ಮುಖ್ಯ ಸುದ್ದಿ
Hindu Mahaganapati; ಭೀಮಸಮುದ್ರದ ಪಾಂಡುರಂಗ ಭಜನಾ ಮಂಡಳಿಯಿಂದ ಹಿಂದೂ ಮಹಾಗಣಪತಿ ಬಳಿ ಭಜನೆ

CHITRADURGA NEWS | 12 SEPTEMBER 2024
ಚಿತ್ರದುರ್ಗ: ಭೀಮಸಮುದ್ರ ಗ್ರಾಮದ ಶ್ರೀ ಪಾಂಡುರಂಗ ಭಜನಾ ಮಂಡಳಿ(Bhajan Board)ಯಿಂದ ಹಿಂದೂ ಮಹಾಗಣಪತಿ(Hindu Mahaganapati)ಯ ಸಭಾಂಗಣದಲ್ಲಿ ಭಜನಾ ಕಾರ್ಯಕ್ರಮ ನೀಡಿದರು.
ಕ್ಲಿಕ್ ಮಾಡಿ ಓದಿ: DCC ಬ್ಯಾಂಕ್ ಚುನಾವಣೆ | ಸ್ಪರ್ಧೆ ಬಯಸಿದ್ದ ಶಾಸಕ ಟಿ.ರಘುಮೂರ್ತಿಗೆ ಹಿನ್ನಡೆ

ರಾಜ್ಯ ಹಾಗೂ ದೇಶದಲ್ಲಿ ಗಮನ ಸೆಳೆಯುತ್ತಿರುವ ಚಿತ್ರದುರ್ಗ ಹಿಂದೂ ಮಹಾಗಣಪತಿ ಸಭಾಂಗಣದಲ್ಲಿ ಭೀಮಸಮುದ್ರದ ಪಾಂಡುರಂಗ ಭಜನಾ ಮಂಡಳಿಯಿಂದ ನಾಲ್ಕನೇ ಬಾರಿ ಭಜನಾ ಕಾರ್ಯಕ್ರಮ ನೀಡಿದೆ.
ಇತ್ತೀಚಿನಾ ದಿನಗಳಲ್ಲಿ ಜನಪದ ಕಲೆಯು ಹಳ್ಳಿಗಳಲ್ಲಿ ದೂರವಾಗುತ್ತಾ ಬಂದಿದೆ, ಗ್ರಾಮದ ಹಿರಿಯರು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಕಾರಣಕ್ಕಾಗಿ ಈ ಗ್ರಾಮದಲ್ಲಿ ಶ್ರೀ ಪಾಂಡುರಂಗ ಭಜನಾ ಮಂಡಳಿಯನ್ನು ಹುಟ್ಟು ಹಾಕಿದ್ದಾರೆ.
ಭೀಮಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವು ನೋವು ದುಖಃ ದುಮ್ಮನಗಳಲ್ಲಿ ಭಜನಾ ಕಾರ್ಯಕ್ರಮ ನಡೆಸಿಕೊಡುತ್ತಾ ಬಂದಿದ್ದಾರೆ.
ಕ್ಲಿಕ್ ಮಾಡಿ ಓದಿ: Upper Bhadra Project: ಭದ್ರಾ ಮೇಲ್ದಂಡೆಗೆ ಕೇಂದ್ರದಿಂದ ಪುನಃ ದ್ರೋಹ | ಅನುದಾನ ಬಿಡುಗಡೆಗೆ ಕ್ಯಾತೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಮಧ್ಯವರ್ಜನ ಕಾರ್ಯಕ್ರಮಗಳಲ್ಲಿ ಕುಡಿತದ ಚಟಕ್ಕೆ ದಾಸರಾಗಿರುವ ಜನರಿಗೆ ಭಜನೆಯ ರುಚಿಯ ಮೂಲಕ ಅವರನ್ನು ಮುಖ್ಯ ವಾಹಿನಿಗೆ ಬರಲು ಉತ್ತೇಚಿಸಿದ್ದಾರೆ.
ರಾಜ್ಯ ಮಟ್ಟದ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಕಳದೆ ನಾಲ್ಕು ವರ್ಷಗಳಿಂದ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ “ಸಂಕ್ರಾಂತಿ ಸಂಭ್ರಮ ಭಜನಾ ಕಮ್ಮಟ ಕಾರ್ಯಕ್ರಮ” ನಡೆಸುತ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಭಜನಾ ತಂಡಗಳ ಭಾಗವಹಿಸುತ್ತವೆ.
ಭೀಮಸಮುದ್ರದ ಪಾಂಡುರಂಗ ಭಜನಾ ಮಂಡಳಿಯಲ್ಲಿ ಒಟ್ಟು 13 ಜನ ಸದಸ್ಯರಿದ್ದಾರೆ.
