ್ಯಗಳು ಸಾಹಿತ್ಯಕ್ಕೆ ಒತ್ತು ನೀಡುತ್ತೇವೆ. ವೇದಿಕೆ ದೊಡ್ಡದು, ಚಿಕ್ಕದು ಎನ್ನುವುದು ಮುಖ್ಯವಲ್ಲ. ಅರ್ಥಪೂರ್ಣ ಕಾರ್ಯಕ್ರಮ ಮುಖ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುವ ಮೂಲಕ ಸಮಾಜದಲ್ಲಿ ಸದಭಿರುಚಿ ಮೂಡಿಸಬಹುದು. ಇದಕ್ಕೆ ಸದಾ ನಮ್ಮ ಸಹಕಾರ ಇರುತ್ತದೆ ಎಂದರು.
ಇದನ್ನೂ ಓದಿ: ಬ್ರಾಂಡ್ ಚಿತ್ರದುರ್ಗ | ಹಿಂದೂ ಎಕನಾಮಿಕ್ ಫೋರಂ ಆಯೋಜನೆ : ಎಂಎಲ್ಸಿ ಕೆ.ಎಸ್.ನವೀನ್ ಭಾಗೀ
ಕಾರ್ಯಕ್ರಮದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್, ನ್ಯಾಯವಾದಿ ಬಿ.ಕೆ.ರೆಹಮತ್ ಉಲ್ಲಾ, ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮ್, ಕಾರ್ಯದರ್ಶಿ ಎಚ್.ಸತೀಶ್ ಕುಮಾರ್, ವೈ.ಬಿ.ಜಯದೇವಮೂರ್ತಿ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
