By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಸಿಎಂ ಭೇಟಿಯಾದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
    ಸಿಎಂ ಭೇಟಿಯಾದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) | ಚಿತ್ರದುರ್ಗದ 8 ಕೆರೆಗಳಿಗೆ ಭದ್ರ ನೀರು ಹರಿಸುವಂತೆ ಮನವಿ
    34 minutes ago
    ಬಿಎಸ್‌ವೈ ಅಭಿಮಾನೋತ್ಸ
    ಅಭಿಮಾನೋತ್ಸವಕ್ಕೆ ಬರಲಿದೆ ಬಿಎಸ್‌ವೈ ಅಂಬಾಸೀಡರ್‌
    1 hour ago
    ಡಿಪ್ಲೊಮಾ ಪ್ರವೇಶಕ್ಕೆ ವಿಶೇಷಚೇತನರಿಂದ ಅರ್ಜಿ ಆಹ್ವಾನ
    3 hours ago
    ಅರ್ಜಿ ಅಹ್ವಾನ
    BVA ಪದವಿ ಪ್ರವೇಶ | ಅರ್ಜಿ ಅಹ್ವಾನ 
    5 hours ago
    ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜನಜಾಗೃತಿ
    ಹೊಸದುರ್ಗ ತಾಲೂಕಿನ ಬಲ್ಲಾಳ ಸಮುದ್ರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜನಜಾಗೃತಿ
    12 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    2 weeks ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    2 weeks ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    3 weeks ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    4 weeks ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    4 weeks ago
  • ತಾಲೂಕು
    ತಾಲೂಕುShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    2 weeks ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    2 weeks ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    3 weeks ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    3 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 29 ಏಪ್ರಿಲ್‌ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ವಹಿವಾಟು ವಿವರ
    2 hours ago
    arecanut price list
    ಅಡಿಕೆ ಧಾರಣೆ | 28 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌
    1 day ago
    arecanut price list
    ಅಡಿಕೆ ಧಾರಣೆ | 27 ಏಪ್ರಿಲ್‌ | ಇಂದಿನ ಮಾರುಕಟ್ಟೆ ವಿವರ
    2 days ago
    arecanut price list
    ಭೀಮಸಮುದ್ರ, ತೀರ್ಥಹಳ್ಳಿ ಸೇರಿ ರಾಜ್ಯದ ಮಾರುಕಟ್ಟೆಗಳ ಅಡಿಕೆ ರೇಟ್‌
    5 days ago
    arecanut price list
    ಅಡಿಕೆ ಧಾರಣೆ | 23 ಏಪ್ರಿಲ್‌ | ರಾಜ್ಯದ ಮಾರುಕಟ್ಟೆಗಳ ಅಡಿಕೆ ರೇಟ್‌
    6 days ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 29 | ಕೈಗೊಂಡ ಕೆಲಸಗಳಲ್ಲಿ ಅಡಚಣೆ, ದೂರದ ಪ್ರಯಾಣ ಬೇಡ, ಅರೋಗ್ಯದಲ್ಲಿ ಎಚ್ಚರ
    14 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 28 | ಉದ್ಯೋಗಿಗಳಿಗೆ ಕೆಲಸದ ಒತ್ತಡ, ಶುಭ ಸುದ್ದಿ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 27 | ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ, ಹಠಾತ್ ಆರ್ಥಿಕ ಲಾಭ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 26 | ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು, ದೂರದ ಪ್ರಯಾಣಗಳಲ್ಲಿ ಎಚ್ಚರ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 25 | ಉದ್ಯೋಗಿಗಳಿಗೆ ಕೆಲಸದ ಒತ್ತಡ, ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 29 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್…
    4 hours ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 27 | ಮೆಕ್ಕೆಜೋಳ ರೇಟ್…
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 25 | ಹತ್ತಿ ರೇಟ್…
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 24 | ಮೆಕ್ಕೆಜೋಳ, ರಾಗಿ ರೇಟ್…
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 weeks ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    4 weeks ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    1 month ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    1 month ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    2 months ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 weeks ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    3 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    3 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    3 months ago
  • ಹೊಸದುರ್ಗ
    ಹೊಸದುರ್ಗShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    2 weeks ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    2 weeks ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    3 weeks ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    3 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    1 month ago
  • Life Style
    Life StyleShow More
    Parkinson
    ಪಾರ್ಕಿನ್ಸನ್ ಸಮಸ್ಯೆ ಇರುವವರು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದನ್ನು ತಿಳಿಯಿರಿ
    13 hours ago
    ಕಲ್ಲಂಗಡಿ ಫೇಶಿಯಲ್
    ಬೇಸಿಗೆಯಲ್ಲಿ ತ್ವಚೆಯ ತಾಜಾತನವನ್ನು ಕಾಪಾಡಲು ಕಲ್ಲಂಗಡಿ ಫೇಶಿಯಲ್ ಮಾಡಿ
    13 hours ago
    Smoking
    ಧೂಮಪಾನದಿಂದ ಶ್ವಾಸಕೋಶಕ್ಕೆ ಮಾತ್ರವಲ್ಲ ಈ ಭಾಗಗಳಿಗೂ ಹಾನಿಯುಂಟಾಗುತ್ತದೆಯಂತೆ
    2 days ago
    Eating nitrate-rich vegetables may reduce heart attacks
    ನೈಟ್ರೇಟ್ ಭರಿತ ತರಕಾರಿಗಳನ್ನು ತಿನ್ನುವುದರಿಂದ ಹೃದಯಾಘಾತ ಕಡಿಮೆಯಾಗುತ್ತದೆಯಂತೆ
    2 days ago
    white spots on the skin
    ಚರ್ಮದ ಮೇಲಿನ ಬಿಳಿ ಕಲೆಗಳನ್ನು ತೆಗೆದುಹಾಕಲು ಈ ಮನೆಮದ್ದುಗಳನ್ನು ಹಚ್ಚಿ
    3 days ago
Reading: ಚಿತ್ರದುರ್ಗದಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ | ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಆಯೋಜನೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಚಿತ್ರದುರ್ಗದಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ | ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಆಯೋಜನೆ

