
CHITRADURGA NEWS | 12 SEPTEMBER 2024
ಚಿತ್ರದುರ್ಗ: ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸಾರಥ್ಯದಲ್ಲಿ ಸ್ಥಾಪನೆಯಾಗಿದ್ದ ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್‍ಸ್ಟಿಟ್ಯೂಟ್(City institute)ನಲ್ಲಿ ಅವ್ಯವಹಾರದ ವಾಸನೆ ಬಡಿಯುತ್ತಿದೆ.
ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಮೂರು ಜನರ ವಿರುದ್ಧ ದೂರು ದಾಖಲಾಗಿದೆ. ಎಫ್‍ಐಆರ್‍ನಲ್ಲಿ ಸಚಿವ ಡಿ.ಸುಧಾಕರ್ ಅವರ ಸಂಬಂಧಿಯೂ ಇದ್ದಾರೆ.

ಇದನ್ನೂ ಓದಿ: ಡಿಸಿಸಿ ಬ್ಯಾಂಕಿಗೆ ಇಂದು ಚುನಾವಣೆ | ಸಂಜೆ ವೇಳೆಗೆ ಫಲಿತಾಂಶ
ಸೆಪ್ಟಂಬರ್ 5 ರಂದು ಸಿಟಿ ಕ್ಲಬ್‍ನ ಮಾಜಿ ಉಪಾಧ್ಯಕ್ಷ ಎಂ.ಎ.ಸೇತುರಾಂ, ಮಾಜಿ ಕಾರ್ಯದರ್ಶಿ ಚಿತ್ರಲಿಂಗಪ್ಪ ಹಾಗೂ ಮಾಜಿ ಖಜಾಂಚಿ ಅಜಿತ್ ಪ್ರಸಾದ್ ಜೈನ್ (ಸಚಿವ ಡಿ.ಸುಧಾಕರ್ ಪತ್ನಿಯ ಸೋದರ) ವಿರುದ್ಧ ಎಫ್‍ಐಆರ್ ದಾಖಲಾಗಿದೆ.
2020 ರಿಂದ 2023 ರವರೆಗಿನ ಅವಧಿಯಲ್ಲಿ ಸಿಟಿ ಕ್ಲಬ್‍ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಇಲಾಖಾ ತನಿಖೆ ನಡೆಸಿ ಜೂನ್‍ನಲ್ಲಿ ವರದಿ ಸಲ್ಲಿಸಿದ್ದಾರೆ ಎಂದು ದೂರುದಾರ ಕ್ಲಬ್‍ನ ಮಾಜಿ ನಿರ್ದೇಶಕ ಡಿ.ವಿ.ಟಿ.ಕರಿಯಪ್ಪ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ | ಎರಡು ವರ್ಷದ ಮಗು ಮೃತ
ಸದ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಆಡಳಿತಾಧಿಕಾರಿ ಆಗಿರುವ ಚಿತ್ರದುರ್ಗ ಸಿಟಿ ಕ್ಲಬ್‍ಗೆ 2023ರಲ್ಲಿ ಸಕಾಲಕ್ಕೆ ಚುನಾವಣೆ ನಡೆದಿಲ್ಲ.
ಆಡಳಿತ ಮಂಡಳಿಯ 43 ಕಾರ್ಯಕಾರಿ ಸಮಿತಿ ಸಭೆಗಳು ನಡೆದಿದ್ದು, ಇಷ್ಟೂ ಸಭೆಗಳಲ್ಲಿ ಚರ್ಚಿಸದೆ ತಮಗೆ ಬೇಕಾದ 177 ಮಂದಿಗೆ ಸದಸ್ಯತ್ವ ನೀಡಲಾಗಿದೆ. ಕ್ಲಬ್‍ನ ಬೈಲಾ ಉಲ್ಲಂಘನೆ ಮಾಡಿ ದುಪ್ಪಟ್ಟು ಶುಲ್ಕ ವಸೂಲು ಮಾಡಿ ಸದಸ್ಯತ್ವ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ | ಶಾಸಕ ಟಿ.ರಘುಮೂರ್ತಿಗೆ ಹಿನ್ನಡೆ
ಕ್ಲಬ್ ನಿಯಮದ ಪ್ರಕಾರ ಅಜೀವ ಸದಸ್ಯತ್ವ ಪಡೆಯಲು 1 ಲಕ್ಷ ರೂ. ಸಾಮಾನ್ಯ ಸದಸ್ಯತ್ವಕ್ಕೆ 50 ಸಾವಿರ ಪಡೆಯಬೇಕು. ಆದರೆ, ಅಜೀವ ಸದಸ್ಯತ್ವಕ್ಕೆ 1.62 ಲಕ್ಷ ರೂ, ಸಾಮಾನ್ಯ ಸದಸ್ಯತ್ವಕ್ಕೆ 1.50 ಲಕ್ಷ ರೂ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

9 ಜನರಿಗೆ ಸದಸ್ಯತ್ವ ನೀಡಿದ 6.47 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ವಾರ್ಷಿಕ ಮಹಾಸಭೆ ನಡೆಸದೆ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಅನುಮತಿ ಹಾಗೂ ಟೆಂಡರ್ ಕರೆಯದೆ 28 ಲಕ್ಷ ರೂ. ವೆಚ್ಚ ಮಾಡಿ 1 ಸಾವಿರ ಸೂಟ್‍ಕೇಸ್ ಖರೀಧಿಸಿ ಅವ್ಯವಹಾರ ಮಾಡಲಾಗಿದೆ ಇತ್ಯಾದಿ ಆರೋಪಗಳನ್ನು ಹಿಂದಿನ ಸಮಿತಿಯ ಮೂರು ಜನರ ವಿರುದ್ಧ ಮಾಡಲಾಗಿದೆ.
ಇದನ್ನೂ ಓದಿ: ದಿನ ಭವಿಷ್ಯ | ಹಠಾತ್ ಧನ, ವಸ್ತು ಲಾಭ, ಸಮಾಜದಲ್ಲಿ ಗೌರವ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
