CHITRADURGA NEWS | 25 APRIL 2026
ಚಿತ್ರದುರ್ಗ: ಮಧ್ಯ ಕರ್ನಾಟಕದ ಪ್ರಸಿದ್ಧವಾದ ಕಾಯಕಯೋಗಿ ಶ್ರೀ ಗುರುತಿಪ್ಪೇರುದ್ರಸ್ವಾಮಿಯ ಹುಂಡಿ ಎಣಿಕೆ ಕಾರ್ಯವನ್ನು ನಾಯಕನಹಟ್ಟಿ ದೇವಸ್ಥಾನದ ಆವರಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು.
ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ | ಶಾಸಕ ಟಿ.ರಘುಮೂರ್ತಿ
ಪ್ರತಿ ವರ್ಷದಂತೆ ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮೊದಲು ಹೊರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ದೇವಸ್ಥಾನದ ಹೊರಮಠ ಹಾಗೂ ಒಳ ಮಠ ಏಣಿಕ್ಕೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಒಳಮಠದಲ್ಲಿ ಶುಕ್ರವಾರ ಬೆಳಿಗ್ಗೆ 8:30ಕ್ಕೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು.ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 6:40ಕ್ಕೆ ಮುಕ್ತಾಯವಾಯಿತು.
ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ RESULT | 29 ವಸತಿ ಶಾಲೆಗಳಿಗೆ ಶೇ.100 ಫಲಿತಾಂಶ
ಹೊರಮಠದಲ್ಲಿ 19,37,145 ಸಂಗ್ರಹವಾದರೆ, ಒಳಮಠದಲ್ಲಿ 55,60,580 ಸಂಗ್ರಹವಾಗಿದೆ. ದಾಸೋಹದಲ್ಲಿ 5,86,900 ಸಂಗ್ರಹವಾಗಿದ್ದು, ಒಟ್ಟಾರೆಯಾಗಿ 80,84,625 ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಸ್ಥಾನದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.
ವಾಡಿಕೆಯಂತೆ ಹರಕೆ ಅರ್ಪಣೆ
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದರೆ ಹರಕೆಯಲ್ಲಿಅಂದುಕೊಂಡಿದ್ದನ್ನು ದೇವರಿಗೆ ಅರ್ಪಿಸುವುದು ವಾಡಿಕೆ. ಹೀಗಾಗಿ ದೇವರ ಪಾದುಕೆ, ಕರಡಿಗೆ, ಕಣ್ಣು, ಮೀಸೆ, ಕಾಲು ಚೈನು, ತೊಟ್ಟಿಲು ಸೇರಿ ನಾನಾ ವಸ್ತುಗಳನ್ನು ದೇವರಿಗೆ ಅರ್ಪಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
