CHITRADURGA NEWS | 13 AUGUST 2026
ಚಿತ್ರದುರ್ಗ: ಯುವ ಪೀಳಿಗೆಯ ಉತ್ತಮ ಆಲೋಚನೆ, ಪ್ರಗತಿ ಹಾಗೂ ಅಭಿವೃದ್ಧಿಯೇ ದೇಶದ ನಿಜವಾದ ಆಸ್ತಿ. ಶಿಕ್ಷಣದ ಜತೆಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ಇದನ್ನೂ ಓದಿ: ಕ್ಯಾಚ್ ದಿ ರೈನ್ ಅಭಿಯಾನ | ಜಲ ಸಂರಕ್ಷಣೆಗೆ ಚಿತ್ರದುರ್ಗ ನಗರಸಭೆ ಕರೆ
ನಗರದ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಯೂತ್ ಕನ್‌ಕ್ಲೇವ್–2026 ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಮೊಬೈಲ್, ಇನ್‌ಸ್ಟಾಗ್ರಾಂ, ಸಾಮಾಜಿಕ ಜಾಲತಾಣ ಹಾಗೂ ರೀಲ್ಸ್‌ಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವುದು ನೋವಿನ ಸಂಗತಿ. ದೇಶಭಕ್ತ ಭಗತ್‌ಸಿಂಗ್, ಎಪಿಜೆ ಅಬ್ದುಲ್ ಕಲಾಂ, ಶಿವಾಜಿ ಹಾಗೂ ಮದಕರಿನಾಯಕ ಅವರಂತಹ ಆದರ್ಶ ವ್ಯಕ್ತಿಗಳ ಜೀವನ ಮತ್ತು ಚಿಂತನೆಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದ ಜತೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ಇಲ್ಲದಿದ್ದರೆ, ಮಕ್ಕಳು ತಮ್ಮ ತಂದೆ-ತಾಯಿ ಹಾಗೂ ತಾವು ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಯನ್ನೇ ದೂಷಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಂದೆ-ತಾಯಿಯ ಬಗ್ಗೆ ಗೌರವ, ಗುರುಗಳ ಬಗ್ಗೆ ಭಕ್ತಿ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗೆ ದೊಡ್ಡ ಜವಾಬ್ದಾರಿಯಿದೆ. ಹಣ ಸಂಪಾದಿಸುವ ಉದ್ದೇಶದಿಂದ ಸಂಸ್ಥೆಯನ್ನು ಕಟ್ಟಿಲ್ಲ. ಹಣ, ಸಮಯ ಹಾಗೂ ಸಂಪನ್ಮೂಲಗಳು ಸೀಮಿತವಾಗಿದ್ದರೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಚಿವರಿಗೆ ಖಾತೆ ಹಂಚಿಕೆ | ಟಿ.ರಘುಮೂರ್ತಿಗೆ ಎಸ್ಟಿ ಕಲ್ಯಾಣ ಖಾತೆ
ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತೀಯ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕು. ಅರ್ಧಂಬರ್ಧ ಜ್ಞಾನ ಅಪಾಯಕಾರಿ. ಆದ್ದರಿಂದ ವಿಷಯಗಳನ್ನು ಆಳವಾಗಿ ತಿಳಿದುಕೊಂಡು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಬೆಂಗಳೂರಿನ ಸೈಕಿಯಾಟ್ರಿಸ್ಟ್ ಡಾ. ಧನಂಜಯ ಮಾತನಾಡಿ, ಇಂದಿನ ಜೀವನಶೈಲಿ, ಒತ್ತಡ ಹಾಗೂ ಸಮಸ್ಯೆಗಳಿಂದಾಗಿ ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.
ಜೀವನದಲ್ಲಿ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಅಗತ್ಯ. ಒತ್ತಡವನ್ನು ನಿಯಂತ್ರಿಸಿಕೊಂಡು, ತಮ್ಮನ್ನು ತಾವು ಅಂತರಾಳದಲ್ಲಿ ಅರಿತುಕೊಳ್ಳಬೇಕು. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡರೆ ದುಃಖ ಹೆಚ್ಚಾಗುತ್ತದೆ. ಸದಾ ಸಂತೋಷದಿಂದ ಇರಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಐಟಿ ಮತ್ತು ತಾಂತ್ರಿಕ ಶಿಕ್ಷಣ ಸಲಹೆಗಾರ ಡಾ. ಶಶಿಧರರಾವ್ ಹಾಗೂ ಪತ್ರಕರ್ತ ಸುಭಾಷ್ ಜಿ. ವೇದಿಕೆಯಲ್ಲಿದ್ದರು.
ಇದನ್ನೂ ಓದಿ: ಶ್ರಾವಣ ಮಾಸದ ಮೊದಲ ಸೋಮವಾರದಂದು ಈ ಕ್ರಮಗಳನ್ನು ಪಾಲಿಸಿದರೆ ಅಷ್ಟ ಐಶ್ವರ್ಯ ನಿಮ್ಮದಾಗುತ್ತದೆ
ಡೀನ್ ಅನಂತರಾಮು, ಮಾನವ ಸಂಪನ್ಮೂಲ ಅಧಿಕಾರಿ ಕೊಟ್ರೇಶ್, ವೆಂಕಟೇಶ್ವರ ಬಿಇಡಿ ಕಾಲೇಜಿನ ಪ್ರಾಚಾರ್ಯ ನಾಗಭೂಷಣಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಎ.ಜೆ., ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಿ. ನವಾಜ್, ಆದ್ಯ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಮುತ್ತಾರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಎಂ.ಎಂ. ಮಹಂತೇಶ್, ಪಿಆರ್‌ಒ ರವಿಕುಮಾರ್ ಸೇರಿದಂತೆ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