News Desk Chitradurga News
Last updated: 25 April 2026 19:06
News Desk Chitradurga News
4 days ago
Share
ಸುದ್ದಿಗೋಷ್ಠಿಯಲ್ಲಿ ಶ್ವೇತಾ ಲಮಾಣಿ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಶ್ವೇತಾ ಲಮಾಣಿ ಮಾತನಾಡಿದರು
SHARE

CHITRADURGA NEWS | 25 APRIL 2026

ಚಿತ್ರದುರ್ಗ: ಸಾವಿರ ವರ್ಷಗಳಿಂದ ಕಣ್ಮರೆಯಾಗಿದೆ ಎಂದು ನಂಬಲಾಗಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನಕ್ಕಾಗಿ ಚಿತ್ರದುರ್ಗಕ್ಕೆ ತರಲಾಗುತ್ತಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ವೇತಾ ಲಮಾಣಿ ತಿಳಿಸಿದರು.

ಇದನ್ನೂ ಓದಿ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಟ್ ಆಪ್ ಲಿವಿಂಗ್ ಆಶ್ರಮದಿಂದ ಸೋಮನಾಥ ಜ್ಯೋತಿರ್ಲಿಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಮೇ 2 ರಂದು ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ಲಿಂಗಗಳನ್ನು ದರ್ಶನಕ್ಕೆ ಇಡಲಾಗುತ್ತಿದೆ.

ಈ ಅಮೂಲ್ಯ ಲಿಂಗಗಳಿಗೆ ಪ್ರಾಚೀನ ವೇದ ವಿಧಿಯಾದ ರುದ್ರಾಭಿಷೇಕ ನಡೆಯಲಿದೆ. ನಂತರ ಸತ್ಸಂಗ ನಡೆಯಲಿದೆ. ಈ ಪವಿತ್ರ ಅವಶೇಷಗಳು ಪುನಃ ಪ್ರತ್ಯಕ್ಷವಾದ ಕಥೆಯು ಭಾರತ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದೆ. 

ಕ್ರಿ.ಶ. 1026 ರಲ್ಲಿ ಘಜ್ನಿಯ ಮಹಮ್ಮದ್ ನಡೆಸಿದ ದಾಳಿಯ ಸಮಯದಲ್ಲಿ ಧ್ವಂಸಗೊಂಡು ಕಣ್ಮರೆಯಾಗಿವೆ ಎಂದು ನಂಬಲಾಗಿದ್ದ ಈ ಅವಶೇಷಗಳು, ಸಾವಿರ ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಲ್ಪಟ್ಟಿದ್ದವು ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: ಪ್ರಥಮ PUC ಪ್ರವೇಶಕ್ಕೆ ಅರ್ಜಿ ಆಹ್ವಾನ

ಈ ಅಂಶಗಳನ್ನು ದಕ್ಷಿಣ ಭಾರತಕ್ಕೆ ತಂದ ದೈವಭಕ್ತ ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರು, ಲಿಂಗಗಳ ಪ್ರಸ್ತುತ ಸಂರಕ್ಷಕರು ಲಿಂಗಗಳನ್ನು ಮತ್ತೆ ಅದರ ಪೂರ್ಣ ವೈಭವಕ್ಕೆ ಹಿಂದಿರುಗಿಸುವ ಈ ಐತಿಹಾಸಿಕ ಕ್ಷಣವನ್ನು ಮುನ್ನಡೆಸಲು ಅವರು ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ನಾಯಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರನ್ನು ಆಹ್ವಾನಿಸಿದ್ದಾರೆ.

