ಮುಖ್ಯ ಸುದ್ದಿ
ಮಗುವಿನ ಹಂತಕಿ ಸುಚನಾ ಪ್ರಯಾಣಿಸುತ್ತಿದ್ದ ಕಾರು ಚಾಲಕ ಐಮಂಗಲ ಪೊಲೀಸ್ ಠಾಣೆ ಹುಡುಕಿದ್ದೇಗೆ ಗೊತ್ತಾ..?

CHITRADURGA NEWS | 14 JANUARY 2024
ಚಿತ್ರದುರ್ಗ: ಗೋವಾದ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ 4 ವರ್ಷದ ತನ್ನ ಮಗುವನ್ನೇ ಹತ್ಯೆ ಮಾಡಿದ ಬಳಿಕ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣಿ ಬೆಳೆಸಿದ ಸುಚನಾ ಕೂಡಾ ಮೊದಲ ಬಾರಿಗೆ ಆಕೆ ಪ್ರಯಾಣಿಸುತ್ತಿದ್ದ ಕಾರು ಚಾಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸುಚನಾ ಸೇಠ್ ಗೋವಾದಲ್ಲಿ ಕಾರು ಹತ್ತಿದ ಕ್ಷಣದಿಂದ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆ ಬಳಿ ಬಂದು ನಿಲ್ಲುವವರೆಗೆ ಆಕೆಯ ಮನಸ್ಥಿತಿ ಹೇಗಿತ್ತು, ತಾನು ಹೇಗೆ ಪೊಲೀಸ್ ಠಾಣೆ ಹುಡುಕಿದೆ ಎನ್ನುವ ಮಾಹಿತಿಯನ್ನು ಕಾರು ಚಾಲಕ ರೇ ಜಾನ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರೇ ಜಾನ್ ಕಾರಿನಲ್ಲಿ ಸುಚನಾ ಸತತ ಹತ್ತು ಗಂಟೆ ಪ್ರಯಾಣ ಬೆಳೆಸಿದ್ದಾರೆ. ಇಷ್ಟೂ ಹೊತ್ತು ಆಕೆ ಮೌನವಾಗಿ, ಅನ್ಯಮನಸ್ಕಳಾಗಿ ಕುಳಿತು ಪ್ರಯಾಣಿಸಿದ್ದಾರೆ.
ಬೆಂಗಳೂರಿಗೆ ತೆರಳಲು ಗೋವಾದಲ್ಲಿ ಕಾರು ಬುಕ್ ಮಾಡಿದ ನಂತರ ಅಪಾರ್ಟ್‍ಮೆಂಟ್ ಬಳಿ ರೇ ಜಾನ್ ತಮ್ಮ ಕಾರು ತಂದು ನಿಲ್ಲಿಸಿದ್ದಾರೆ. ಈ ವೇಳೆ ರಿಸೆಪ್ಶನ್‍ನಲ್ಲಿದ್ದ ಸುಚನಾ ಸೇಠ್, ಸೂಟ್‍ಕೇಸ್ ಕಾರಿನಲ್ಲಿಡಲು ಮನವಿ ಮಾಡಿದ್ದಾರೆ.
ಅದೇ ಸೂಟ್‍ಕೇಸ್‍ನಲ್ಲಿ ಆಕೆಯ ಮಗು(ಚಿನ್ಮಯ್) ಮೃತ ದೇಹವಿದೆ. ಬಹಳ ಭಾರ ಇದ್ದ ಕಾರಣಕ್ಕೆ ರೇ ಜಾನ್, ಇದರಲ್ಲಿರುವ ಕೆಲ ವಸ್ತುಗಳನ್ನು ಹೊರಗೆ ತೆಗೆದರೆ ಕೊಂಡೊಯ್ಯಲು ಅನುಕೂಲ ಎಂದಿದ್ದಾರೆ. ತಕ್ಷಣ ಆಕೆ, ಬೇಡ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ. ಕೊನೆಗೆ ಸೂಟ್‍ಕೇಸ್ ಎಳೆದುಕೊಂಡು ಹೋಗಿ ಕಾರಿಗೆ ಹಾಕಿದ್ದಾರೆ.
