CHITRADURGA NEWS | 07 January 2026
ಚಳ್ಳಕೆರೆ: ನದಿಯಲ್ಲಿ ತೆಪ್ಪ ಮಗುಚಿ ಯುವಕ ನೀರು ಪಾಲಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಸಾಧನೆ ಯೋಜನೆಗೆ ಅರ್ಜಿ ಆಹ್ವಾನ
ಚಳ್ಳಕೆರೆ ತಾಲೂಕು ಸಾಣಿಕೆರೆ ಬಳಿ ವೇದಾವತಿ ನದಿಯಲ್ಲಿ ಈ ದುರ್ಘಟನೆ ಜರುಗಿದೆ.
ಹಿರಿಯೂರು ತಾಲ್ಲೂಕಿನ ಓಬಳಾಪುರ ಮೂಲದ ಧನುಷ್(21) ಈಜು ಬಾರದೆ ಮೃತಪಟ್ಟಿದ್ದಾನೆ.
ಮೂವರು ಸಹೋದರರು ಮೀನು ಹಿಡಿಯಲು ತೆರಳಿದ್ದು, ಈ ವೇಳೆ ತೆಪ್ಪ ಮಗುಚಿದೆ. ಜೊತೆಗಿದ್ದ ಯಶವಂತ್, ಬಾಲಾಜಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ಬಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ಧನುಷ್ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಜನವರಿ 09 ರಂದು ಉಚಿತ ಕಣ್ಣಿನ ತಪಾಸಣೆ
ಮೃತದೇಹ ಕಂಡು ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಹಾಗೂ ಪರಶುರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
