CHITRADURGA NEWS | 07 JANUARY 2026
ಚಿತ್ರದುರ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಾಧನೆ ಯೋಜನೆಯನ್ನು ಡಿ.ಬಿ.ಟಿ ನೇರ ನಗದು ವರ್ಗಾವಣೆ ತಂತ್ರಾಂಶದಡಿ ಸೇವಾಸಿಂಧು ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನ.
ಇದನ್ನೂ ಓದಿ: ಚಂದ್ರವಳ್ಳಿ ಶಾಸನ | ಡಾ.ಎಂ.ಎಚ್.ಕೃಷ್ಣ ಓದಿದ್ದೇ ಸತ್ಯ | ಡಾ.ಮಹಾಂತೇಶ್
ಸಾಧನೆ ಯೋಜನೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನೇರವಾಗಿಯೂ ಸಹ ತಮ್ಮ ಲಾಗಿನ್ ಬಳಸಿ ಸೇವಾಸಿಂಧು ಪೋರ್ಟಲ್‍ನಡಿ https://sevasindhuservices.karnataka.gov.in ಆನ್‍ಲೈನ್ ಮೂಲಕ ವಿಕಲಚೇತನರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ಸ್ವೀಕೃತಿಯೊಂದಿಗೆ ಎಲ್ಲಾ ಪೂರಕ ದಾಖಲಾತಿಗಳ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ)ಗಳಿಗೆ ಸಲ್ಲಿಸುವುದು.
ಮಾಹಿತಿಗಾಗಿ ಎಂ.ಆರ್.ಡಬ್ಲೂಗಳ ದೂರವಾಣಿ ಸಂಖ್ಯೆ ಚಿತ್ರದುರ್ಗ- 9880821934, ಚಳ್ಳಕೆರೆ- 9611266930, ಹಿರಿಯೂರು- 9902888901, 9902898901 ಹೊಳಲ್ಕೆರೆ- 9740030227, ಹೊಸದುರ್ಗ- 9741829990, ಮೊಳಕಾಲ್ಮೂರು- 9742725576 ಗೆ ಸಂಪರ್ಕಿಸಲು ಕೋರಿದೆ.
ಇದನ್ನೂ ಓದಿ: ಶ್ರೀಕೃಷ್ಣ ದೇವಸ್ಥಾನ, ಶಾಲೆ, ಆಸ್ಪತ್ರೆ ನಿರ್ಮಿಸುವಷ್ಟು ಜಾಗ ಕೊಡಿ | ಪೇಜಾವರ ಶ್ರೀ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ, ಬುದ್ದನಗರ, ಚಿತ್ರದುರ್ಗ, ದೂ: 08194-235284ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
