Connect with us

    Sanehalli; ಸಾಣೇಹಳ್ಳಿಯಲ್ಲಿ ಸೆ.24 ರಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಸ್ಮರಣೆ 

    ಸಾಣೇಹಳ್ಳಿಯ ಮಠದಲ್ಲಿ ಮಂಗಳವಾರ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಸಮ್ಮುಖದಲ್ಲಿ ಸಭೆ ಜರುಗಿತು.

    ಹೊಸದುರ್ಗ

    Sanehalli; ಸಾಣೇಹಳ್ಳಿಯಲ್ಲಿ ಸೆ.24 ರಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಸ್ಮರಣೆ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 10 SEPTEMBER 2024

    ಹೊಸದುರ್ಗ: ಶ್ರೀ ಶಿವಕುಮಾರ ಶಿವಾಚಾರ್ಯ(Sri Shivakumar Shivacharya Swamiji) ಮಹಾಸ್ವಾಮಿಗಳ ಸ್ಮರಣೆ ಸೆ.24 ರಂದು ಸಾಣೇಹಳ್ಳಿ(Sanehalli)ಯಲ್ಲಿ ನಡೆಯಲಿದೆ.

    ಸಾಣೇಹಳ್ಳಿಯ ಮಠದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಸೆ. 24 ರಂದು ಬೆಳಗ್ಗೆ 8 ಗಂಟೆಗೆ ಶಿವಮಂತ್ರ ಲೇಖನ, ಶಿವಧ್ವಜಾರೋಹಣ, ಸಂಜೆ 5 ಗಂಟೆಗೆ ವೇದಿಕೆಯ ಕಾರ್ಯಕ್ರಮ ನಂತರ ಮಹಾಬೆಳಗು ನಾಟಕ ಪ್ರದರ್ಶನ ನಡೆಯಲಿದೆ.

    ಕ್ಲಿಕ್ ಮಾಡಿ ಓದಿ: ಚಿಕ್ಕಜಾಜೂರಿನಿಂದ ಬಳ್ಳಾರಿ RAILWAY ಡಬ್ಲಿಂಗ್ ಯೋಜನೆ | 3341 ಕೋಟಿ ರೂ. ಪ್ರಸ್ತಾವನೆ: ಸಂಸದ ಗೋವಿಂದ ಕಾರಜೋಳ

    ಸೆ.24ರ ಬೆಳಗ್ಗೆ ಮಾಡೋಣವೆಂದು ಹಿಂದಿನ ವರ್ಷವೇ ಪೂಜ್ಯರು ಹೇಳಿದ್ದರು. ಬಂದು ಹೋಗುವವರಿಗೆ ಸಂಜೆ ತೊಂದರೆಯಾಗುತ್ತದೆ. ಆದ್ದರಿಂದ ಬೆಳಗ್ಗೆ ಮಾಡಬೇಕು ಎಂದು ಶ್ರೀಮಠದಲ್ಲಿ ಸೇರಿದ್ದ ಭಕ್ತರ ಸಭೆಯಲ್ಲಿ ಚರ್ಚೆ ನಡೆಯಿತು.

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಆಶೀರ್ವಚನದಲ್ಲಿ ಮುಂದಿನ ವರ್ಷದಿಂದ ನಿಮ್ಮೆಲ್ಲರ ಅಭಿಪ್ರಾಯದಂತೆ ಬೆಳಗ್ಗೆ 11 ಗಂಟೆಗೆ ಮಾಡೋಣ. ಈ ವರ್ಷ ಬೇಡ ಎಂದು ಆದೇಶ ಮಾಡಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಎಸ್.ಸಿದ್ದಪ್ಪ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಕಲಾಸಂಘದ ಕಾರ್ಯದರ್ಶಿ ಎಸ್.ಕೆ.ಪರಮೇಶ್ವರಯ್ಯ, ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ, ಜಾನಕಲ್ ತಿಮ್ಮಜ್ಜ, ಬನ್ಸಿಹಳ್ಳಿ ಅಜ್ಜಪ್ಪ, ರಾಮೇಗೌಡ, ಸಿದ್ದಯ್ಯ, ಎಸ್ ಆರ್ ಚಂದ್ರಶೇಖರಯ್ಯ, ದೃವಕುಮಾರ್, ಕೃಷ್ಣಪ್ಪ, ಗಂಗಾಧರಪ್ಪ, ಮಹೇಶ್ವರಪ್ಪ, ಪ್ರಕಾಶ್ ದಕ್ಷಿಣಮೂರ್ತಿ, ರವಿಕುಮಾರ, ಸಾಣೇಹಳ್ಳಿ ಗ್ರಾಮಸ್ಥರು, ಉಭಯ ಶಾಲೆಯ ಮುಖ್ಯಸ್ಥರು, ಸುತ್ತಮುತ್ತ ಗ್ರಾಮಸ್ಥರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top