CHITRADURGA NEWS | 15 November 2026
ಚಿತ್ರದುರ್ಗ: ಕೋಳಿ ಸಾಕಾಣಿಕೆ ವೆಚ್ಚವನ್ನು ಪರಿಷ್ಕರಿಸಿ, ಸರ್ಕಾರ ಆದೇಶ ಮಾಡಿರುವ ಹತ್ತು ರೂ.ಗಳನ್ನು ನೀಡಲು ಆಗ್ರಹಿಸಿ ನ.25 ರಿಂದ ಕೋಳಿ ಸಾಕಾಣಿಕೆ ರೈತರು ವಿಧಾನಸೌಧ ಚಲೋ ಹಾಗೂ ಕೋಳಿ ಮರಿ ಸ್ವೀಕಾರ, ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಇದನ್ನೂ ಓದಿ: ದುರ್ಗದ ಮಹಾರಾಜ ಮದಕರಿ ನಾಯಕ ಹಾಗೂ ಹರಿಹರದ ಗಿರಿಯಮ್ಮ ಕಾಲೇಜು ತಂಡಗಳು ಚಾಂಪಿಯನ್
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಎನ್.ಕಲ್ಲೇಶ್ ಮಾತನಾಡಿ, ಕೋಳಿ ಸಾಕಾಣಿಕೆ ರೈತರಿಗೆ ಸರ್ಕಾರ ಆದೇಶ ಮಾಡಿರುವ ಹತ್ತು ರೂ. ದರವನ್ನು ನಿಗಧಿ ಮಾಡಲು ಆಗ್ರಹಿಸಿ ರಾಣೆಬೆನ್ನೂರು ತಾಲೂಕು ಕೃಷ್ಣಾಪುರ, ತೆರದಳ್ಳಿ ಬಳಿ ಇರುವ ಕಂಪನಿ ಮುಂಭಾಗದಲ್ಲಿ ನ.10 ರಿಂದ ಅಹೋರಾತ್ರಿ ರಸ್ತೆ ತಡೆ, ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಇತ್ತೀಚಿನ ವರ್ಷಗಳಲ್ಲಿ ಕೋಳಿ ಸಾಕಾಣಿಕೆ ವೆಚ್ಚವು ಗಣನೀಯವಾಗಿ ಹೆಚ್ಚಳವಾಗಿದ್ದು, 2021 ರಲ್ಲಿ ಸರ್ಕಾರ ನಿಗಧಿಪಡಿಸಿದ್ದ ಕನಿಷ್ಟ ಸಾಗಾಣಿಕೆ ದರ ಪ್ರತಿ ಕೆಜಿಗೆ 6.20 ರೂ. ಇದ್ದು, ಅದನ್ನು ಪರಿಷ್ಕರಿಸಿ ಕನಿಷ್ಟ 20 ರೂ.ಗಳಿಗೆ ನಿಗಧಿ ಮಾಡಲು ಒತ್ತಾಯಿಸಲಾಗಿತ್ತು.
ಈ ಸಂಬಂಧ ವಿಧಾನಸಭೆಯಲ್ಲೂ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಾಣಿಕೆ ರೈತರು ಹಾಗೂ ಇಂಟಿಗ್ರೇಷನ್ ಕಂಪನಿ ಪ್ರತಿನಿಧಿಗಳ ಜೊತೆಗೆ ನಾಲ್ಕು ಸುತ್ತಿನ ಮಾತುಕತೆ ನಡೆಸಿ ಕನಿಷ್ಟ 10 ರೂ. ನಿಗಧಿ ಪಡಿಸಲು ಪಶುಪಾಲನ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಸರ್ಕಾರದ ಅನುಮೋದನೆ ಪಡೆಯಲಾಗಿತ್ತು. ಆದರೆ, ಈ ಆದೇಶ ಜಾರಿಯಾಗುವ ಮೊದಲೇ ಸಿದ್ದರಾಮಯ್ಯ ರಾಜಿನಾಮೆ ನೀಡಿದರು.
ಇದನ್ನೂ ಓದಿ: ಮಳೆನೀರು ಸಂರಕ್ಷಣೆಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಈಗ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಹಿಂದೆ ಸರ್ಕಾರದಲ್ಲಿ ನಡೆದಿರುವ ಈ ಚರ್ಚೆಯನ್ನು ಆದೇಶ ರೂಪದಲ್ಲಿ ನೀಡಲು ಹಲವು ಬಾರಿ ಮನವಿ ಮಾಡಿದರೂ ಕಂಪನಿಗಳಿಗೆ ನಿರ್ದೇಶನ ನೀಡಲು ಸರ್ಕಾರ ಮುಂದಾಗುತ್ತಿಲ್ಲ.
ಕಂಪನಿಗಳು ಕೂಡಾ ಇದೇ ಸಬೂಬು ಹೇಳಿಕೊಂಡು ದರ ಹೆಚ್ಚಳ ಮಾಡದೆ ಸತಾಯಿಸುತ್ತಿದ್ದಾರೆ. ಕಳೆದ 6 ತಿಂಗಳಿಂದ ಮನವಿ ಮಾಡಿದರೂ ಸರ್ಕಾರ ಗಮನಹರಿಸದ ಕಾರಣ ಈ ರೈತ ವಿರೋಧಿ ಧೋರಣೆ ವಿರುದ್ಧ ಕೋಳಿ ಸಾಕಾಣಿಕೆ ಬಂದ್ ಮಾಡಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ.
ಇದರಿಂದ ಕೋಳಿ ಮಾಂಸ ಹಾಗೂ ಮೊಟ್ಟೆ ಗ್ರಾಹರಿಗೆ ತೊಂದರೆಯಾಗಲಿದ್ದು, ಈ ಅನಾನುಕೂಲಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕು ಎಂದು ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ದಿನ ಭವಿಷ್ಯ | ನವೆಂಬರ್ 15 | ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ
ಪತ್ರಿಕಾಗೋಷ್ಠಿಯಲ್ಲಿ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಲೋಕೇಶಪ್ಪ, ಉಪಾಧ್ಯಕ್ಷ ರಹಮತ್ವುಲ್ಲಾ, ಪ್ರಧಾನ ಕಾರ್ಯದರ್ಶಿ ಗಿರೀಶ್, ಖಜಾಂಚಿ ವಾಗೀಶ್, ಕಾರ್ಯದರ್ಶಿ ಕೆ.ಎಂ.ರುದ್ರಪ್ಪ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

