ಮುಖ್ಯ ಸುದ್ದಿ
ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ

Published on
CHITRADURGA NEWS | 07 MARCH 2025
ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ರೈತರಿಗೆ ಅನುಗ್ರಹ ಯೋಜನೆಯಡಿ ಹೆಚ್ಚು ಲಾಭ ದೊರೆಯುವಂತೆ ಮಾಡಿದ್ದಾರೆ.
ಹಸು, ಎಮ್ಮೆ, ಕುರಿ, ಮೇಕೆ ಸಾಕಾಣೆ ಮಾಡುವ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನುಗ್ರಹ ಯೋಜನೆಯಡಿ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಈ ವರ್ಷ ಪೂರ್ಣ | ಸಿಎಂ ಸಿದ್ದರಾಮಯ್ಯ
ಅನುಗ್ರಹ ಯೋಜನೆಯಡಿ ಈವರೆಗೆ ಹಸು, ಎಮ್ಮೆ(ಜಾನುವಾರು) ಮೃತಪಟ್ಟರೆ ನೀಡುತ್ತಿದ್ದ ಹತ್ತು ಸಾವಿರ ರೂ.ಗಳನ್ನು 15 ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ.
ಕುರಿ, ಮೇಕೆಗಳು ಮೃತಪಟ್ಟರೆ ನೀಡುತ್ತಿದ್ದ ಪರಿಹಾರವನ್ನು 5 ಸಾವಿರದಿಂದ 7500 ಸಾವಿರಕ್ಕೆ ಹೆಚ್ಚಿಸಿದ್ದು, 3 ರಿಂದ 6 ತಿಂಗಳ ಕುರಿ ಮರಿಗಳು ಮೃತಪಟ್ಟರೆ ನೀಡುತ್ತಿದ್ದ 3500 ಪರಿಹಾರವನ್ನು 5 ಸಾವಿರಕ್ಕೆ ಹೆಚ್ಚಿಸಲಾಗಿದೆ.
Continue Reading
Related Topics:Anugrah Yojana, Budget, Buffalo, Chief Minister Siddaramaiah, Chitradurga news, cow, featured, Goat, Kannada News, Livestock, Relief, Sheep, ಅನುಗ್ರಹ ಯೋಜನೆ, ಎಮ್ಮೆ, ಕನ್ನಡ ನ್ಯೂಸ್, ಕುರಿ, ಚಿತ್ರದುರ್ಗ ನ್ಯೂಸ್, ಜಾನುವಾರು, ಪರಿಹಾರ, ಬಜೆಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಕೆ, ಹಸು

Click to comment