ಮುಖ್ಯ ಸುದ್ದಿ
ವಿದ್ಯಾ ವಿಕಾಸ ಶಾಲೆಯಲ್ಲಿ ECO CLUB ಉದ್ಘಾಟನೆ

CHITRADURGA NEWS | 11 SEPTEMBER 2024
ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಸ್ವಚ್ಛತಾ ಪಕ್ವಾಡ ಮತ್ತು ಇಕೋ ಕ್ಲಬ್(ECO CLUB) 2024-25ರ ಉದ್ಘಾಟನೆಯನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರಾಧಿಕಾರಿ ಪಿ.ರಾಜೇಶ್ ಉದ್ಘಾಟಿಸಿದರು.
ಕ್ಲಿಕ್ ಮಾಡಿ ಓದಿ: Leopard; ಕುರಿ ಮೇಲೆ ಚಿರತೆ ದಾಳಿ | ಗ್ರಾಮಸ್ಥರಲ್ಲಿ ಆತಂಕ

ನಂತರ ಮಾತನಾಡಿದ ಅವರು, ನೀರು ಅಮೂಲ್ಯ, ಸಂಪತ್ತು, ನೀರು ಲ್ಯಾಬೊರೇಟರಿಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನೀರು ವ್ಯರ್ಥಮಾಡದೆ ಮಿತವಾಗಿ ಬಳಸಬೇಕು ಎಂದರು.
ನೀರಿನ ಸಂರಕ್ಷಣೆ ಮತ್ತು ಮಾಲಿನ್ಯ ತಡೆಗಟ್ಟುವುದು ಮುಖ್ಯ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಶಾಲೆಯನ್ನು ಪ್ಲಾಸ್ಟಿಕ್ ಮುಕ್ತ ಶಾಲೆಯಾಗಿಸಿ ಎಂದು ತಿಳಿಸಿದರು.
ಶಾಲೆಯ ನಿರ್ದೇಶಕರಾದ ಎಸ್.ಎಮ್.ಪೃಥ್ವೀಶ ಮಾತನಾಡಿ, ಭೂಮಿಯೊಂದೇ ಜೀವಿಗಳ ಆವಾಸತಾಣ, ಭೂಮಿಯ ಮೇಲೆ ಮಾತ್ರ ಜೀವಿಗಳು ವಾಸಿಸಲು ಸೂಕ್ತವಾದ ವಾತಾವರಣವಿದೆೆ.
ಭೂಸಂರಕ್ಷಣೆ, ಜಲಸಂರಕ್ಷಣೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜವನ್ನಾಗಿಸಬೇಕು, ಮುಂದಿನ ಪೀಳಿಗೆಗೆ ಸಂಪತ್ಬರಿತ ಭೂಮಿಯನ್ನು ಉಳಿಸಬೇಕು ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: Self death: ಬೆಳೆ ಹಾನಿಯಿಂದ ಹೆಚ್ಚಿದ ಸಾಲದ ಹೊರೆ | ರೈತ ಆತ್ಮಹತ್ಯೆ
ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಬ್ಯಾಡ್ಜ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯೊಪಾದ್ಯಾಯ ಎನ್.ಜಿ.ತಿಪ್ಪೆಸ್ವಾಮಿ, ಐಸಿಎಸ್‌ಇ ಪ್ರಾಂಶುಪಾಲ ಪಿ.ಬಸವರಾಜಯ್ಯ, ಉಪ ಪ್ರಾಂಶುಪಾಲ ಬಿ.ಅವಿನಾಶ್ ಉಪಸ್ಥಿತರಿದ್ದರು.