​ಶಿವರಾತ್ರಿಯ ಶುಭ ಸಂದರ್ಭದಂದು ಮಾತನಾಡುತ್ತಾ ಗುರುದೇವರು, “ಇದು ಸಂಪೂರ್ಣ ಭಕ್ತಿಯ ವಿಷಯ. ಕರ್ನಾಟಕದಲ್ಲಿ ಜ್ಯೋತಿರ್ಲಿಂಗ ಇಲ್ಲ. ಆದರೆ, ಕರ್ನಾಟಕದಲ್ಲಿ ಶಿವನ ಮೇಲೆ ಭಕ್ತಿ ಅಪಾರವಾಗಿದೆ. ಆದ್ದರಿಂದ, ಶಿವನಿಗೂ ಕೂಡ ದೂರವಿರಲು ಸಾಧ್ಯವಾಗಲಿಲ್ಲ. ಸಾವಿರ ವರ್ಷಗಳ ನಂತರ ಸೋಮನಾಥನು ಇಲ್ಲಿಗೆ ಬಂದಿದ್ದಾನೆ” ಎಂದು ಹೇಳಿದರು.

​ಈ ಕ್ಷಣದ ಅಗಾಧವಾದ ಮಹತ್ವದ ಬಗ್ಗೆ ಗುರುದೇವರು, “ಶಿವನಿಗೆ ಐದು ಗುಣಗಳಿವೆ – ಸೃಷ್ಟಿ, ಸ್ಥಿತಿ, ಪರಿವರ್ತನೆ, ಅನುಗ್ರಹ ಮತ್ತು ತಿರೋಭಾವ (ಮರೆಯಾಗಿರುವುದು). 

ಸಾವಿರ ವರ್ಷಗಳ ಕಾಲ ಮರೆಯಾದ ನಂತರ, ಶಿವನು ಈಗ ತಾನಾಗಿ ಪ್ರಕಟಗೊಂಡಿದ್ದಾನೆ. ಈ ಪವಿತ್ರ ಲಿಂಗಗಳ ರೂಪದಲ್ಲಿ ಶಿವನ ಉಪಸ್ಥಿತಿಯು, ಅವನು ಅವಿನಾಶಿ ಎಂಬುದನ್ನು ತೋರಿಸುತ್ತದೆ. ಅವನು ಶಾಶ್ವತವಾಗಿ ಇರುತ್ತಾನೆ” ಎಂದು ಹೇಳಿದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 25 | ಹತ್ತಿ ರೇಟ್…

​ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಸ್ಥಾನವು ಅನೇಕ ಬಾರಿ ಧ್ವಂಸವಾದರೂ ಪುನಃ ಪುನಃ ನಿರ್ಮಾಣಗೊಂಡು, ಭಕ್ತಿಯ ಸ್ಥೈರ್ಯದ ಸಂಕೇತವಾಗಿದೆ. ಮೂಲ ಲಿಂಗವು ಭೂಮಿಯಿಂದ ಸುಮಾರು ಮೂರು ಅಡಿ ಎತ್ತರದಲ್ಲಿ ತೇಲುತ್ತಿತ್ತು ಹಾಗೂ ಲಕ್ಷಾಂತರ ಭಕ್ತರು ಶಿವನನ್ನು ಪೂಜಿಸಿ ಪ್ರಾರ್ಥಿಸುತ್ತಾ, ಇದಕ್ಕೆ ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ.

