CHITRADURGA NEWS | 29 APRIL 2026
ಚಿತ್ರದುರ್ಗ: ಬೇಸಿಗೆಯ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರು ‘ಹೀಟ್ ಸ್ಟ್ರೋಕ್‘ (ಬಿಸಿಲುಘಾತ) ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ತಿಳಿಸಿದರು.
ಇದನ್ನೂ ಓದಿ: SJMIT ಸ್ಫೂರ್ತಿ-2026 | ದೇಸಿ ಉಡುಗೆಗಳಲ್ಲಿ ಮಿಂಚಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಗ್ರಾಮದ ಇಂದಿರಾ ಕಾಲೋನಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಎನ್‍ಸಿಡಿ ಆರೋಗ್ಯ ಮೇಳ ಶಿಬಿರಕ್ಕೆ ಆಗಮಿಸಿದ ಫಲಾನುಭವಿಗಳು, ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಬಿಸಿಲಿನ ತಾಪದ ಬಗ್ಗೆ ಅವರು ಮಾಹಿತಿ ನೀಡಿದರು.
ಅಧಿಕ ದೇಹದ ಉಷ್ಣತೆ, ಹೆಚ್ಚಿನ ಜ್ವರ, ಮಾನಸಿಕ ಗೊಂದಲ, ಮಾತಿನಲ್ಲಿ ತೊದಲುವುದು, ಪ್ರಜ್ಞೆ ತಪ್ಪುವುದು, ತಲೆಸುತ್ತುವಿಕೆ, ಚರ್ಮ ಒಣಗುವುದು, ವಾಕರಿಕೆ, ವಾಂತಿ ಹಾಗೂ ವೇಗದ ಉಸಿರಾಟದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ತಿಳಿಸಿದರು.
ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ಬಾಯಾರಿಕೆ ಆಗದಿದ್ದರೂ ಪದೇಪದೇ ನೀರು ಕುಡಿಯಬೇಕು. ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ಶರಬತ್ತು ಹಾಗೂ ನೀರಿನಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವುದು ಹಾಗೂ ಬಿಸಿಲಿಗೆ ಹೋಗುವಾಗ ಟೋಪಿ, ಛತ್ರಿ, ಸನ್ ಗ್ಲಾಸ್ ಬಳಸುವುದು ಸೂಕ್ತ. ದೇಹದ ಉಷ್ಣತೆ ಹೆಚ್ಚಾದರೆ ಒದ್ದೆ ಬಟ್ಟೆಯಿಂದ ಮೈ ಒರೆಸಿಕೊಳ್ಳಬೇಕು ಮತ್ತು ಬಿಸಿಲಿನಲ್ಲಿ ಸತತವಾಗಿ ಕೆಲಸ ಮಾಡದೆ ಆಗಾಗ ವಿರಾಮ ಪಡೆಯಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕುಮಾರಸ್ವಾಮಿ ಹೇಳಿಕೆಗೆ ಡಿ.ಸುಧಾಕರ್ ಪುತ್ರ ಸುಹಾಸ್ ಬೇಸರ
ಅತಿಯಾದ ತಣ್ಣೀರು, ಕಾಫಿ, ಚಹಾ ಹಾಗೂ ಸಾಫ್ಟ್ ಡ್ರಿಂಕ್ಸ್ ಸೇವಿಸಬೇಡಿ. ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಓಡಾಡಬಾರದು. ಕಪ್ಪು ಬಣ್ಣದ ಹಾಗೂ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಗಳನ್ನು ತ್ಯಜಿಸಿ, ಖಾಲಿ ಹೊಟ್ಟೆಯಲ್ಲಿ ಮನೆಯಿಂದ ಹೊರಬರಬೇಡಿ. ಮುಖ್ಯವಾಗಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ನಿಂತ ವಾಹನಗಳಲ್ಲಿ ಬಿಡಬೇಡಿ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಪ್ರತಿಭಾ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲಕ್ಷ್ಮಿ ಹಾಗೂ ಆಶಾ ಕಾರ್ಯಕರ್ತೆ ಗಂಗಾಂಭಿಕ ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

