ಮುಖ್ಯ ಸುದ್ದಿ
DCC ಬ್ಯಾಂಕ್ ಚುನಾವಣೆ | ಸ್ಪರ್ಧೆ ಬಯಸಿದ್ದ ಶಾಸಕ ಟಿ.ರಘುಮೂರ್ತಿಗೆ ಹಿನ್ನಡೆ

CHITRADURGA NEWS | 11 SEPTEMBER 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC) ನಿರ್ದೇಶಕರ ಸ್ಥಾನಗಳಿಗೆ ನಾಳೆ ಸೆ.12 ರಂದು ಚುನಾವಣೆ ನಡೆಯಲಿದೆ.
ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಿಕ್ಸ್ | ಘಟಾನುಘಟಿಗಳ ನಡುವೆ ಪೈಪೋಟಿ
DCC ಬ್ಯಾಂಕ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಅವರು ಪ್ರತಿನಿಧಿಸುವ ಕಡಬನಕಟ್ಟೆ ಸೊಸೈಟಿ ಸೇರಿದಂತೆ 200 ಸೊಸೈಟಿಗಳು ಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಮತದಾನಕ್ಕೆ ಅನರ್ಹವಾಗಿದ್ದವು.
ಈ ಹಿನ್ನೆಲೆಯಲ್ಲಿ ಹಾಲಿ ನಿರ್ದೇಶಕರಾಗಿದ್ದರೂ, ಶಾಸಕರು ಸ್ಪರ್ಧಿಸಲು ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಸಚಿವ ಡಿ.ಸುಧಾಕರ್ ಸೇರಿ 6 ಮಂದಿ ಅವಿರೋಧ ಆಯ್ಕೆ
ಇಂದು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಅನರ್ಹತೆಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಶಾಸಕ ರಘುಮೂರ್ತಿ ಅವರು ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಮತದಾನ ಮಾಡಲು ಅವಕಾಶ ಇಲ್ಲದಂತಾಗಿದೆ.
ಇದರೊಟ್ಟಿಗೆ ನ್ಯಾಯಾಲಯದ ಮೊರೆ ಹೋಗಿದ್ದ ಸುಮಾರು 15 ಜನರಿಗೆ ಇದೇ ತೀರ್ಪು ಅನ್ವಯವಾಗಿದೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ | ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ರಘುಮೂರ್ತಿ
ಡಿಸಿಸಿ ಬ್ಯಾಂಕ್ ನಿಯಮಾನುಸಾರ 5 ವರ್ಷದಲ್ಲಿ ಕನಿಷ್ಟ 2 ವರ್ಷ 10 ಲಕ್ಷದವರೆಗೆ ವಹಿವಾಟು ನಡೆಸಬೇಕು. ಕನಿಷ್ಟ 2 ಸಾಮಾನ್ಯ ಸಭೆಗೆ ಹಾಜರಾಗಬೇಕು ಎಂಬ ನಿಯಮವಿದೆ.
ಈ ನಿಯಮ ಪಾಲನೆ ಮಾಡದ ಜಿಲ್ಲೆಯ ಸುಮಾರು 200 ಸಹಕಾರ ಸಂಘಗಳನ್ನು ಮತದಾನ ಮತ್ತು ಚುನಾವಣೆ ಸ್ಪರ್ಧೆಗೆ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಸುಮಾರು 15 ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: ನಟಿಯರಿಗೆ ರೇಣುಕಸ್ವಾಮಿ ಅಶ್ಲೀಲ ಸಂದೇಶ | ಪ್ರತಿಕ್ರಿಯೆ ಮೂಲಕ ಗೊಂದಲಕ್ಕೆ ತೆರೆ
ಇಂದು ತೀರ್ಪು ಪ್ರಕಟವಾಗಿದ್ದು, ಟಿ.ರಘುಮೂರ್ತಿ ಚುನಾವಣೆಗೆ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಅನುಮತಿ ಸಿಕ್ಕಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಟಿ.ರಘುಮೂರ್ತಿ ನ್ಯಾಯಾಲಯದ ಆದೇಶಕ್ಕೆ ತಲೆಬಾಗುತೇವೆ ಎಂದಿದ್ದಾರೆ.
