CHITRADURGA NEWS | 20 APRIL 2026
ಚಿತ್ರದುರ್ಗ: ಮುರುಘಾ ಮಠದ ವತಿಯಿಂದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯೋತ್ಸ ಆಚರಿಸಲಾಯಿತು.
ಇದನ್ನೂ ಓದಿ: ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ
ಎಸ್.ಜೆ.ಎಂ. ವಿದ್ಯಾಪೀಠ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿವರ್ಷ ನಿಮ್ಮಗಳ ನಿರಾಶ್ರಿತರ ಕೇಂದ್ರದಲ್ಲಿ ಬಸವ ಜಯಂತಿಯನ್ನು ಆಚರಿಸುತ್ತಾ ಬಂದಿರುತ್ತೇವೆ. ಸ್ವಾತಂತ್ರ ಮತ್ತು ಪ್ರೀತಿಯಿಂದ ಬಾಳಬೇಕು ಎಂಬುದು ಬಸವತತ್ವದ ಆದೇಶವಾಗಿರುತ್ತದೆ.
ನಾವು ಪ್ರಾಮಾಣಿಕವಾಗಿವುದೇ ಸ್ವಾತಂತ್ರ. ಪರಿಶುದ್ಧತೆಯೇ ಸ್ವಾತಂತ್ರ. ನಾವುಗಳೆಲ್ಲರೂ ಒಂದು ರೀತಿಯಲ್ಲಿ ನಿರಾಶ್ರಿತರೇ. ನಿಮ್ಮಗಳ ಸನ್ನಿಧಿಯಲ್ಲಿ ಬಸವ ಜಯಂತಿ ಮಾಡುತ್ತಿರುವುದು ನಮ್ಮ ಭಾಗ್ಯವಾಗಿದೆ. ನಿರಾಶ್ರಿತರಿಗೆ ಬಸವೇಶ್ವರ ಆಸ್ಪತ್ರೆ ಸದಾ ಸಹಕರಿಸುತ್ತದೆ, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ನುಡಿದರು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಎಸ್.ಜೆ.ಎಂ. ವಿದ್ಯಾಪೀಠ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಮಾತನಾಡಿ, ಸಮಾಜದ ದೃಷ್ಟಿಯಲ್ಲಿ ನೀವು ನಿರಾಶ್ರಿತರಾಗಿರುವುದು ಸರಿ ಅಷ್ಟೇ. ಆದರೆ ನಾವುಗಳು ಸಹ ತಂದೆ-ತಾಯಿ ಮಕ್ಕಳ ಆಶ್ರಯದಲ್ಲಿ ಬೆಳೆಯುತ್ತಿದ್ದೇವೆ. ನೀವುಗಳು ಸಮಾಜದ ಆಶ್ರಯದಲ್ಲಿ ಬೆಳೆಯುತ್ತಿದ್ದೀರಾ ಅಷ್ಟೇ. ಇಂದಿನ ದಿನಮಾನಗಳಲ್ಲಿ ತಂದೆ-ತಾಯಿಗಳನ್ನು ಆಶ್ರಮಗಳಿಗೆ ಸೇರಿಸುತ್ತಾರೆ, ಅದು ವಿಷಾದಕರವಾದ ಸಂಗತಿಯಾಗಿದೆ.
ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
ಸಮಾಜ ಕಲ್ಯಾಣ ಇಲಾಖೆಯಿಂದ ಈ ನಿರಾಶ್ರಿತ ಕೇಂದ್ರ ಉತ್ತಮವಾಗಿ ನಡೆಯುತ್ತಿದೆ. ನೀವುಗಳೆಲ್ಲ ಒಂದೇ ಕುಟುಂಬದವರಾಗಿ ಬಾಳಿರಿ, ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಿ. ಬಸವಣ್ಣನವರು ಮಾನವಕುಲಕ್ಕೆ ಅಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳ ಬಗ್ಗೆಯೂ ಕಾಳಜಿ ಹೊಂದಿದವರಾಗಿದ್ದರು.
ಬಸವಣ್ಣನವರ ಜನ್ಮದಿನದಂದು ಅವರ ಸವಿನೆನಪಿಗಾಗಿ ಜಯಂತೋತ್ಸವ ಆಚರಿಸುತ್ತೇವೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಶ್ರೀಮಠಕ್ಕೆ ತಾವುಗಳೆಲ್ಲರೂ ಆಗಮಿಸಿ ನಿರಾಶ್ರಿತರೆಂಬ ಭಾವನೆ ತೊಡೆದು ಶ್ರೀಮಠದ ಆತಿಥ್ಯ ಪಡೆಯಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ನಿರಾಶ್ರಿತರಿಗೆ ಹಣ್ಣು, ಹಂಪಲುಗಳನ್ನು ವಿತರಿಸಿ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಎಸ್.ಜೆ.ಎಂ.ಐ.ಟಿ ಕಾಲೇಜಿನ ವಿಶಾಲಾಕ್ಷಿಯವರು ನಿರಾಶ್ರಿತರಿಗೆ ಸಮವಸ್ತ್ರವನ್ನು ದೇಣಿಗೆಯಾಗಿ ನೀಡಿದರು.
ಇದನ್ನೂ ಓದಿ: ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
ಈ ವೇಳೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜಿತ್‌ಕುಮಾರ್ ಬಂಡಾರು, ನಗರಸಭಾ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಸಿ. ನಿರಂಜನಮೂರ್ತಿ, ಚಿತ್ರದುರ್ಗ ಬೋವಿ ಸಮಾಜದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ನಿರಾಶ್ರಿತ ಕೇಂದ್ರದ ಮಹದೇವ್ ಹಾಗೂ ವಿಜಯಕುಮಾರ್ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
