
CHITRADURGA NEWS | 10 FEBRUARY 2026
ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕರಪತ್ರ ಮತ್ತು ಭಿತ್ತಿಪತ್ರ (ಪೋಸ್ಟರ್)ಗಳನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೋಮವಾರ ಬಿಡುಗಡೆ ಮಾಡಿದರು.
ಇದನ್ನೂ ಓದಿ: ರೈತ ಸಂಘದಿಂದ ನಾಳೆ ನಾಲ್ಕು ತಾಲೂಕು ಬಂದ್ ಕರೆ | ಭದ್ರಾ ಮೇಲ್ದಂಡೆ ಯೋಜನೆ ತ್ವರಿತಕ್ಕೆ ಆಗ್ರಹ

ಚಿತ್ರದುರ್ಗ ನಗರದಲ್ಲಿ ಫೆ.17 ಮತ್ತು 18 ರಂದು 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ಕಾರಿ ನೌಕರರು ಭಾಗವಹಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಜಿಲ್ಲೆಯ ಎಲ್ಲ ಸರ್ಕಾರಿ ನೌಕರರಿಗೆ ಅನ್ಯ ಕಾರ್ಯನಿಮಿತ್ತ ಸೌಲಭ್ಯ (ಒಒಡಿ) ಮಂಜೂರು ಮಾಡಿದ್ದಾರೆ.
ಮೆರವಣಿಗೆಗೆ ಅಗತ್ಯವಾದ ಕಲಾತಂಡಗಳನ್ನು ಒದಗಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸುವುದಾಗಿ ಅಪರಜಿಲ್ಲಾಧಿಕಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಪೋಸ್ಟರ್ ಮತ್ತು ಸದಸ್ಯತ್ವ ನೊಂದಣಿಯಾದವರಿಗೆ ನೀಡಲಾಗುವ ಕಿಟ್‌ಗಳನ್ನು ಅನಾವರಣಗೊಳಿಸಿದರು.
ಇದನ್ನೂ ಓದಿ: ಗ್ರಾಮ ಪಂಚಾಯತಿ ಕೊನೆಯ ಸಾಮಾನ್ಯ ಸಭೆ | ಕಾಲುವೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಭಾಷಣ
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ವಿ.ಎಲ್.ಪ್ರಶಾಂತ್, ಜಿಲ್ಲಾ ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ, ಪದಾಧಿಕಾರಿಗಳಾದ ಚೌಳೂರು ಲೋಕೇಶ್, ಸೌಮ್ಯ ಬಾನಾಡಿ, ರಜನಿ ಲೇಪಾಕ್ಷಿ, ಸಿ.ಎಂ.ಚಂದ್ರಶೇಖರ್, ಮಹಾಂತೇಶ್ ಇತರರಿದ್ದರು.
ಸಮ್ಮೇಳನಕ್ಕೆ ನೊಂದಣಿ ಆರಂಭ
ಸರಕಾರಿ ನೌಕರರು ಸಮ್ಮೇಳನದಲ್ಲಿ ಹಾಜರಾಗಿ ಯಶಸ್ವಿಗೊಳಿಸಲು ಸಾಹಿತ್ಯ ಪರಿಷತ್ತು ವಿನಂತಿಸಿದೆ. ಭಾಗವಹಿಸಿದ ನಂತರ ಹಾಜರಾದ ಬಗ್ಗೆ ಪರಿಷತ್ತಿನ ವತಿಯಿಂದ ನೀಡಲಾಗುವ ಪ್ರಮಾಣ ಪತ್ರವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕು. ಆಜೀವ ಸದಸ್ಯರು, ಸಾಹಿತಿಗಳು ಸೇರಿದಂತೆ ಹಾಗೂ ಸಾರ್ವಜನಿಕರಿಗೆ ನೊಂದಣಿ ಕಾರ್ಯ ಆರಂಭಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 09 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
500 ರೂಗಳನ್ನು ನೀಡಿ ನೊಂದಾಯಿಸಿದ ಪ್ರತಿನಿಧಿಗಳಿಗೆ ಆಕರ್ಷಕ ಕಿಟ್ ನೀಡಲಾಗುವುದು. ಇದರಲ್ಲಿ ಟ್ರಾವೆಲ್ ಬ್ಯಾಗ್, ಮೆಟಲ್ ಬ್ಯಾಡ್ಜ್, ಲೋಹದ ನಿರ್ಮಿಸಿದ ಪೆನ್, ಕನ್ನಡ ಶಾಲು ಮತ್ತು ಬರೆಯುವ ಕಿರುಪುಸ್ತಕ ಒಳಗೊಂಡಿದೆ. ಆಯಾ ತಾಲ್ಲೂಕುಗಳ ಕಸಾಪ ಅಧ್ಯಕ್ಷರುಗಳಲ್ಲಿ ನೊಂದಾಯಿಸಬಹುದಾಗಿದೆ.
ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯಲ್ಲಿನ ಅಪ್ಪಾಜಿ ಪರಿಸರ ಕಟ್ಟಡದ ಕಚೇರಿಯಲ್ಲಿ ನೇರ ನೊಂದಣಿ ಅವಕಾಶವಿದೆ. ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ. 9972155177, 9449759219, 9449510078 ಎಂದು ಕಸಾಪ ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
