Connect with us

    Accident: ಮರಕ್ಕೆ ಕಾರು ಡಿಕ್ಕಿ | ಎರಡು ವರ್ಷದ ಮಗು ಮೃತ

    car accident

    ಕ್ರೈಂ ಸುದ್ದಿ

    Accident: ಮರಕ್ಕೆ ಕಾರು ಡಿಕ್ಕಿ | ಎರಡು ವರ್ಷದ ಮಗು ಮೃತ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 11 SEPTEMBER 2024

    ಚಿತ್ರದುರ್ಗ: ಮರಕ್ಕೆ ಕಾರು ಡಿಕ್ಕಿಯಾಗಿ ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಚಿತ್ರದುರ್ಗ-ಚಳ್ಳಕೆರೆ ನಡುವಿನ ರಸ್ತೆಯಲ್ಲಿ ನಡೆದಿದೆ.

    ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಎರಡು ವರ್ಷದ ಮಗು ಕಿಶನ್‍ರೆಡ್ಡಿ ಮೃತಪಟ್ಟಿದ್ದಾನೆ.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ | ಸ್ಪರ್ಧೆ ಬಯಸ್ಸಿದ್ದ ಶಾಸಕ ಟಿ.ರಘುಮೂರ್ತಿ ಅವರಿಗೆ ಹಿನ್ನಡೆ

    ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ರಾಮಜೋಗಿಹಳ್ಳಿಯ ಅನೀಲ್ ರೆಡ್ಡಿ ಅವರಿಗೆ ಸೇರಿದ ಕಾರು ಎನ್ನಲಾಗಿದೆ.

    ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿ ವಾಪಾಸು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಗೆ ತೆರಳುವಾಗ ಈ ಅಪಘಾತ ನಡೆದಿದ್ದು, ಕಾರಿನ ಮುಂಭಾಗ ಜಖಂ ಆಗಿದೆ.

    ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಮತ್ತೆ ದ್ರೋಹ

    ಕಾರಿನಲ್ಲಿದ್ದ ಮೃತ ಮಗುವಿನ ತಾಯಿ, ಅನೀಲ್ ರೆಡ್ಡಿ ಸಹೋದರಿ ಮಾನಸ ಗಾಯಗೊಂಡಿದ್ದು, ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top