CHITRADURGA NEWS | 16 NOVEMBER 2026
ಚಿತ್ರದುರ್ಗ: ಜಾಗತಿಕ ಭಾಷೆ ಎನಿಸಿಕೊಂಡಿರುವ ಇಂಗ್ಲೀಷ್ನ ಜಾಗತೀಕರಣದಿಂದ ಸ್ಥಳೀಯ ಭಾಷೆಗಳು ಅವಸಾನದ ಅಂಚಿನಲ್ಲಿವೆ. ಗ್ರಾಮೀಣ ಭಾಗದಲ್ಲಿರುವ ರೈತರು ಪ್ರತಿದಿನ ನೂರಾರು ಇಂಗ್ಲೀಷ್ ಪದಗಳನ್ನು ಬಳಸುತ್ತಿದ್ದಾರೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗಾಯತ್ರಿ ಜಲಾಶಯದ ಬಳಿ ನೂತನ ಗೋಶಾಲೆ | ಜಿಲ್ಲಾಧಿಕಾರಿ ರಮ್ಯಾ ಚಾಲನೆ
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಹಿಂದಿನ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಕಾಲ ಬದಲಾಗಿದೆ. ಮೊಬೈಲ್ ರೀಲ್ಸ್ ತೋರಿಸಿ ಮಕ್ಕಳನ್ನು ಬೆಳೆಸುವ ಪ್ರವೃತ್ತಿ ಚಾಲನೆಗೆ ಬಂದಿದೆ. ಮೊಬೈಲ್ನಿಂದ ಸಾಮಾಜಿಕ ಸಂಬಂಧಗಳು ಕುಸಿಯುತ್ತಿವೆ ಎಂದರು.
ಕುವೆಂಪು, ಬೇಂದ್ರೇ ಸೇರಿದಂತೆ ನಾಡಿದ ಶ್ರೇಷ್ಠ ಕವಿಗಳು ತಮ್ಮ ಜೀವನದ ಅನುಭವಗಳನ್ನು ತಮ್ಮ ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಸಿಹಿ,ಕಹಿ ಅನುಭವಗಳು ಕವನ, ಕಥೆಗಳ ರೂಪದಲ್ಲಿ ಹೊರಹೊಮ್ಮುತ್ತವೆ. ಶರಣರ ವಚನಗಳು, ದಾಸರ ಕೀರ್ತನೆಗಳು ಸೇರಿದಂತೆ ಹಲವಾರು ಸಾಹಿತ್ಯಗಳು ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಜೈನ ಕವಿಗಳು ಸಾವಿರಾರು ಕಥೆಗಳ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು ರಚಿಸಿದ ಕಥೆಗಳು ಇಂದಿಗೂ ಪ್ರಸ್ತುತವಾಗಿವೆ. ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದರು.
ಇದನ್ನೂ ಓದಿ: ನವೆಂಬರ್ 25 ರಿಂದ ಕೋಳಿ ಪೂರೈಕೆ ಬಂದ್ | ಕೋಳಿ ಮೊಟ್ಟೆ, ಮಾಂಸ ಗ್ರಾಹಕರಿಗೆ ತೊಂದರೆ | ಸಾಕಾಣಿಕೆ ದರ ಹೆಚ್ಚಳಕ್ಕೆ ಆಗ್ರಹ
ಬಸವಣ್ಣ, ಗಾಂಧೀಯವರು ಪ್ರತಿಪಾದಿಸಿದ್ದ ಮೌಲ್ಯಗಳನ್ನು ಜೈನ ಧರ್ಮದ ಮುನಿಗಳು, ಸಾಹಿತಿಗಳು ತಮ್ಮ ಕೃತಿಗಳಲ್ಲಿ ಎಲ್ಲ ಸಾಹಿತಿಗಳಿಗಿಂತ ಮೊದಲು ಪ್ರತಿಪಾದಿಸಿದ್ದಾರೆ. ಪಂಪ ಮಾನವ ಕುಲಂ ತಾನೊಂದೆ ವಲಂ ಎಂದು ಎಲ್ಲ ಜಾತಿ,ಧರ್ಮಗಳನ್ನು ಮೀರಿದ ಸಂದೇಶ ನೀಡಿದ್ದರು.