ಇನ್ನೂ ಕಾರು ಕರ್ನಾಟಕ-ಗೋವಾ ಗಡಿ ಚೋರ್ಲಾ ಘಾಟ್‍ನಲ್ಲಿ ಭಾರೀ ಸಂಚಾರ ದಟ್ಟಣೆ ಇದ್ದ ಕಾರಣಕ್ಕೆ 6 ಗಂಟೆ ರಸ್ತೆಯಲ್ಲೇ ಕಳೆಯಬೇಕಾಯಿತು. ಈ ವೇಳೆ ಚಾಲಕ ರೇ ಜಾನ್, ನೀವು ವಿಮಾನದಲ್ಲಿ ಹೋಗಿದ್ದರೆ ಸುಲಭವಾಗಿ ತಲುಬಹುದಿತ್ತು. ಖರ್ಚು ಕಡಿಮೆಯಾಗುತ್ತಿತ್ತು ಎಂದಿದ್ದಾರೆ. ಆದರೆ, ಸುಚನಾ ಇಲ್ಲ ರಸ್ತೆ ಮಾರ್ಗದಲ್ಲೇ ಹೋಗೋಣ ಎಂದು ಬಲವಂತ ಮಾಡಿದ್ದಾರೆ. ಈ ಸಂದರ್ಭದಲ್ಲಿ ತುಸು ಅನುಮಾನ ಮೂಡಿತ್ತು.
ಆನಂತರ ಕೆಲ ಹೊತ್ತಿನಲ್ಲಿ ಟ್ರಾಫಿಕ್ ಕಡಿಮೆಯಾಗಿ ಮುಂದೆ ಚಲಿಸುತ್ತಿದ್ದಾಗ ಗೋವಾ ಪೊಲೀಸರಿಂದ ಪೋನ್ ಬಂತು. ಪೊಲೀಸರು ನನ್ನ ಜೊತೆಗೆ ಕೊಂಕಣಿಯಲ್ಲಿ ಮಾತನಾಡಿದ್ದರಿಂದ ಸುಚನಾ ಅವರಿಗೆ ಅನುಮಾನ ಬರಲಿಲ್ಲ.
ಇದನ್ನೂ ಓದಿ: ಕಂದನ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ಮಹಾತಾಯಿ
ಜಿಪಿಎಸ್ ಮೂಲಕ ಪೊಲೀಸ್ ಠಾಣೆ ಹುಡುಕಾಡಿದೆ:
ಗೋವಾ ಪೊಲೀಸರಿಂದ ಬಂದ ಸೂಚನೆಯಂತೆ ಚಾಲಕ ರೇ ಜಾನ್ ಹತ್ತಿರದಲ್ಲಿ ಪೊಲೀಸ್ ಠಾಣೆ ಹುಡುಕಾಡಿದ್ದಾರೆ. ಹಿಂದೆ ಕುಳಿತಿದ್ದ ಸುಚನಾಗೆ ಅನುಮಾನ ಬಾರದಂತೆ ಮೊಬೈಲ್‍ನಲ್ಲಿ ಜಿಪಿಎಸ್ ಮೂಲಕ ಹತ್ತಿರದಲ್ಲಿನ ಪೊಲೀಸ್ ಠಾಣೆ ಹುಡುಕಿದಾಗ ಯಾವುದೂ ಕಾಣಲಿಲ್ಲ.
ಮುಂದೆ ಟೋಲ್ ಪ್ಲಾಜಾದಲ್ಲಿ ಯಾರಾದರೂ ಪೊಲೀಸರು ಸಿಕ್ಕಬಹುದು ಎಂದು ಹಾಗೇ ಮುಂದೆ ಬಂದರೆ, ಅಲ್ಲಿಯೂ ಕಾಣಲಿಲ್ಲ.
ತುಸು ವಿಶ್ರಮಿಸುವ ನೆಪದಲ್ಲಿ ಹೆದ್ದಾರಿ ಬದಿಯ ರೆಸ್ಟೋರೆಂಟ್ ಬಳಿ ಕಾರು ನಿಲ್ಲಿಸಿದೆ. ಆಗ ಜಿಪಿಎಸ್ ಮ್ಯಾಪ್‍ನಲ್ಲಿ ಪೊಲೀಸ್ ಠಾಣೆ ಹುಡುಕಲು ಹೆಚ್ಚು ಅವಕಾಶ ಸಿಕ್ಕಿತು. 500 ಮೀಟರ್ ಮುಂದೆ ಪೊಲೀಸ್ ಠಾಣೆ ಇದೆ ಎಂದು ಮ್ಯಾಪ್ ತೋರಿಸಿತು.
