CHITRAUDRGA NEWS | 16 NOVEMBER 2026
ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪಾಳೇಗಾರರ ಅವಧಿಯ ಅಪರೂಪದ ಶಾಸನ ಪತ್ತೆಯಾಗಿದೆ ಎಂದು ಸಂಶೋಧಕ ಡಾ.ಮಹೇಶ್ಕುಂಚಿಗನಾಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | 16 ನವೆಂಬರ್ | ಯಾವ ಅಡಿಕೆ ರೇಟ್ ಎಷ್ಟಾಯ್ತು
ಖ್ಯಾತ ಸಂಶೋಧಕರಾದ ಡಾ.ಲಕ್ಷಣ್ ತೆಲಗಾವಿಯವರ ಸೂಚನೆಯ ಮೇರೆಗೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ಈ ಶಾಸನ ಪತ್ತೆಯಾಗಿದೆ. ದೇವಾಲಯವನ್ನು ಹೊಂದಿಕೊಂಡಂತೆ ಆಹೋಬಲ ನರಸಿಂಹ ದೇವಾಲಯದ ಸಮೀಪದಲ್ಲಿ ಶಾಸನ ಪತ್ತೆಯಾಗಿದೆ.
ಶಾಸನವನ್ನು ಪರಿಶೀಲಿಸಿದ ಡಾ.ಮಹೇಶ್, ವಿಜಯನಗರ ಪತನದ ನಂತರದ ಪಾಳೇಯಗಾರರ ಅವಧಿಗೆ ಸಂಬಂಧಪಟ್ಟದೆಂದು ಧೃಢಪಡಿಸಿದ್ದು, ಹೊರಕೇರೆ ಶ್ರೀ ರಂಗನಾಥಸ್ವಾಮಿ ದೇವಾಲಯವು ವಿವಿಧ ಅರಸರುಗಳ ಕಾಲದಲ್ಲಿ ಅಭಿವೃದ್ದಿಯಾಗುತ್ತ ಬಂದಿದೆ. ಪಾಳೇಯಗಾರರ ಆಡಳಿತ ಪೂರ್ವದಲ್ಲೇ ದೇವಾಲಯ ನಿರ್ಮಾಣವಾಗಿದೆ.
ಗರ್ಭಗುಡಿಯ ಮುಂದೆ ಇರುವ ಕಂಬಗಳು ಹೊಯ್ಸಳ ಶೈಲಿಯನ್ನು ನೆನಪಿಸುತ್ತವೆ. ಈ ದೇವಾಲಯದ ನವರಂಗದ ಕಂಬದ ಮೇಲೆ ಕೊರೆಯಲಾಗಿರುವ ಕ್ರಿ.ಶ 1465ರ ಶಾಸನದಲ್ಲಿ ರಂಗನಾಥ ದೇವಾಲಯವನ್ನು ತಿರುವೆಂಗಳನಾಥ (ವೆಂಕಟನಾಥ) ದೇವರು ಎಂದು ಕರೆಯಲಾಗಿದೆ.
ಇದನ್ನೂ ಓದಿ: ಡಿಸೆಂಬರ್ 3 ಮತ್ತು 4 | ಮಾರಮ್ಮ ದೇವಿ ದೇವಸ್ಥಾನ ಲೋಕಾರ್ಪಣೆ
ಈ ದೇವಾಲಯದ ಸಮೀಪ ಸಿಕ್ಕಿರುವ ಕಸ್ತೂರಿ ರಂಗಪ್ಪನಾಯಕರ ಕಾಲದ ಕ್ರಿ.ಶ. 1756ರ ಶಾಸನವೊಂದರಲ್ಲಿ ಹೊರಕೆರೆ ರಂಗಧಾಮ ಎಂದು ಕರೆಯಲಾಗಿದೆ. 15ನೇ ಶತಮಾನದ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ತಿರುವೆಂಗನಾಥ ಎಂಬ ಹೆಸರು ಕಣ್ಮರೆಯಾಗಿ ರಂಗಧಾಮ ಎಂದು ಹದಿನೆಂಟನೆಯ ಶತಮಾನದ ಹೊತ್ತಿಗೆ ಕರೆಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಹೊಸ ಶಾಸನವು ಐದು ಸಾಲುಗಳನ್ನು ಒಳಗೊಂಡಿದ್ದು, ನಂದನ ಹೊಸೂರಿನ ಗೋವಿಂದ ನೀಡಿದ ಸೇವೆಯನ್ನು ತಿಳಿಸುತ್ತದೆ. ಯಾವ ರೀತಿಯ ಸೇವೆ ಎಂಬುದು ಶಾಸನ ತ್ರುಟಿತವಾಗರಿವುದರಿಂದ ತಿಳಿದು ಬಂದಿರುವುದಿಲ್ಲ. ದೇವಾಲಯದ ಪ್ರಕಾರದ ಗೋಡೆಯಲ್ಲಿ ಶಾಸನ ಇರುವುದರಿಂದ ನಂದನ ಹೊಸೂರಿನ ಗೋವಿಂದ ಈ ದೇವಾಲಯದ ಪ್ರಾಕಾರ ಗೋಡೆಯನ್ನು ನಿರ್ಮಿಸಿರಬೇಕೆಂದು ಡಾ.ಮಹೇಶ್ರವರು ಅಭಿಪ್ರಾಯಪಟ್ಟಿದ್ದಾರೆ.
ಶಾಸನದಲ್ಲಿ ಪ್ರಮತಿ ಸಂವತ್ಸರದ ಬಳಕೆಯಾಗಿರುವುದರಿಂದ 1639 ಹಾಗೂ 1693ರ ಅವಧಿಯದ್ದಾಗಿರಬಹುದೆಂದು ತಿಳಿಸಿದ್ದಾರೆ. ಈ ಎರಡು ಅವಧಿಯಲ್ಲಿ ಪ್ರಮತಿ ಸಂವತ್ಸರ ಕಾಣಿಸಿಕೊಂಡಿದ್ದಾರೆ. ಸ್ಥಳೀಯ ಜನಪದೀಯ ಐತಿಹ್ಯಗಳಲ್ಲಿ ನಂದನ ಹೊಸೂರಿನ ಹೊತೆಗೆ ಇರುವ ಸಾಂಸ್ಕೃತಿಕ ಸಂಘರ್ಷವನ್ನು ಬೇರೊಂದು ನೆಲೆಯಲ್ಲಿ ಅರ್ಥೈಸಲು ಈ ಶಾಸನ ಮಹತ್ವದ ದಾಖಲೆಯಾಗಿದೆ ಎಂದು ಡಾ.ಮಹೇಶ್ ರವರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆಗಾಗಿ ದಾಖಲಾಗಿದ್ದ ಅನಾಮಧೇಯ ವ್ಯಕ್ತಿ ಸಾವು | ಗುರುತು ಪತ್ತೆಗೆ ಮನವಿ
ಶಾಸನ ಪಠ್ಯ ಓದಿಕೊಟ್ಟ ಶಾಸನ ತಜ್ಞರಾದ ಶಶಿಕುಮಾರ್ನಾಯಕ ಕ್ಷೇತ್ರಕಾರ್ಯದಲ್ಲಿ ನೆರವಾದ ದೇವಾಲಯದ ಅರ್ಚಕರಾದ ಹೊರಕೇರಪ್ಪ, ಪ್ರಿಯಾಂಕ, ಪ್ರತ್ಯುಷ್, ಪ್ರಬುದ್ಧರನ್ನು ನೆನೆದಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

