ಕ್ರೈಂ ಸುದ್ದಿ
ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿ | ಚಾಲಕನಿಗೆ ಗಂಭಿರ ಗಾಯ

Published on
CHITRADURGA NEWS | 14 JANUARY 2024
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ.
ಚಿತ್ರದುರ್ಗ ತಾಲೂಕಿನ ಬಹದ್ದೂರ್‍ಘಟ್ಟ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅಪಾಯವೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಟೈಗರ್ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು..!
ಅಪಘಾತದಲ್ಲಿ ತಿಪಟೂರು ಮೂಲದ ಲಾರಿ ಚಾಲಕ ರುದ್ರೇಶ್ ಎನ್ನುವವರಿಗೆ ಗಂಭಿರ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಲ್ಟಿಯಾದ ಲಾರಿಯಲ್ಲಿ 342 ಸಿಲಿಂಡರ್‍ಗಳು ತುಂಬಿದ್ದವು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಭರಮಸಾಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Continue Reading
Related Topics:Bharamasagar, Chitradurga, Cylinder, Lorry, Palti, ಚಿತ್ರದುರ್ಗ, ಪಲ್ಟಿ, ಭರಮಸಾಗರ, ಲಾರಿ, ಸಿಲಿಂಡರ್

Click to comment