​2007ರಲ್ಲಿ ಈ ತುಂಡುಗಳ ಮೇಲೆ ನಡೆದ ಭೂವೈಜ್ಞಾನಿಕ ಅಧ್ಯಯನದಲ್ಲಿ ಆಶ್ಚರ್ಯಕರ ವಿಷಯವೊಂದು ಕಂಡುಬಂತು. ಸಾಮಾನ್ಯ ಅಯಸ್ಕಾಂತಗಳಿಗಿಂತ ವಿಭಿನ್ನವಾಗಿ, ಈ ಕಲ್ಲಿನ ತುಂಡುಗಳ ಮಧ್ಯಭಾಗದಲ್ಲಿ ಬಲವಾದ ಕಾಂತೀಯ ಕ್ಷೇತ್ರವಿತ್ತು. ಕಲ್ಲುಗಳಲ್ಲಿ ಕಬ್ಬಿಣದ ಪ್ರಮಾಣ ತುಂಬಾ ಕಡಿಮೆ ಇತ್ತು. ಈ ರೀತಿಯ ಕಲ್ಲಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಕೆಲವು ಪ್ರಾಚೀನ ಗ್ರಂಥಗಳು ಮತ್ತು ಸಂಶೋಧನಾ ಲೇಖನಗಳು ಇವು ಭೂಮಿಯ ಮೂಲದವುಗಳೇ ಅಲ್ಲ ಎಂಬ ಸೂಚನೆಯನ್ನು ನೀಡುತ್ತವೆ. ಈ ಲಿಂಗಗಳಲ್ಲಿರುವ ಪ್ರಬಲವಾದ ಶಕ್ತಿಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಸೋಮನಾಥನ ಕಥೆಯು ನಮ್ಮ ಸಮಾಜ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ನೆಲೆಸಿದೆ. 

ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಏ.28ರಂದು ಉಚಿತ ಗ್ಯಾಸ್ಟೊ ಶಿಬಿರ

ಚಂದ್ರ ದೇವನು ತನ್ನ ಕಷ್ಟಗಳಿಂದ ಮುಕ್ತನಾಗಲು ಶಿವನನ್ನು ಪ್ರಾರ್ಥಿಸಿದ್ದರಿಂದ ಈ ದೇವಸ್ಥಾನಕ್ಕೆ “ಸೋಮನಾಥ” ಎಂಬ ಹೆಸರು ಬಂದಿದೆ. ಚಂದ್ರನ ಪ್ರಭಾವ ಮಾನವನ ಮನಸ್ಸಿನ ಮೇಲೆ ಇರುವುದನ್ನು ಧಾರ್ಮಿಕ ಪರಂಪರೆಗಳು ಬಹುಕಾಲದಿಂದ ಗುರುತಿಸಿವೆ. ಅಶಾಂತ ಮನಸ್ಸಿಗೆ ಆಶ್ರಯಸ್ಥಾನವಾಗಿರುವ ಶಿವನು ತನ್ನ ಜಟೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವುದು, ಭಾವನೆ ಮತ್ತು ಬುದ್ಧಿಯ ಮೇಲಿನ ನಿಯಂತ್ರಣದ ಸಂಕೇತವಾಗಿದೆ ಎಂದು ವಿವರಿಸಿದರು.

ಸಂಸ್ಥೆಯ ಮಂಜುನಾಥ್ ಮಾತನಾಡಿ, ಎಲ್ಲರಿಗೂ ಇದರ ದರ್ಶನ ಸಿಗಲಿ ಎನ್ನುವ ಉದ್ದೇಶದಿಂದ ದೇಶದ ಮೂಲೆ ಮೂಲೆಗಳಿಗೂ ಜ್ಯೋತಿರ್ಲಿಂಗ ತೆಗೆದುಕೊಂಡು ಹೋಗಲಾಗುತ್ತಿದೆ. ಇದರೊಟ್ಟಿಗೆ ಆಶ್ರಮದಿಂದ ಆನಂದದ ಅನುಭೂತಿಯ ಶಿಬಿರಗಳನ್ನು ಜೊತೆಗೆ ಮಾಡಲಾಗುತ್ತಿದೆ ಎಂದರು.

ಮಕ್ಕಳು ದಿನಕ್ಕೆ 400 ಸಲ ನಗುತ್ತಾರೆ. ದೊಡ್ಡವರು ನಗುವುದನ್ನು ಕಡಿಮೆ ಮಾಡಿದ್ದಾರೆ. ಒತ್ತಡದಿಂದ ಸಿಟ್ಟು ಸೆಡವಿನಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಮ್ಮೊಳಗೆ‌ ನಾವು ಸಂಚಾರ ಮಾಡಿ ಯೋಗ, ಪ್ರಾಣಾಯಾಮ, ಧ್ಯಾನ ಮಾಡಿಸಲಾಗುತ್ತಿದೆ.