ಇದನ್ನೂ ಓದಿ: ಮಗನನ್ನು ಮುದ್ದಾಡಿ ಬಿಕ್ಕಿ ಬಿಕ್ಕಿ ಅತ್ತ ವೆಂಕಟರಾಮನ್
ಇಲ್ಲಿಂದ ಬೆಂಗಳೂರು ಇನ್ನೂ ಒಂದೂವರೆ ಗಂಟೆ ಪ್ರಯಾಣವಿತ್ತು ಎಂದು ರೇ ಜಾನ್ ವಿವರಿಸಿದ್ದಾರೆ.
ಅಲ್ಲಿಂದ ಮುಂದೆ ಹೋದಾಗ ಪೊಲೀಸ್ ಠಾಣೆ ಕಾಣಿಸಿತು. ಸರ್ವೀಸ್ ರಸ್ತೆ ಮೂಲಕ ಠಾಣೆ ಮುಂದೆ ಹೋಗಿ ನಿಂತರೆ ಅದು ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆಯಾಗಿತ್ತು. ಇಷ್ಟೂ ಹೊತ್ತು ಗೋವಾದ ಪೊಲೀಸರು ನನ್ನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು.
ಐಮಂಗಲ ಪೊಲೀಸ್ ಠಾಣೆ ಬಳಿ ಕಾರು ನಿಂತಾಗಲೂ ಸುಚನಾ ಸೇಠ್ ಏನು ಪ್ರತಿಕ್ರಿಯೆ ನೀಡದೇ ಶಾಂತವಾಗಿ ಕುಳಿತಿದ್ದರು.

ಸುಚನಾ ಸೇಠ್
ಕಾರಿನ ಬಳಿ ಬಂದ ಐಮಂಗಲ ಪೊಲೀಸರು ಸುಚನಾ ಅವರನ್ನು ಮಾತನಾಡಿಸಿ, ಕಾರು ತಪಾಸಣೆ ಮಾಡಿದರು. ಭಾರವಿದ್ದ ಸೂಟ್‍ಕೇಸ್ ತೆರೆದು ನೊಡಿದಾಗ ಮಗುವಿನ ಮೃತದೇಹವಿತ್ತು. ಈ ಮಗು ನಿಮ್ಮದಾ ಎಂದು ಪೊಲೀಸರು ಪ್ರಶ್ನಿಸಿದಾಗಲೂ ಸುಚನಾ ಸೇಠ್ ಶಾಂತವಾಗಿ ಹೌದು ಎಂದು ಉತ್ತರಿಸಿದರು. ಆಗ ಪೊಲೀಸರು ವಶಕ್ಕೆ ಪಡೆದುಕೊಂಡರು.
ಆನಂತರ ಸ್ಥಳಕ್ಕೆ ಗೋವಾ ಪೊಲೀಸರು ಬಂದು ಆಕೆಯನ್ನು ಬಂಧಿಸಿ ಕರೆತಂದರು.
ಐದು ವಾರಗಳಿಂದ ಮಗು ಜೊತೆ ಮಾತನಾಡಲು ಬಿಟ್ಟಿರಲಿಲ್ಲ:
ಮತ್ತೊಂದೆಡೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಂತರ ಮಗುವಿನ ತಂದೆ ವೆಂಕಟರಾಮನ್ ಮಗುವನ್ನು ಬೆಂಗಳೂರಿಗೆ ಕರೆದೊಯ್ದು ಅಂತ್ಯಸಂಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಟೈಗರ್ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು..!
ಆನಂತರ ಸುಚನಾ ಸೇಠ್ ತನಿಖೆಯ ಭಾಗವಾಗಿ ಗೋವಾಕ್ಕೆ ತೆರಳಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಈ ವೇಳೆ ಕಳೆದ ಐದು ಭಾನುವಾರಗಳಿಂದ ಮಗುವಿನ ಜೊತೆಗೆ ಮಾತನಾಡಲು ನನಗೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
