ಮುಖ್ಯ ಸುದ್ದಿ
Leopard; ಕುರಿ ಮೇಲೆ ಚಿರತೆ ದಾಳಿ | ಗ್ರಾಮಸ್ಥರಲ್ಲಿ ಆತಂಕ

CHITRADURGA NEWS | 11 SEPTEMBER 2024
ಚಿತ್ರದುರ್ಗ: ತಾಲೂಕಿನ ವಿಜಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಿರತೆಯು(Leopard) ಕುರಿ(sheep) ಮೇಲೆ ದಾಳಿ ಮಾಡಿ, ಅಲ್ಲಿರುವ ಜನರಿಗೆ ಆತಂಕ ಮೂಡಿಸಿದೆ.
ಕ್ಲಿಕ್ ಮಾಡಿ ಓದಿ: Renukaswamy case: ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ | ಪ್ರತಿಕ್ರಿಯೆ ಮೂಲಕ ಗೊಂದಲಕ್ಕೆ ತೆರೆ

ಗ್ರಾಮದಲ್ಲಿ ಚಿರತೆಯು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಜಮೀನಿನಲ್ಲಿ ಕುರಿಗಳು ಮೇಯುತ್ತಿದ್ದ ವೇಳೆ ಕುರಿಯ ಮೇಲೆ ಚಿರತೆ ದಾಳಿ ನಡೆಸಿದೆ.
ಕುರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ರೈತರು ಜಮೀನಿಂದ ಹಿಂದಿರುಗುತ್ತಿದ್ದ ವೇಳೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿದೆ.
ಕ್ಲಿಕ್ ಮಾಡಿ ಓದಿ: Sanehalli; ಸಾಣೇಹಳ್ಳಿಯಲ್ಲಿ ಸೆ.24 ರಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಸ್ಮರಣೆ
ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ಪ್ರಾಣಭಯದಲ್ಲೇ ಜನ ದಿನ ನಿತ್ಯ ಓಡಾಡುತ್ತಿದ್ದಾರೆ ಅಂತಾ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
