CHITRADURGA NEWS | 13 AUGUST 2026
ಚಿತ್ರದುರ್ಗ: ಹೆಚ್.ಎ.ಎಲ್ (ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್)ನಲ್ಲಿ ಫಿಟ್ಟರ್, ಮೆಕಾನಿಕ್, ಟರ್ನರ್, ಎಲೆಕ್ಟ್ರೀಷಿಯನ್, ವೆಲ್ಡರ್, ಕಂಪ್ಯೂಟರ್ ಆಪರೇಟರ್, ಫೌಂಡ್ರಿ ಮೆನ್, ಟೂಲ್ ಅಂಡ್ ಡೈ ಮೇಕರ್, ಸಿಎನ್‍ಸಿ ಪ್ರೋಗ್ರಾಮರ್ ಕಮ್ ಆಪರೇಟರ್, ರೆಫ್ರಿಜಿರೇಟರ್ ಅಂಡ್ ಏರ್ ಕನ್‍ಡಿಷನರ್ ಮೆಕಾನಿಕ್ ಟ್ರೇಡ್‍ಗಳ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ.
ಇದನ್ನೂ ಓದಿ: ಮಳೆ ಕೊರತೆ | ಬಿತ್ತನೆ ವೈಫಲ್ಯ, ಮಧ್ಯಂತರ ಪರಿಹಾರಕ್ಕೆ ಶಿಫಾರಸ್ಸು ಮಾಡಿ | ರಘುಮೂರ್ತಿ
ಅಪ್ರೆಂಟಿಸ್ ತರಬೇತಿ ಒಂದು ವರ್ಷದ ಅವಧಿಯಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಸಂಬಂಧಪಟ್ಟ ಟ್ರೇಡ್‍ಗಳಲ್ಲಿ ಐ.ಟಿ.ಐ ಪ್ರಮಾಣ ಪತ್ರ ಅಥವಾ ಸ್ವ ದೃಢೀಕೃತ ರಿಸಲ್ಟ್ ಶಿಟ್, ಆಧಾರ್ ಮತ್ತು ಪಾನ್ ಕಾರ್ಡ್, ಜಾತಿ, ಅಂಗವಿಕಲರ, ಆರ್ಮಡ್ ಪರ್ಸನಲ್ ಪ್ರಮಾಣ ಪತ್ರಗಳು, ಎನ್.ಸಿ.ವಿ.ಟಿ. ಎಮ್.ಐ.ಎಸ್. ಪೋರ್ಟಲ್ ನೊಂದಣಿ ಪ್ರಮಾಣ ಪತ್ರ, 4 ಪೋಟೋ ಗಳೊಂದಿಗೆ ವೆಬ್ ಸೈಟ್ https://apprenticeshipindia.
ಅರ್ಜಿ ಸಲ್ಲಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಚಿತ್ರದುರ್ಗ ಇಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945587060, 7022459064, ಅಥವಾ 7019755147 ಸಂಪರ್ಕಿಸುವಂತೆ ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

