
CHITRADURGA NEWS | 05 JANUARY 2026
ಚಳ್ಳಕೆರೆ: ಕೇಳಿದ ತಕ್ಷಣ ಅಮ್ಮ ಹಣ ಕೊಡಲಿಲ್ಲ ಎಂದು ದುಡುಕಿದ ಮಗನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಚಳ್ಳಕೆರೆಯ ನನ್ನಿವಾಳ ರಸ್ತೆಯ ನಿವಾಸಿ ಮಹೇಶ್(34) ಬೆಂಕಿ ಹಚ್ಚಿಕೊಂಡ ಯುವಕ.

ಇದನ್ನೂ ಓದಿ: ಚಿತ್ರದುರ್ಗ – ಮೈಸೂರು ರೈಲ್ವೇ ಮಾರ್ಗಕ್ಕೆ ಬೇಡಿಕೆ | ಸಾರಿಗೆ ಸಂಪರ್ಕಕ್ಕೆ ಕೋಟೆನಾಡು ಕೇಂದ್ರಬಿಂದು
ಇತ್ತೀಚೆಗೆ ತಾಯಿ ಜಮೀನು ಮಾರಿದ್ದು, ಆ ಹಣದಲ್ಲಿ ಕಾರು ಖರೀಧಿಸಲು 4 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದ. ಇದಾದ ಬಳಿಕ ಮತ್ತೆ 2 ಲಕ್ಷ ಕೇಳಿದ್ದಾನೆ. ಆದರೆ, ತಾಯಿ ದುಡ್ಡು ಕೊಡುವುದು ತುಸು ವಿಳಂಬವಾಯಿತು ಎನ್ನುವ ಕಾರಣಕ್ಕೆ ಬೆಂಕಿ ಹಚ್ಚಿಕೊಂಡಿದ್ದಾನೆ.
ತಕ್ಷಣ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಅವಸ್ಥೆ ಕಂಡು ತಾಯಿ ಕಣ್ಣಿರಿಟ್ಟ ಘಟನೆ ಆಸ್ಪತ್ರೆ ಬಳಿ ಕಂಡು ಬಂದಿತು.
ಇದನ್ನೂ ಓದಿ: ಅಡಿಕೆ ಧಾರಣೆ ಜ.5| ಮತ್ತೆ ಏರಿಕೆ ಕಂಡ ಅಡಿಕೆ ಮಾರುಕಟ್ಟೆ
ಘಟನಾ ಸ್ಥಳಕ್ಕೆ ಚಳ್ಳಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
