CHITRADURGA NEWS | 10 FEBRUARY 2026
ಚಿತ್ರದುರ್ಗ: ರಾಷ್ಟ್ರೀಯ ಸ್ವಯಂ ಸೇವಕರು ಗಲ್ಲಿ ಗಲ್ಲಿಯಲ್ಲಿ ರಾರಾಜಿಸಿ ಸಾಂಸ್ಕೃತಿಕ ದೇಶ ಕಟ್ಟುತ್ತಾರೆ. ಊರು ಊರುಗಳಲ್ಲಿ ಸಂಚರಿಸಿ ಹಿಂದೂ ಜಾಗೃತಿ ಮೂಡಿಸಬೇಕು. ದೇಶದಿಂದ ಯಾವುದೇ ಪ್ರಾಂತ್ಯ ವಿಭಾಗವಾಗದಂತೆ ಗಟ್ಟಿ ಎಚ್ಚರಿಕೆ ನೀಡಿ ಸಮಾವೇಶ ಮಾಡೋಣ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ ಕರೆ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
ಹಿರೇಗುಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು,
ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಹಲವಾರು ಮಂದಿ ಶ್ರಮಿಸಿದ್ದು ಹಿಂದೂ ಭಾರತಕ್ಕಾಗಿಯೇ, ಹಿಂದುತ್ವದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಕುಟುಂಬ ಪ್ರಬೋಧನೆ ಬೆಳೆಸಬೇಕು. ಇದಕ್ಕೆ ಭಜನೆ, ಸಹ ಭೋಜನ ಕಾರ್ಯಕ್ರಮ ನಡೆಯಬೇಕು. ಜಾತಿ, ಪಕ್ಷ, ಧರ್ಮ, ಬೇಧ ಅಂತ ಸಾಮರಸ್ಯ ಇಲ್ಲದಂತೆ ಮಾಡಿದ್ದಾರೆ ಅದನ್ನು ಸರಿಪಡಿಸಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಬಂಜಾರ ಗುರುಪೀಠದ ಸೇವಾಲಾಲ್ ಶ್ರೀಗಳು ಮಾತನಾಡಿ, ನಮಗಿರೋದು ಒಂದೇ ದೇಶ ಅದರಲ್ಲೂ ಸಂಸ್ಕೃತಿಯ ಸಭ್ಯತೆಯಿದೆ. ಬೇರೆ ಬೇರೆ ದೇಶಗಳಲ್ಲಿ ಇರುವವರು ಶಾಂತಿಯಾಗಿದ್ದಾರೆ. ಅದು ಸನಾತನ ಶಿಸ್ತು. ಶತ ಶತಮಾನಗಳಿಂದ ಧರ್ಮವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತದೆ.
ಇದನ್ನೂ ಓದಿ: ಫೆ.11 ರಿಂದ ಕಬೀರಾನಂದ ಮಠದಲ್ಲಿ ಶಿವರಾತ್ರಿ ಮಹೋತ್ಸವ | ಶ್ರೀ ಶಿವಲಿಂಗಾನಂದ ಸ್ವಾಮೀಜಿ
ಜಾತಿಗಳನ್ನು ಒಡೆಯುವುದಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಜಾರಿಯಾಗುವ ದಿನಗಳು ದೂರವಿಲ್ಲ. ಅದ್ದರಿಂದ ಜಾಗೃತರಾಗುವ ಮೂಲಕ ಕುತಂತ್ರಗಳನ್ನು ನಿಯಂತ್ರಿಸಬೇಕು. ಹಿಂದೂಗಳಿಗೆ ಇರುವ ಏಕೈಕ ದೇಶ ಭಾರತ. ಭಾವನಾತ್ಮಕ, ದ್ವೇಷಗಳಿಲ್ಲದ, ತಾರತಮ್ಯಗಳಿಲ್ಲದ ಭವ್ಯ ದಿವ್ಯ ದೇಶ ನಮ್ಮದು. ದೇಶದ ಸಂಸ್ಕೃತಿ ಬೆಳೆಯಲು ಮನೆಮನೆಗಳಲ್ಲಿ ದೇಶಾಭಿಮಾನ ಮೂಡಿಸಬೇಕು. ಎಂದರು.
ಯುವ ಮುಖಂಡರಾದ ಜಿ.ಎಸ್.ಅನೀತ್ ಕುಮಾರ ಮಾತನಾಡಿದರು. ಸರ್ಕಾರಿ ಶಾಲಾ ಆವರಣದಿಂದ ಪ್ರಾರಂಭವಾದ ಶೋಭಾಯಾತ್ರೆ ವಿವಿಧ ಕಲಾ ತಂಡಗಳಿಂದ ಗ್ರಾಮದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಕುಂಭ ಹೊತ್ತ ಮಹಿಳೆಯರು ದಾರಿಯುದ್ದಕ್ಕೂ ಸಾಗಿದರು.
ಇದನ್ನೂ ಓದಿ: ರೈತ ಸಂಘದಿಂದ ನಾಲ್ಕು ತಾಲೂಕು ಬಂದ್ ಕರೆ | ಭದ್ರಾ ಮೇಲ್ದಂಡೆ ಯೋಜನೆ ತ್ವರಿತಕ್ಕೆ ಆಗ್ರಹ
ಹಿರೇಗುಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರುಗಳು, ಮಾಜಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮದ ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
