Connect with us

    ಡಿಸಿಸಿ ಬ್ಯಾಂಕಿಗೆ ಇಂದು ಚುನಾವಣೆ | ಸಂಜೆ ವೇಳೆಗೆ ಗೊತ್ತಾಗಲಿದೆ RESULT

    ಮುಖ್ಯ ಸುದ್ದಿ

    ಡಿಸಿಸಿ ಬ್ಯಾಂಕಿಗೆ ಇಂದು ಚುನಾವಣೆ | ಸಂಜೆ ವೇಳೆಗೆ ಗೊತ್ತಾಗಲಿದೆ RESULT

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 SEPTEMBER 2024

    ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ) ನಿರ್ದೇಶಕರ ಸ್ಥಾನಗಳಿಗೆ ಇಂದು ಸೆ.12 ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ.

    ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು, ಇದರಲ್ಲಿ 7 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೈಪೋಟಿ ಇರುವ 5 ಕ್ಷೇತ್ರಗಳಿಗೆ ಇಂದು ಡಿಸಿಸಿ ಬ್ಯಾಂಕಿನೊಳಗೆ ಚುನಾವಣೆ ನಡೆಯಲಿದೆ.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ | ಶಾಸಕ ಟಿ.ರಘುಮೂರ್ತಿಗೆ ಹಿನ್ನಡೆ

    ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕಿನ ಕೆಳ ಮಹಡಿಯಲ್ಲಿ 3 ಬೂತ್ ಹಾಗೂ 1ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ 2 ಬೂತ್ ಸ್ಥಾಪನೆ ಮಾಡಲಾಗಿದೆ. ಸಂಜೆ 4 ಗಂಟೆ ನಂತರ ಮತ ಎಣಿಕೆ ಪ್ರಾರಂಭವಾಗಲಿದ್ದು, 7 ಗಂಟೆ ವೇಳೆಗೆ ಫಲಿತಾಂಶ (RESULT) ಪ್ರಕಟವಾಗುವ ಸಾಧ್ಯತೆ ಇದೆ.

    ಚಿತ್ರದುರ್ಗದಲ್ಲಿ ತ್ರಿಕೋನ, ನಾಲ್ಕರಲ್ಲಿ ನೇರ ಹಣಾಹಣಿ:

    ‘ಎ’ ವರ್ಗದಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚಿತ್ರದುರ್ಗ ಕ್ಷೇತ್ರದಿಂದ ಟಿ.ಪಿ.ಅನೂಪ್, ಎಚ್.ಎಂ.ದ್ಯಾಮಣ್ಣ ಹಾಗೂ ಬಿ.ಮಂಜುನಾಥ್ ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಉಳಿದಂತೆ ಹೊಸದುರ್ಗ ‘ಎ’ ಕ್ಷೇತ್ರದಿಂದ ಕೆ.ಅನಂತ್ ಹಾಗೂ ಎಚ್.ಬಸವರಾಜ್ ನಡುವೆ ಪೈಪೋಟಿ ಇದೆ.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಿಕ್ಸ್ | ಘಟಾನುಘಟಿಗಳ ನಡುವೆ ಪೈಪೋಟಿ

    ಮೊಳಕಾಲ್ಮೂರು ಕ್ಷೇತ್ರದಿಂದ ಎಚ್.ಟಿ.ನಾಗೀರೆಡ್ಡಿ ಹಾಗೂ ಜಿಂಕಲ್ ಬಸವರಾಜ್ ನಡುವೆ ಪೈಪೋಟಿ ಇದ್ದರೆ, ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಹಾಲು ಉತ್ಪಾಧಕರ ಸಹಕಾರ ಸಂಘ ಕ್ಷೇತ್ರದಿಂದ ಎಂ.ಭಾರತಿ ಹಾಗೂ ಪಿ.ವಿನೋದಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಸಚಿವ ಡಿ.ಸುಧಾಕರ್ ಸೇರಿ 6 ಜನ ಅವಿರೋಧ ಆಯ್ಕೆ

    ಜಿಲ್ಲೆಯ ಇತರೆ ಸಹಕಾರಿ ಕ್ಷೇತ್ರದಿಂದ ಬಿ.ಸಿ.ಸಂಜೀವಮೂರ್ತಿ ಹಾಗೂ ನಿಶಾನಿ ಎಂ.ಜಯ್ಯಣ್ಣ ನಡುವೆ ಪೈಪೋಟಿ ಇದೆ.

    59 ಮತದಾರರಿಂದ ಮತದಾನ ಪ್ರಕ್ರಿಯೆ:

    ‘ಎ’ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವ ಹೊಸದುರ್ಗ ಕ್ಷೇತ್ರದಿಂದ 19 ಮತದಾರರಿದ್ದರೆ, ಚಿತ್ರದುರ್ಗ ತಾಲೂಕಿನಲ್ಲಿ 14 ಮತದಾರರಿದ್ದಾರೆ. ಮೊಳಕಾಲ್ಮೂರು ತಾಲೂಕಿನಲ್ಲಿ 11 ಮತದಾರರಿದ್ದಾರೆ.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ರಘುಮೂರ್ತಿ

    ಇತರೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಫ್ ವರ್ಗದಲ್ಲಿ 10 ಮತದಾರರಿದ್ದಾರೆ. ಹಾಲು ಉತ್ಪಾಧಕರ ಕ್ಷೇತ್ರದ ಡಿ ವರ್ಗದಲ್ಲಿ 5 ಮತದಾರರಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top