ಡಾ.ರವಿಚಂದ್ರ ಮಾತನಾಡಿ, ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ, ಒತ್ತಡ ಇತ್ತೀಚೆಗೆ ಹೆಚ್ಚಾಗುತ್ತಿದೆ.‌ ಇದರ ನಿವಾರಣೆಗೆ ಧ್ಯಾನ ಮಾಡಬೇಕು ಎನ್ನುವುದು ಸಾಮಾನ್ಯ. ಇದನ್ನು ರವಿಶಂಕರ್ ಗುರೂಜಿ ಸುಲಭವಾಗಿ ಅರ್ಥವಾಗಲು ಪ್ಯಾಕೇಜ್ ಮಾದರಿಯಲ್ಲಿ ಕಲಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದನ್ನು ಕಲಿತು ಅನುಸರಿಸುವುದರಿಂದ ಜೀವನದ ಉತ್ಪಾಧಕತೆ ಹೆಚ್ಚಾಗುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ: ನಾಯಕನಹಟ್ಟಿ ಹಟ್ಟಿ ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ 80.84 ಲಕ್ಷ ಸಂಗ್ರಹ 

ಸುದ್ದಿಗೋಷ್ಠಿಯಲ್ಲಿ ಡಾ.ರವಿಚಂದ್ರ,‌ ಶ್ವೇತಾ ಲಮಾಣಿ, ಶಿಕ್ಷಕ ರಾಜಶೇಖರ್, ಸಮಿತಿ ಮುಖ್ಯಸ್ಥ ಮಹಾಂತೇಶ್, ಅರವಿಂದ್, ಮಲ್ಲಿಕಾರ್ಜುನ್, ಪ್ರಾಜೆಕ್ಟ್ ಭಾರತ್ ಕರ್ನಾಟಕ ಮುಖ್ಯಸ್ಥ ಮಂಜುನಾಥ್ ಇದ್ದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಜ್ಯೋತಿರ್ಲಿಂಗ ದರ್ಶನ:

ಮೇ.2 ರಂದು ಚಿತ್ರದುರ್ಗದ ಮೆದೇಹಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣ. ಮೇ.3 ಹೊಸದುರ್ಗದ ಅಶೋಕ ರಂಗಮಂದಿರದಲ್ಲಿ ಬೆಳಗ್ಗೆ 7.30 ರಿಂದ 11.30 ರವರೆಗೆ. ಹಾಗು ಸಂಜೆ 5 ರಿಂದ 7 ಗಂಟೆವರೆಗೆ. ಮೇ. 4ರಂದು ಚಳ್ಳಕೆರೆ ಬಿಎಂಜಿಎಚ್ಎಸ್ ಶಾಲಾ ಆವರಣದಲ್ಲಿ ಬೆಳಗ್ಗೆ 7.39 ರಿಂದ 10 ಗಂಡೆವರೆಗೆ. ಮೇ.4 ರಂದು ನಾಯಕನಹಟ್ಟಿ ಶ್ರೀ ತಿಪ್ಒಏರುದ್ರಸ್ವಾಮಿ ದೇವಾಲಯ ಹೊರಮಠದಲ್ಲಿ ಸಂಜೆ 4 ರಿಂದ 7 ರವರೆಗೆ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsJyotirlinga Darshanಚಿತ್ರದುರ್ಗಚಿತ್ರದುರ್ಗ ನ್ಯೂಸ್ಜ್ಯೋತಿರ್ಲಿಂಗ ದರ್ಶನ
Share This Article
Facebook Email Print
Previous Article ಅರ್ಜಿ ಅಹ್ವಾನ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
Next Article ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ, ಗೋಧಿ ಜಪ್ತಿ ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ, ಗೋಧಿ ಜಪ್ತಿ
Leave a Comment

Leave a Reply Cancel reply

Your email address will not be published. Required fields are marked *

ಸಿಎಂ ಭೇಟಿಯಾದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಸಿಎಂ ಭೇಟಿಯಾದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) | ಚಿತ್ರದುರ್ಗದ 8 ಕೆರೆಗಳಿಗೆ ಭದ್ರ ನೀರು ಹರಿಸುವಂತೆ ಮನವಿ
ಮುಖ್ಯ ಸುದ್ದಿ
ಬಿಎಸ್‌ವೈ ಅಭಿಮಾನೋತ್ಸ
ಅಭಿಮಾನೋತ್ಸವಕ್ಕೆ ಬರಲಿದೆ ಬಿಎಸ್‌ವೈ ಅಂಬಾಸೀಡರ್‌
ಮುಖ್ಯ ಸುದ್ದಿ
arecanut price list
ಅಡಿಕೆ ಧಾರಣೆ | 29 ಏಪ್ರಿಲ್‌ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ವಹಿವಾಟು ವಿವರ
ಅಡಕೆ ಧಾರಣೆ
ಡಿಪ್ಲೊಮಾ ಪ್ರವೇಶಕ್ಕೆ ವಿಶೇಷಚೇತನರಿಂದ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up