ಹೊಸದುರ್ಗ
ಕೃಷಿ ಹೊಂಡಕ್ಕೆ ಬಿದ್ದು ಡಾ.ಜಯರಾಂ ಸಾವು

Published on
CHITRADURGA NEWS | 07 MARCH 2025
ಹೊಸದುರ್ಗ: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಹೊಸದುರ್ಗ ಪಟ್ಟಣದ ಖ್ಯಾತ ವೈದ್ಯ ಡಾ.ಜಯರಾಂ ನಾಯ್ಕ್(53) ಮೃತಪಟ್ಟಿದ್ದಾರೆ.
ಹೊಸದುರ್ಗ ತಾಲೂಕು ಕುರುಬರಹಳ್ಳಿ ಬಳಿಯಿರುವ ತಮ್ಮ ತೋಟಕ್ಕೆ ತೆರಳಿದ್ದಾಗ ಕೃಷಿ ಹೊಂಡದ ಸಮೀಪ ಓಡಾಡುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ರೈತರು ಮೃತ
ಇಂದು ಬೆಳಗ್ಗೆ ತೋಟಕ್ಕೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹೊಸದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ನಿನ್ನೆ ಮಾ.6 ರಂದು ಹೊಳಲ್ಕೆರೆ ತಾಲೂಕು ನಲ್ಲಿಕಟ್ಟೆ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ರೈತರು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಕೃಷಿ ಹೊಂಡದಲ್ಲಿ ಮತ್ತೊಂದು ದುರಂತ ಸಂಭವಿಸಿರುವುದು ಆತಂಕ ಮೂಡಿಸಿದೆ.
Continue Reading
Related Topics:Chitradurga news, Dr. Jayaram, Hosdurga, Krishihonda, Thota, Vaidya Savu, ಕೃಷಿಹೊಂಡ, ಚಿತ್ರದುರ್ಗ ನ್ಯೂಸ್, ಡಾ.ಜಯರಾಂ, ತೊಟ, ವೈದ್ಯ ಸಾವು, ಹೊಸದುರ್ಗ

Click to comment