CHITRADURGA NEWS | 29 APRIL 2026
ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಸಂಚಾರ ಮಾಡಿದ ಅಂಬಾಸೀಡರ್ ಕಾರು ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಇದನ್ನೂ ಓದಿ: BVA ಪದವಿ ಪ್ರವೇಶ | ಅರ್ಜಿ ಅಹ್ವಾನ
ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ ತೆರಳುವ ವೇಳೆ ಕಾರ್ಯಕ್ರಮ ಸಿದ್ಧತೆ ಕುರಿತ ಪರಿಶೀಲನೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ ಪಾದಯಾತ್ರೆ, ಸೈಕಲ್ ಯಾತ್ರೆ ಮೂಲಕ ರಾಜ್ಯ ಸುತ್ತಿ ಹೋರಾಟ ನಡೆಸಿದವರು. ಕೊನೆಗೆ ಬಹು ದಿನಗಳವರೆಗೆ ಅವರ ಸಂಗಾತಿಯಾಗಿದ್ದು ಅವರ ನೆಚ್ಚಿನ ಅಂಬಾಸಿಡರ್ ಕಾರು. ಈಗಲೂ ಸುಸ್ಥಿತಿಯಲ್ಲಿದ್ದು, ಶಿಖಾರಿಪುರದ ಮನೆಯಲ್ಲಿದೆ.
ಅಭಿಮಾನೋತ್ಸವಕ್ಕೆ ಬಿಎಸ್ವೈ ಬಳಸುತ್ತಿದ್ದ, ಕಾರ್ಯಕರ್ತರಿಗೆ ಅಚ್ಚುಮೆಚ್ಚಾಗಿದ್ದ ಅಂಬಾಸಿಡರ್ ಕಾರು ಕೂಡಾ ಬರಲಿದೆ ಎನ್ನುವ ಸುದ್ದಿಯನ್ನು ರಾಜ್ಯಧ್ಯಕ್ಷರಾದ ವಿಜಯೇಂದ್ರ ಕೊಟ್ಟಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | 29 ಏಪ್ರಿಲ್ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ವಹಿವಾಟು ವಿವರ
ಇದೇ ವೇಳೆ ಮುಂದುವರೆದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದವರು. ಅವರು ಅದೃಷ್ಟದ ಮುಖ್ಯಮಂತ್ರಿ ಆಗಿರಲಿಲ್ಲ. ಜನತೆ ಅವರಲ್ಲಿನ ಕಾಳಜಿ ಹಾಗೂ ನಾಯಕತ್ವದ ಗುಣ ಗುರುತಿಸಿ ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋದವರು. ಪರಿಶ್ರಮದಿಂದ ಜನರ ಬಲದಿಂದ ಬೆಳೆದವರು ಎಂದರು.
ಯಡಿಯೂರಪ್ಪ ಅವರ ಹೋರಾಟ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆ. ಅವರ ಐವತ್ತು ವರ್ಷಗಳ ರಾಜಕೀಯ ಜೀವನದ ಸ್ಮರಣೆಯನ್ನು ನಾಡಿನ ಗುರುಹಿರಿಯರ ಸಮ್ಮುಖದಲ್ಲಿ ಅಭಿಮಾನೋತ್ಸವವಾಗಿ ಆಯೋಜನೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಎಸ್ವೈ ಅಭಿಮಾನೋತ್ಸವಕ್ಕೆ ಆಯ್ಕೆ ಮಾಡಿರುವ ಚಿತ್ರದುರ್ಗ ರಾಜ್ಯದ ಕೇಂದ್ರ ಪ್ರದೇಶ ಹಾಗೂ ಬಿಎಸ್ವೈ ಆಪ್ತರಾಗಿರುವ ಗೋವಿಂದ ಕಾರಜೋಳ ಅವರು ಇಲ್ಲಿ ಸಂಸದರಾಗಿರುವ ಕಾರಣಕ್ಕೆ ಚಿತ್ರದುರ್ಗ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಡಿಪ್ಲೊಮಾ ಪ್ರವೇಶಕ್ಕೆ ವಿಶೇಷಚೇತನರಿಂದ ಅರ್ಜಿ ಆಹ್ವಾನ
ಈಗಾಗಲೇ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಪ್ರಮುಖ ಸಭೆ ಹೊಸಪೇಟೆಯಲ್ಲಿ ನಡೆಯಿತು. ನಿರೀಕ್ಷೆ ಮೀರಿದ ಬೆಂಬಲ ಸಿಕ್ಕಿದೆ. ಈ ಮೂರು ಜಿಲ್ಲೆಗಳಿಂದಲೇ ಒಂದೂವರೆ ಲಕ್ಷ ಜನ ಆಗಮಿಸಲಿದ್ದಾರೆ. ಉಕ್ಕಿನ ಮನುಷ್ಯ ಎಂದೇ ಹೆಸರಾಗಿರುವ ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಅವರು ಬಿಎಸ್ವೈ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ನಾಡಿನ ಹಲವು ಜಗದ್ಗುರುಗಳ ಸಮ್ಮುಖದಲ್ಲಿ ಭವ್ಯವಾದ ಕಾರ್ಯಕ್ರಮ ನಡೆಯಲಿದೆ ಎಂದರು.
ನಾಡಿನ ಎಲ್ಲ ಹಿರಿಯರು, ಗುರುಗಳ ಹಾಗೂ ಅಭಿಮಾನಿಗಳ ಬೆಂಬಲದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಪಕ್ಷಾತೀತವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