ಎಲ್ಲ ಸಮಾಜಗಳಲ್ಲಿ ದುಡಿಯುವ ವರ್ಗವನ್ನು ಪ್ರೀತಿಸಿ,ಗೌರವಿಸಬೇಕಾಗಿದೆ. ಬಸವಣ್ಣನವರು ಶರಣ ಹರಳಯ್ಯ ಕಾಯಕವನ್ನು ಗೌರವಿಸುವ ಉದ್ದೇಶದಿಂದ ಅವರು ತಯಾರಿಸಿದ ಚರ್ಮದ ಚಪ್ಪಲಿಗಳನ್ನು ತಲೆಮೇಲೆ ಹೊತ್ತು ಗೌರವಿಸಿದರು. ಆದರೆ ಇಂದು ನಟನೆ ಮಾಡುವ ವ್ಯಕ್ತಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವ ಮನೋಸ್ಥಿತಿ ಬಂದಿದೆ. ಬದುಕನ್ನು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಮ್ಮೇಳನಗಳಿಗಿಂತ ಇಂಥಹ ಕವಿಗೋಷ್ಠಿಗಳು ಹೆಚ್ಚು ಪ್ರಯೋಜನವಾಗಲಿದೆ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಜಿ.ಕರಿಯಪ್ಪ ಮಾಳಿಗೆ ಮಾತನಾಡಿ, ಸಾಹಿತ್ಯವು ಜನರನ್ನು ಬಂಧಿಸುವ ಶಕ್ತಿ ಹೊಂದಿದೆ. ಸಹಬಾಳ್ವೆ, ಸಮಚಿತ್ತ ಮತ್ತು ಸಹಜೀವನದ ಜವಾಬ್ದಾರಿಯನ್ನು ಸಾಹಿತ್ಯ ಕಲಿಸುತ್ತದೆ. ಹಸಿವು, ಬಡತ, ಆಕ್ರೋಶ,ಸಿಟ್ಟು ಸೇರಿದಂತೆ ಮಾನವೀಯ ತುಡಿತಗಳನ್ನು ಸಾಹಿತ್ಯದ ಮೂಲಕ ಹೊರಹೊಮ್ಮುತ್ತದೆ.
ಇದನ್ನೂ ಓದಿ: ದುರ್ಗದ ಮಹಾರಾಜ ಮದಕರಿ ನಾಯಕ ಹಾಗೂ ಹರಿಹರದ ಗಿರಿಯಮ್ಮ ಕಾಲೇಜು ತಂಡಗಳು ಚಾಂಪಿಯನ್
ಕಾಡಿನಲ್ಲಿರುವ ಹೂವುಗಳಂತೆ ಎಲ್ಲರೂ ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕು. ಅನ್ಯರನ್ನು ಗೌರವಿಸುವ ಸಂಸ್ಕೃತಿ ಇಂದು ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ತತ್ವಪದಗಳು ಬದುಕಿನ ಸಾರವನ್ನು ಕಟ್ಟಿಕೊಡುತ್ತವೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ರಾಜ್ಯಮಟ್ಟದ ಕವಿಗೋಷ್ಠಿಗೆ ಉತ್ತಮ ಸ್ಪಂದನೆ ದೊರೆಕಿದೆ. ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಸೇರಿದಂತೆ ಆಂದ್ರಪ್ರದೇಶದ ಕಲ್ಪನ ಸಾಗರಂ ತೆಲುಗು ಭಾಷೆಯ ಮೂಲಕ ಕನ್ನಡವನ್ನು ವರ್ಣಿಸಿರುವುದು ವಿಶೇಷವಾಗಿದೆ ಎಂದರು.
ಗುರುಮಠಕಲ್ನ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮೀಜಿ, ಸಮಾಜದಲ್ಲಿ ಸಮಸ್ಯೆ,ಕಷ್ಟಗಳು, ತುಡಿತಗಳನ್ನು ವ್ಯಕ್ತಪಡಿಸಲು ಕವಿತೆ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.
ಚಿತ್ರದುರ್ಗದ ಸಾಹಿತಿ ಸಂತೋಷ್ ರಚಿಸಿರುವ ನಮ್ಮ ಮಕ್ಕಳು,ನಮ್ಮ ಭವಿಷ್ಯ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಇದನ್ನೂ ಓದಿ: ಮಳೆನೀರು ಸಂರಕ್ಷಣೆಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ, ಕಾರ್ಯದರ್ಶಿ ಕೆ.ಜಿ.ಮಂಜುನಾಥ, ಕಸಾಪ ಕಾರ್ಯದರ್ಶಿ ಶ್ರೀನಿವಾಸ ಮಳಲಿ, ಕೋಶಾಧ್ಯಕ್ಷ, ಕಾರ್ಯದರ್ಶಿ ಕೆ.ಜೆ. ಅಜಯಕುಮಾರ್, ಸಿ.ಲೋಕೇಶ, ಸೌಮ್ಯ ಬಾನಾಡಿ, ದೀಪಾ, ಶೃತಿ ದೀಕ್ಷಿತ್ ಮತ್ತಿತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

