CHITRADURGA NEWS | 06 JANUARY 2026
ಚಿತ್ರದುರ್ಗ: ಚಂದ್ರವಳ್ಳಿಯಲ್ಲಿ ಐತಿಹಾಸಿಕ ಮಯೂರಶರ್ಮನ ಶಾಸನವನ್ನು 1928 ರಲ್ಲಿ ಡಾ.ಎಂ.ಎಚ್.ಕೃಷ್ಣ ದಾಖಲಿಸಿರುವುದೇ ಸತ್ಯ. ಇದರಲ್ಲಿ ಯಾವುದೇ ಗೊಂದಲ ತಪ್ಪು ಇಲ್ಲ ಎಂದು ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಮ್ಮ ದುಡ್ಡು ಕೊಡಲಿಲ್ಲ ಅಂತಾ ಬೆಂಕಿ ಹಚ್ಚಿಕೊಂಡ ಮಗ
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರು 1984 ರಲ್ಲಿ ಮಯೂರ ಶರ್ಮನ ಶಾಸನವನ್ನು ಮರುಪರಿಶೀಲನೆ ನಡೆಸಿರುವುದು ಊಹಾ ಪಾಠವಾಗಿದ್ದು, ಎಂ.ಎಚ್.ಕೃಷ್ಣ ಅವರ ಪಾಠಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ರಾಜಶೇಖರಪ್ಪ ಮಯೂರ ಶರ್ಮನ ಐತಿಹಾಸಿಕ ಸಂಗತಿಗಳನ್ನು ಕೈಬಿಟ್ಟಿದ್ದಾರೆ. ಇದರಿಂದ ಮಯೂರ ಶರ್ಮನ ಇತಿಹಾಸ ಕರ್ನಾಟಕದ ಪ್ರಾರಂಭದ ರಾಜಕೀಯ ಚರಿತ್ರೆಗೆ ಧಕ್ಕೆಯುಂಟಾಗಿದೆ ಎಂದು ಆಪಾದಿಸಿದರು.
ಡಾ.ಎಂ.ಎಚ್.ಕೃಷ್ಣರವರು ಚಂದ್ರವಳ್ಳಿ ಶಾಸನವನ್ನು ಪತ್ತೆ ಹಚ್ಚಿದಾಗ ಹುಲ್ಲೂರು ಶ್ರೀನಿವಾಸ ಜೋಯಿಸರು ಸಹಾಯ ಮಾಡುತ್ತಾರೆ. ಮೂರು ಸಾಲಿನ ಈ ಶಾಸನ ಕ್ರಿ.ಶ.258 ಕ್ಕೆ ಸೇರಿದ್ದು, ಮೂಲ ಶಾಸನ ಚರಿತ್ರೆ ಕಟ್ಟಲು ಇತಿಹಾಸ ಬೇಕು. ಮೈಸೂರಿನಿಂದ ಇಲ್ಲಿಗೆ ಬಂದು ಚಂದ್ರವಳ್ಳಿಯಲ್ಲಿ ಕೆಲಸ ಮಾಡುತ್ತಾರೆ. ವಿಶೇಷವಾದ ಈ ಶಾಸನದ ಬಗ್ಗೆ ಯಾವ ವಿದ್ವಾಂಸರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ, 1984 ರಲ್ಲಿ ಇದೆ ಶಾಸನವನ್ನು ಮರು ಪರಿಶೀಲಿಸಿದ ಡಾ.ಬಿ.ರಾಜಶೇಖರಪ್ಪ ಪದಗಳನ್ನು ಬದಲಿಸಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿತ್ತು ಎಂದರು.
ಕರ್ನಾಟಕ ರಾಜಕೀಯ ಚರಿತ್ರೆಗೆ ಹಾಗೂ ಕದಂಬರ ಚರಿತ್ರೆಗೆ ಅನೇಕ ಹೊಸ ಸಂಗತಿಗಳು ಸೇರ್ಪಡೆಗೊಂಡು ಆ ಮೂಲಕ ಇಂತಹ ಅಮೂಲ್ಯ ಶಾಸನ ಪ್ರಕಟಿಸಿದ ಡಾ.ಎಂ.ಎಚ್.ಕೃಷ್ಣ ಅವರಿಗೆ ಹಿರಿಮೆ, ಗರಿಮೆ ಪ್ರಾಪ್ತವಾದವು.
ಇದನ್ನೂ ಓದಿ: ಕನಕ ಗುರುಪೀಠದ ಈಶ್ವರಾನಂದಪುರಿ ಶ್ರೀ ಸಾನ್ನಿಧ್ಯದಲ್ಲಿ ಸಜ್ಜನಕೆರೆ ಭಕ್ತರ ಸಭೆ
ಈ ಶಾಸನ ಪಾಠದ ಪಡಿಯಚ್ಚನ್ನು ಅವಲೋಕಿಸಿದ ಕೆಲವು ವಿದ್ವಾಂಸರು ಅದರಲ್ಲಿನ ಹಲವು ಸಂಗತಿಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಇಡಿ ಶಾಸನ ಪಾಠವನ್ನು ಯಾರು ಬದಲಿಸಲಿಲ್ಲ. ಚಿತ್ರದುರ್ಗದ ಸ್ಥಳೀಯ ಶಾಸನ ತಜ್ಞರಾದ ಡಾ.ಬಿ.ರಾಜಶೇಖರಪ್ಪನವರು ಚಂದ್ರವಳ್ಳಿ ಶಾಸನವನ್ನು ಪುನರ್ ಪರಿಶೀಲನೆ ಮಾಡುವುದರ ಮೂಲಕ ಇಡಿ ಶಾಸನ ಪಾಠವನ್ನು ಬದಲಿಸಿ ಹೊಸ ವಿವರಣೆ ನೀಡಿದರೆ ವಿನಃ ಶಾಸನ ಪಾಠದ ಪಡಿಯಚ್ಚನ್ನು ತೆಗೆಯಲಿಲ್ಲ. ಅಕ್ಷರ ಸಂಸ್ಕøತಿಯನ್ನು ಮೊಟ್ಟ ಮೊದಲು ಚಿತ್ರದುರ್ಗದಲ್ಲಿ ಕೊಟ್ಟಿದ್ದು, ಮಯೂರ ಶರ್ಮ. ಅದಕ್ಕಾಗಿ ಅಧ್ಯಯನ ಶಾಸನಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
